Advertisement
ಇದು ನಿಮ್ಮಲ್ಲಿ ಅನೇಕರಿಗೆ ತಿಳಿದಿರಬಹುದಾದ ಸಾಮಾನ್ಯ ಮಾಹಿತಿಗಳು. ಆದರೆ ದೇಹದ ಸಮತೋಲನವನ್ನು ಕಾಪಾಡುವ ಅಂಗವು ಕಿವಿಯ ಒಳಗಿದೆ ಎಂಬುದು ನಿಮಗೆ ತಿಳಿದಿದೆಯೇ?
Related Articles
Advertisement
ತಲೆತಿರುಗುವಿಕೆಯ ಗುಣಲಕ್ಷಣ, ತೀವ್ರತೆ ಮತ್ತು ಸಹಲಕ್ಷಣಗಳ ಸಹಿತ ತಲೆತಿರುಗುವಿಕೆ ಎಷ್ಟು ಬಾರಿ ಉಂಟಾಗುತ್ತದೆ ಮತ್ತು ಅದರ ತೀಕ್ಷ್ಣತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವೊಮ್ಮೆ ಲಕ್ಷಣಗಳು ಸರಣಿಗಳಾಗಿ ಉಂಟಾಗಬಹುದಾಗಿದ್ದು, ಇದನ್ನು ಗಮನಿಸಬೇಕಾಗಿರುತ್ತದೆ. ಸುದೀರ್ಘ ಕಾಲದ ವರೆಗೆ ತಲೆ ತಿರುಗುವಿಕೆ ಇದ್ದರೆ ದೈನಿಕ ಚಟುವಟಿಕೆಗಳಿಗೆ ತೊಂದರೆಯಾಗಬಹುದು, ಸಂವೇದನೆ, ಗ್ರಹಣ ಶಕ್ತಿಯಲ್ಲಿ ಕುಸಿತವಾಗಬಹುದು, ಬೀಳಬಹುದು ಮತ್ತು ಖನ್ನತೆಯೂ ಉಂಟಾಗಬಹುದು. ವಯೋವೃದ್ಧರಿಗೆ ಸಮತೋಲನದ ಸಮಸ್ಯೆಯಿಂದಾಗಿ ಬೀಳುವ ಅಪಾಯ ಹೆಚ್ಚು. ಒಳಕಿವಿಯ ಸಮತೋಲನಕ್ಕೆ ಸಂಬಂಧಿಸಿದ ಭಾಗಗಳಲ್ಲಿ ಎಲ್ಲಿ ಹಾನಿಯಾಗಿದೆ ಅಂದರೆ, ಕಿವಿಯ ಮಟ್ಟದಲ್ಲಿಯೇ ಇದೆಯೇ ಅಥವಾ ಮಿದುಳಿನ ಮಟ್ಟದಲ್ಲಿದೆಯೇ ಎಂಬುದನ್ನು ಆಧರಿಸಿ ತೊಂದರೆಯನ್ನು ಪೆರಿಫರಲ್ ಅಥವಾ ಸೆಂಟ್ರಲ್ ಡಿಸ್‌ಫಂಕ್ಷನ್ ಎಂಬುದಾಗಿ ವರ್ಗೀಕರಿಸಲಾಗುತ್ತದೆ.
ನನಗೆ ಈ ತೊಂದರೆ ಉಂಟಾದರೆ ಏನು ಮಾಡಬೇಕು?:
ನನಗೆ ಈ ತೊಂದರೆ ಉಂಟಾದರೆ ಏನು ಮಾಡಬಹುದು ಎಂಬ ಪ್ರಶ್ನೆ ಈಗ ನಿಮ್ಮಲ್ಲಿ ಉದ್ಭವಿಸಿರಬಹುದು. ಈ ಸಮಸ್ಯೆಯನ್ನು ಪರಿಹರಿಸಲು ಬಹು ವೈದ್ಯಕೀಯ ವಿಭಾಗಗಳ ತಂಡದ ಮೂಲಕ ನಿರ್ವಹಿಸುವುದು ತುಂಬಾ ಪ್ರಯೋಜನಕಾರಿಯಾಗಬಲ್ಲುದು. ಇದರಲ್ಲಿ ಜನರಲ್ ಮೆಡಿಸಿನ್, ನ್ಯೂರಾಲಜಿ, ಇಎನ್‌ಟಿ, ಆಡಿಯಾಲಜಿ, ಫಿಸಿಯೋಥೆರಪಿ, ಆಕ್ಯುಪೇಶನ್ ಥೆರಪಿ ಮತ್ತು ಆಪ್ತಮಾಲಜಿ ವಿಭಾಗಗಳು ಇದರಲ್ಲಿ ಸೇರಿಕೊಳ್ಳಬೇಕು. ರೋಗ ಪತ್ತೆಯನ್ನು ಆಧರಿಸಿ, ವೈದ್ಯರ ಜತೆಗೆ ಸಮಾಲೋಚನೆ
ನಡೆಸಿ ತಕ್ಕ ನಿರ್ವಹಣ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ. ಒಳ ಕಿವಿಯ ಕಾರ್ಯಸಾಮರ್ಥ್ಯವನ್ನು ಪರಿಶೀಲಿಸುವಲ್ಲಿ ಆಡಿಯಾಲಜಿಸ್ಟ್‌ಗಳು ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು, ಶ್ರವಣ ಶಕ್ತಿ ವಿಶ್ಲೇಷಣೆಯನ್ನು, ಆ ಬಳಿಕ ಸಮತೋಲನ ವಿಶ್ಲೇಷಣೆಯನ್ನು ನಡೆಸುತ್ತಾರೆ. ರೋಗ ಪತ್ತೆಯನ್ನು ಆಧರಿಸಿ ಆಡಿಯೋ -ವೆಸ್ಟಿಬ್ಯುಲರ್ ಸ್ಪೆಶಲಿಸ್ಟ್ ವೈದ್ಯರು ವೆಸ್ಟಿಬ್ಯುಲರ್ ರಿಹ್ಯಾಬಿಲಿಟೇಶನ್ ಥೆರಪಿಯನ್ನು ಒದಗಿಸುತ್ತಾರೆ. ವೆಸ್ಟಿಬ್ಯುಲರ್ ಥೆರಪಿಯಲ್ಲಿ ಪರಿಹಾರ ಮತ್ತು ಹೊಂದಿಕೊಳ್ಳುವಿಕೆಗೆ ಸಹಾಯ ಮಾಡುವ ವಿವಿಧ ದೈಹಿಕ ಚಟುವಟಿಕೆಗಳು ಒಳಗೊಂಡಿರುತ್ತವೆ. ಇದೊಂದು ಲಕ್ಷಣ-ಆಧಾರಿತ ಚಿಕಿತ್ಸೆಯಾಗಿದ್ದು, ಆಯಾ ರೋಗಿಯ ಆವಶ್ಯಕತೆ ಮತ್ತು ಪ್ರಯೋಜನವನ್ನು ಆಧರಿಸಿರುತ್ತದೆ.
ಸೆ. 19-25: ಸಮತೋಲನ ಅರಿವು ಸಪ್ತಾಹ:
ವೆಸ್ಟಿಬ್ಯುಲರ್ ಡಿಸಾರ್ಡರ್ ಯಾವುದೇ ವಯಸ್ಸಿನಲ್ಲಿ ಲಿಂಗಬೇಧವಿಲ್ಲದೆ ಕಾಡಬಹುದಾದ ಒಂದು ಸಮಸ್ಯೆಯಾಗಿದೆ. ವೆಸ್ಟಿಬ್ಯುಲರ್ ಡಿಸಾರ್ಡರ್ ಅಸೋಸಿಯೇಶನ್ ಪ್ರತೀ ವರ್ಷ ಸೆಪ್ಟಂಬರ್ 19ರಿಂದ 25ರ ವರೆಗೆ ಒಂದು ವಾರ ಕಾಲ ಅಂತಾರಾಷ್ಟ್ರೀಯ ಸಮತೋಲನ ಅರಿವು ಸಪ್ತಾಹವನ್ನು ಆಚರಿಸುತ್ತದೆ. ವೆಸ್ಟಿಬ್ಯುಲರ್ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸಿ ರೋಗಿಗಳು ಸಮತೋಲನ ಹೊಂದುವತ್ತ ಮುನ್ನಡೆಯಲು ಸಹಾಯ ಮಾಡುವುದಕ್ಕಾಗಿ ಈ ಸಪ್ತಾಹವನ್ನು ಉಪಯೋಗಿಸಲಾಗುತ್ತದೆ. ಈ ಸಪ್ತಾಹ ಸಂದರ್ಭದಲ್ಲಿ ಅಲ್ಲಲ್ಲಿ ಈ ಬಗ್ಗೆ ಅರಿವು ಹುಟ್ಟಿಸುವ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಈ ಸಪ್ತಾಹ ಆಚರಣೆ ಯಾಕೆ ಮುಖ್ಯ ಎಂಬುದನ್ನು ವಿವರಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.
ಅನುಪ್ರಿಯಾ ಇ.
ಕ್ಲಿನಿಕಲ್ ಸೂಪರ್‌ವೈಸರ್ (ಆಡಿಯಾಲಜಿ)
ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ,
ಕೆಎಂಸಿ, ಮಂಗಳೂರು