ನ್ಯೂಯಾರ್ಕ್: ಮುಂದಿನ ವರ್ಷದಿಂದ ನ್ಯೂಯಾರ್ಕ್ ನಗರದ ಸರ್ಕಾರಿ ಶಾಲೆಗಳಿಗೆ ದೀಪಾವಳಿಯಂದು ರಜೆ ನೀಡಲಾಗುತ್ತದೆ.
ಹೀಗೊಂದು ಮಹತ್ವದ ಘೋಷಣೆಯನ್ನು ನ್ಯೂಯಾರ್ಕ್ ಮೇಯರ್ ಎರಿಕ್ ಆ್ಯಡಮ್ಸ್ ಮಾಡಿದ್ದಾರೆ.
ನ್ಯೂಯಾರ್ಕ್ ಶಾಸನಸಭೆ ಸದಸ್ಯೆ ಜೆನಿಫರ್ ರಾಜ್‌ಕುಮಾರ್ ಈ ನಿರ್ಣಯದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ದೀಪಾವಳಿಗೆ ಈ ರಜೆ ನೀಡುವುದಕ್ಕಾಗಿ ಜೂ.1ಕ್ಕೆ ನೀಡುತ್ತಿದ್ದ ರಜೆಯನ್ನು ರದ್ದು ಮಾಡಿದೆ. ಅದರ ಬದಲು ದೀಪಾವಳಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ.
ಬ್ರೂಕ್ಲಿನ್-ಕ್ವೀನ್ಸ್ ಡೇ ಎಂದೇ ಕರೆಸಿಕೊಳ್ಳುತ್ತಿದ್ದ ವಾರ್ಷಿಕ ದಿನಾಚರಣೆಯನ್ನು 1829ರಿಂದಲೇ ನಡೆಸಲಾಗುತ್ತಿದೆ. ಆದರೆ ಈಗಿನ ತಲೆಮಾರಿಗೆ ಅದರ ಪರಿಚಯವಿಲ್ಲ.
ಹಾಗಾಗಿ ನ್ಯೂಯಾರ್ಕ್ ನಗರದ 2 ಲಕ್ಷ ಭಾರತೀಯ ಮೂಲದ ವ್ಯಕ್ತಿಗಳು ಆಚರಿಸುವ ದೀಪಾವಳಿಗೆ ರಜೆ ನೀಡಲು ನಿರ್ಧರಿಸಲಾಗಿದೆ.