Advertisement

ದೀಪಾವಳಿ: ಹಬ್ಬದಾಚರಣೆಗೆ ಹಲವು ನೆಪ!

10:00 AM Nov 03, 2021 | Team Udayavani |

ದೀಪಾವಳಿ ಎಂದಾಕ್ಷಣ ನೆನಪಾಗುವುದು ಉರಿಯುವ ದೀಪ, ಪೂಜೆ, ಪಟಾಕಿ ಸದ್ದು, ಜೊತೆಗೆ ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ, ಕಣ್ಣಿಗೆ ಮುದ ನೀಡುವ ಗೂಡು ದೀಪಗಳು. ಹಬ್ಬದ ವಾತಾವರಣ ಕತ್ತಲೆಯಿಂದ ಬೆಳಕಿನೆಡೆಗೆ… ಅಜ್ಞಾನದಿಂದ ಜ್ಞಾನದೆಡೆಗೆ ಸಾಗುತ್ತಾ, ಸದಾ ಉರಿಯುತ್ತಾ ಎಲ್ಲರ ಪಾಲಿನ ಬೆಳಕಾಗಬೇಕು ಎಂಬ ಸಂದೇಶ ಸಾರುತ್ತದೆ.

Advertisement

ದೀಪಾವಳಿ ಎಂದರೆ ಮತ್ತೆ ನೆನಪಾಗುವುದು ನಮ್ಮ ಬಾಲ್ಯ ಹಾಗೂ ನಮ್ಮ ಹಾಸ್ಟೆಲ್ ದಿನಗಳು. ಹಾಸ್ಟೆಲ್ ನಲ್ಲಿದ್ದಾಗಿನ ಸಂಭ್ರಮವನ್ನು ಎಷ್ಟೇ ವರ್ಷ ಕಳೆದರೂ ಮರೆಯಲಾಗದು. ಪಟಾಕಿ ಇಲ್ಲದಿದ್ದರೂ ನಮ್ಮ ಇಡೀ ಕಟ್ಟಡಕ್ಕೆ ಮಾಡುತ್ತಿದ್ದ ದೀಪದ ಅಲಂಕಾರವನ್ನು ನೋಡುವುದೇ ಅದ್ಭುತವಾಗಿತ್ತು. ಆ ಸಂಭ್ರಮದ ಜೊತೆಗೆ ತುಳಸಿ ಪೂಜೆಯ ದಿನ ಶ್ರೀದೇವಿಯ ಪೂಜೆ ಹಾಸ್ಟೆಲ್ನಲ್ಲಿ ಹಬ್ಬದ ವಾತಾವರಣ ಮೂಡಿಸುತ್ತಿತ್ತು. ನಮ್ಮಲ್ಲಿ ಸಂತೋಷ, ಸಂಭ್ರಮ ತರುವ ದೀಪಾವಳಿಯ ಹಿನ್ನೆಲೆಯೂ ಕುತೂಹಲಕರವಾಗಿದೆ.

ದೀಪಗಳ ಹಬ್ಬದ ಮಹತ್ವ ಹೀಗಿದೆ…
ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದೀಪಾವಳಿಯ ದಿನ ಇಡೀ ದೇಹಕ್ಕೆ ಎಣ್ಣೆ ಸ್ನಾನವನ್ನು ಮಾಡುತ್ತೇವೆ ಏಕೆಂದರೆ ಇದು ನಮ್ಮ ಆರೋಗ್ಯಕ್ಕೆ ಹಾಗೂ ನರನಾಡಿಗಳ ರಕ್ತ ಚಲನೆಗೆ ಸಹಕಾರಿಯಾಗಿದೆ. ಯಾವುದೇ ಚರ್ಮದ ತೊಂದರೆ ಇದ್ದರು ವಾಸಿಮಾಡುವಲ್ಲಿ ಇದು ಸಹಕಾರಿಯಾಗಿದೆ.

ವಿಭಿನ್ನ ಹಿನ್ನೆಲೆಗಳು
ವಿವಿಧ ಸ್ಥಳಗಳಲ್ಲಿ ವಿವಿಧ ಪೌರಾಣಿಕ ಇತಿಹಾಸ ಹೊಂದಿರುವ ಹಬ್ಬಈ ದೀಪಾವಳಿ. ಏಳು ಪ್ರಮುಖ ಪೌರಾಣಿಕ ಹಿನ್ನೆಲೆಗಳ ಬಗ್ಗೆ ನಮಗೆ ತಿಳಿದಿರಲೇಬೇಕು. ಮೊದಲನೆಯದು ಉತ್ತರ ಭಾರತದಲ್ಲಿ ದೀಪಾವಳಿಯನ್ನು ʼರಾಮ ಅಯೋಧ್ಯೆಗೆ ಹಿಂತಿರುಗಿದ ದಿನʼ ಎಂದು ಆಚರಿಸಲಾಗುತ್ತದೆ. ರಾಮ ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ದೀಪಗಳನ್ನು ಹಚ್ಚಿ ಆರತಿಯನ್ನು ಬೆಳಗ್ಗೆ ರಂಗೋಲಿಯನ್ನು ಹಾಕಿ ಶ್ರೀರಾಮಚಂದ್ರನ ಸ್ವಾಗತಿಸಿದರಂತೆ. ಭಾರತದ ಅನೇಕ ಕಡೆಗಳಲ್ಲಿ ಈ ದಿನದಂದು ಲಕ್ಷ್ಮಿ ಪೂಜೆಯನ್ನೂ ಮಾಡಲಾಗುತ್ತದೆ.

ಇದನ್ನೂ ಓದಿ:- ತುಮಕೂರು : ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ ಅಪ್ಪು ಅಭಿಮಾನಿ

Advertisement

ವ್ಯಾಪಾರಿಗಳು ಈ ದಿನವನ್ನು ʼಹೊಸವರ್ಷʼ ಎಂದು ಪರಿಗಣಿಸುತ್ತಾರೆ. ವ್ಯಾಪಾರದಲ್ಲಿ ಲಾಭ ಗಳಿಸಲು ವರಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಹಾಗೆ ಬಂಗಾಳ, ಬಿಹಾರ ಹೀಗೆ ಕೆಲವು ಕಡೆಗಳಲ್ಲಿ ದೀಪಾವಳಿಯಂದು ಮಧ್ಯರಾತ್ರಿಯಿಂದ ಬೆಳಗ್ಗೆವರೆಗೆ ಕಾಳಿ ಪೂಜೆ ನೆರವೇರಿಸುತ್ತಾರೆ. ಪಾರ್ವತಿ ದೇವಿಯು ದುಷ್ಟಸಂಹಾರಕ್ಕಾಗಿ ಕಾಳಿ ಅವತಾರ ತಾಳಿದ್ದಾರೆ ಎಂದು ನಂಬುತ್ತಾರೆ.

ಇನ್ನು ಸಿಕ್ಕರು ಕೂಡ ದೀಪಾವಳಿ ಆಚರಿಸುತ್ತಾರೆ. ಸಿಕ್ಕರ ಆರನೇ ಧರ್ಮಗುರು, ಅಂದರೆ ಗುರುಗೋವಿಂದನ 62 ಹಿಂದೂ ರಾಜರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು, ಈ ಸಮಯದಲ್ಲಿ ಪ್ರಜೆಗಳು ಅವರನ್ನು ದೀಪಗಳನ್ನು ಹಚ್ಚಿ ಸ್ವಾಗತಿಸಿದರೆಂಬ ನಂಬಿಕೆಯಿದೆ. ಇನ್ನು ಮಹಾವೀರನು ದೀಪಾವಳಿಯಂದು ಮೋಕ್ಷ ಪಡೆದರು ಎಂಬ ನಂಬಿಕೆ ಕೂಡ ಅನೇಕರಲ್ಲಿ ಇದೆ. ಅಂತೂ ಬದುಕಿನ ಅಂಧಕಾರವನ್ನು ಹೋಗಲಾಡಿಸಿ ಬೆಳಕು ಮೂಡುವಂತೆ ಹಬ್ಬವನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸುವುದು ಪರಂಪರೆಯಾಗಿದೆ.

ಈ ರೀತಿ ಹಬ್ಬದ ಮಹತ್ವ ತಿಳಿದು ದೀಪಾವಳಿಯನ್ನು ಆಚರಿಸೋಣ. ಹೊರದೇಶದಿಂದ ಬರುವ ಪಟಾಕಿಗಳನ್ನು ತ್ಯಜಿಸಿ ಸ್ವದೇಶಿ ಪಟಾಕಿಗಳನ್ನು ಜಾಗರೂಕತೆಯಿಂದ ಬಳಸೋಣ. ಉರಿದು ಆರುವ ಮಧ್ಯೆ ಪ್ರಜ್ವಲಿಸಿ ಬೇರೆಯವರಿಗೆ ಬೆಳಕಾಗುವ ದೀಪದಂತೆ ನಾವು ಕೂಡ ಬೇರೆಯವರ ಬಾಳಲ್ಲಿ ಬೆಳಕಾಗಿ ಅಂಧಕಾರ ಹೋಗಲಾಡಿಸುವಲ್ಲಿ ಮುಖ್ಯಪಾತ್ರ ವಾಗಿರಬೇಕು.

– ಪ್ರಜ್ವಲ್ ಸಿ
ದ್ವಿತೀಯ ಬಿಎ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next