Advertisement
ಮನೆ-ಮನೆಗಳಲ್ಲಿ ಸಂಭ್ರಮ-ಸಡಗರದ ಹಬ್ಬ ಇದಾಗಿದ್ದು, ಈ ಹಿನ್ನೆಲೆಯಲ್ಲಿ ತಯಾರಿಗಾಗಿ ಅಗತ್ಯ ವಸ್ತುಗಳ ಖರೀದಿ ನಡೆಯುತ್ತಿದ್ದು, ಶಾಲಾ-ಕಾಲೇಜು ರಜೆ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಜನರ ಓಡಾಟ ತುಸು ಹೆಚ್ಚಳ ಕಂಡಿತ್ತು.
ಪಟಾಕಿ, ಗೂಡುದೀಪ, ಹೂವು, ಹಣ್ಣು, ಹಣತೆ, ವಸ್ತ್ರ ಖರೀದಿ ಹಿನ್ನೆಲೆಯಲ್ಲಿ ಮಾರುಕಟ್ಟೆ ಗ್ರಾಹಕರನ್ನು ಸೆಳೆಯಲು ಬಗೆ – ಬಗೆಯಲ್ಲಿ ಸಿದ್ಧವಾಗಿದೆ. ಗೂಡುದೀಪಗಳ ಮಾರಾಟ ನಗರದ ಅಲ್ಲಲ್ಲಿ ನಡೆಯುತ್ತಿದ್ದು, ಹೆಚ್ಚಿನ ಫ್ಯಾನ್ಸಿ ಅಂಗಡಿಗಳು ಗೂಡುದೀಪದಿಂದ ಅಲಕೃತಗೊಂಡು ಸ್ವಾಗತಿಸುತ್ತಿವೆ. 80 ರೂ.ಧಾರಣೆಯಿಂದ ತೊಡಗಿ 300 ರೂ. ತನಕದ ಗೂಡುದೀಪಗಳು ಮಾರಾಟ ಇದ್ದು, ಖರೀದಿ ಇನ್ನಷ್ಟೇ ಜಿಗಿತುಕೊಳ್ಳಬೇಕಿದೆ ಎನ್ನುತ್ತಾರೆ ವ್ಯಾಪಾರಿ ಅಖೀಲೇಶ್. ಮಲ್ಲಿಗೆ ಅಟ್ಟೆಗೆ 1,200 ರೂ.
ಬಲೀಂದ್ರ, ಗೋಪೂಜೆ ಮೊದಲಾದಿ ನಡೆಯುವ ಕಾರಣ ಹೂವಿನ ಬೇಡಿಕೆ ಹೆಚ್ಚಿದ್ದು, ಧಾರಣೆ ಏರಿಕೆ ಕಂಡಿದೆ. ಮಲ್ಲಿಗೆ ಧಾರಣೆ ಅಟ್ಟೆಗೆ 1,200 ರೂ. ಇದ್ದು, ಶನಿವಾರದ ಬಳಿಕ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು. ಸೇವಂತಿ ಮಾರಿಗೆ 80 ರೂ., ತುಳಸಿ 50 ರೂ., ಸಣ್ಣ ಗುಲಾಬಿ ಮಾಲೆಗೆ 80 ರೂ. ಇದೆ.
Related Articles
ಈ ಬಾರಿ ಹಣತೆ ದೀಪಕ್ಕೂ ಬೇಡಿಕೆ ಇದೆ. ಮಣ್ಣಿನ ಹಣತೆ ಜತೆಗೆ ವಿವಿಧ ಮಾದರಿಯ ದೀಪಗಳು ಮಾರುಕಟ್ಟೆ ಪ್ರವೇಶಿಸಿದೆ. ಪರಿಸರ ಸ್ನೇಹಿ ಪರಿಕರ ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ದೀಪ ಬೆಳಗಿಸುವ ಪ್ರಯತ್ನ ಪ್ರಾರಂಭಗೊಂಡಿದ್ದು, ಹಣತೆ ದೀಪಕ್ಕೆ ಬೇಡಿಕೆ ಇರಬಹುದು ಎಂದು ವ್ಯಾಪಾರಿಗಳು ನಿರೀಕ್ಷೆ ವ್ಯಕ್ತಪಡಿಸುತ್ತಾರೆ.
Advertisement
ಹೊಸ ಬಟ್ಟೆ ಖರೀದಿಹೊಸ ಬಟ್ಟೆ ಖರೀದಿಗೆ ಜವುಳಿ ಮಳಿಗೆಗಳು ಬಗೆ-ಬಗೆಯ ಆಫರ್ ನೀಡಿದ ಹಿನ್ನೆಲೆಯಲ್ಲಿ ಗ್ರಾಹಕರು ಬಟ್ಟೆ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಆಫರ್ ಮೂಲಕ ಖರೀದಿಗೆ ಒತ್ತು ನೀಡಿದ್ದು, ಮಳಿಗೆಗಳಲ್ಲಿ ಜನರ ಭೇಟಿ ಕೊಂಚ ಹೆಚ್ಚಿದೆ. ಪಟಾಕಿ
ದೀಪಾವಳಿಗೆ ಬಣ್ಣ ತುಂಬುವ ಪಟಾಕಿ ಖರೀದಿ ಬಿರುಸಾಗಿದೆ. ಉಳಿದ ಎಲ್ಲ ವಸ್ತುಗಳ ಖರೀದಿಗಿಂತ ಪಟಾಕಿಗೆ ಬೇಡಿಕೆ ಹೆಚ್ಚಾಗಿದೆ. ನಗರ ಹಾಗೂ ಹೊರವಲಯ ಅಲ್ಲಲ್ಲಿ ಪಟಾಕಿ ಅಂಗಡಿಗಳು ತಲೆ ಎತ್ತಿದ್ದು, ಶನಿವಾರದಿಂದ ಮಾರಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.