Advertisement

ದೀಪಾವಳಿ ದಿನ ಸಿಎಂ ಕಡತ ವಿಲೇವಾರಿ

03:19 PM Oct 20, 2017 | Team Udayavani |

ಬೆಂಗಳೂರು: ದೀಪಾವಳಿ ದಿನದಂದು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ದಿನ ಕಡತ ವಿಲೇವಾರಿಯಲ್ಲಿ ಮಗ್ನರಾಗಿದ್ದರು.

Advertisement

ನಿರಂತರ ಪ್ರವಾಸ, ಪಕ್ಷದ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ  ಬಹುದಿನಗಳಿಂದ ಕಡತ ವಿಲೇವಾರಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪಟ್ಟಾಗಿ ಕುಳಿತು ವಿಲೇವಾರಿ ಮಾಡಿದರು.

ಮಧ್ಯೆ ವಿಧಾನಸೌಧಕ್ಕೆ ಆಗಮಿಸಿ ಕಚೇರಿಯಲ್ಲಿದ್ದ ಕೆಲವು ಕಡತಗಳನ್ನು ವಿಲೇವಾರಿ ಮಾಡಿದ ಮುಖ್ಯಮಂತ್ರಿಯವರು ಮತ್ತೆ ಗೃಹ ಕಚೇರಿ ಕೃಷ್ಣಾಗೆ ತೆರಳಿ ಕಡತ ವಿಲೇವಾರಿಯಲ್ಲಿ ತೊಡಗಿದ್ದರು.

ಇದರ ನಡುವೆಯೇ ಸಚಿವ ಸಂಪುಟ ಸಹೋದ್ಯೋಗಿಗಳು, ಶಾಸಕರು, ಪಕ್ಷದ ನಾಯಕರು ಕೃಷ್ಣಾಗೆ ಆಗಮಿಸಿ ಮುಖ್ಯಮಂತ್ರಿಯವರಿಗೆ ದೀಪಾವಳಿ ಶುಭಾಶಯ ಕೋರಿದರು.ಕಡತ ವಿಲೇವಾರಿ ಜತೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಯಸಿದ್ದರಾದರೂ ಹಬ್ಬದ ಪ್ರಯುಕ್ತ ಅಧಿಕಾರಿಗಳು ರಜೆಯಲ್ಲಿ ಇರುವುದರಿಂದ ಕಡತ ವಿಲೇವಾರಿಗೆ ಸೀಮಿತಗೊಳಿಸಿದರು. ಸಂಪನ್ಮೂಲ ಕ್ರೋಡೀಕರಣ ಹಾಗೂ ಬಜೆಟ್‌ ಅನುಷ್ಠಾನ ಕುರಿತು ಮುಂದಿನ ವಾರ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next