Advertisement
ಸೆ. 29ರಿಂದ ಆರಂಭವಾಗಿರುವ ಈ ಕೊಡುಗೆಗಳು ಅ. 31ರವರೆಗೆ ಮುಂದುವರಿಯಲಿದ್ದು, ಕರ್ನಾಟಕ ಮಾತ್ರವಲ್ಲದೆ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಕೇರಳ ಮತ್ತು ಕೋಲ್ಕತಾದ ಸಂಸ್ಥೆಯ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆ ಸೇರಿ ದೇಶದ ಎಲ್ಲಾ ಮಳಿಗೆಗಳಲ್ಲಿ ಅ. 9ರಿಂದ ಅ. 19ರ ಅವಧಿಯಲ್ಲಿ ಕನಿಷ್ಠ 25 ಸಾವಿರ ರೂ. ಮೌಲ್ಯದ ಚಿನ್ನವನ್ನು ಕಾರ್ಡ್ ಮೂಲಕ ಖರೀದಿಸಿದರೆ ಶೇ. 5ರಷ್ಟು ಕ್ಯಾಶ್‌ಬ್ಯಾಕ್ ಕೊಡುಗೆ ನೀಡಲಾಗುತ್ತದೆ ಎಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಅಧ್ಯಕ್ಷ ಎಂ.ಪಿ.ಅಹಮದ್ ಹೇಳಿದ್ದಾರೆ. ಇದರ ಜೊತೆಗೆ ಗ್ರಾಹಕರಿಗೆ 5 ಕೆ.ಜಿ. ಚಿನ್ನದ ಬಹು
ಮಾನ ಗೆಲ್ಲುವ ಮೆಗಾ ಬಂಪರ್ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿವಾರ ಅದೃಷ್ಟದ ಡ್ರಾ ಮೂಲಕ ಚಿನ್ನದ ಬಿಸ್ಕತ್ ಗೆಲ್ಲಲು ಅವಕಾಶವಿದೆ. ಒಟ್ಟಿನಲ್ಲಿ ಸಂಸ್ಥೆಯ ಮಳಿಗೆ ಗಳಲ್ಲಿ ಚಿನ್ನ ಅಥವಾ ವಜ್ರಾಭರಣ ಖರೀದಿಸಿದರೆ 100 ಕೆ.ಜಿ.ವರೆಗೆ ಚಿನ್ನ ಗೆಲ್ಲಲು ಅವಕಾಶವಿದೆ ಎಂದು ತಿಳಿಸಿದ್ದಾರೆ.