ಕ್ಯಾಲಿಫೋರ್ನಿಯಾ: ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ವತಿಯಿಂದ ದೀಪಾವಳಿ ಅಂಗವಾಗಿ ನ. 14ರಂದು ರಾಗಾರೋಗ್ಯ ವರ್ಚುವಲ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಇದರಲ್ಲಿ ಅತಿಥಿಯಾಗಿ ಪಾಲ್ಗೊಂಡ ಗಾಯಕ ಶ್ರೀಹರ್ಷ ಮಾತನಾಡಿ, ರಾಗಾರೋಗ್ಯವೆಂದರೆ ರಾಗ ಮತ್ತು ಆರೋಗ್ಯ. ಅಂದರೆ ಸಂಗೀತದಿಂದ ಆರೋಗ್ಯ ಎಂಬುದಾಗಿದೆ. ಮ್ಯೂಸಿಕಲ್ ಥೆರಪಿ ಬಗ್ಗೆ ಬಹಳ ಸಂಶೋಧನೆಗಳು ನಡೆದಿವೆ. ಪ್ರತಿಯೊಂದು ರಾಗಕ್ಕೂ ಒಂದೊಂದು ಭಾವವಿದೆ. ಹಲವಾರು ರಸಗಳಿರುತ್ತವೆ. ಒಂದೆರಡು ರಸ ಪ್ರಧಾನವಾಗಿರುತ್ತದೆ. ಅದು ಮನಸ್ಸಿನ ಮೇಲೆ ಬೀರುವ ಪರಿಣಾಮ ಮನಸ್ಸಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಅಭೇರಿ ರಾಗವನ್ನು ಬಳಸಿಕೊಂಡಿದ್ದೇನೆ. ಇದು ಎಲ್ಲ ಸಂಗೀತ ಪ್ರಕಾರಗಳಲ್ಲಿ ಇರುವ ರಾಗ ಇದಾಗಿದೆ. ಈ ರಾಗದಲ್ಲಿ ಶಾಂತತೆ, ಸಂತೋಷ, ಸಮಾಧಾನ, ವ್ಯಂಗ್ಯ, ಪ್ರಸನ್ನತೆ ಹೀಗೆ ಎಲ್ಲವನ್ನೂ ಒಳಗೊಂಡಿದೆ. ಈ ರಾಗ ಕೇಳುವುದರಿಂದ ಸಮಾಧಾನ, ಸಂತೋಷ ಸಿಗುತ್ತದೆ. ಇದು ಮ್ಯೂಸಿಕಲ್ ಥೆರಪಿಗೆ ಒಂದು ಪ್ರವೇಶಕ್ಕೆ ಇರುವ ದ್ವಾರ ಇದ್ದಂತೆ ಎಂದು ಹೇಳಿದರು.
ಇದನ್ನೂ ಓದಿ:ಕಂಪು ಕನ್ನಡ ಶಾಲೆಯ ಲಾಂಛನ ಬಿಡುಗಡೆ
ಬಳಿಕ ಸಂಗೀತ ಕಾರ್ಯಕ್ರಮದಲ್ಲಿ ಸ್ಲೋರೋಲೋ ಕೋಸ್ಟರೈಡ್ ಮಾದರಿಯಲ್ಲಿ ಕಿಶೋರ್‌ಕುಮಾರ್, ಡಾ| ರಾಜ್‌ಕುಮಾರ್, ದೇವರನಾಮ, ಘಜಲ್, ಎ.ಆರ್. ರೆಹಮಾನ್ ಸಹಿತ ಇನ್ನೂ ಹಲವಾರು ಹಾಡುಗಳನ್ನು ಜತೆ ಸೇರಿಸಿ ಪ್ರಸ್ತುತಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.