Advertisement
ಜಗತ್ತಿನಾದ್ಯಂತ ಇರುವ ಹಿಂದೂಗಳು ತಮ್ಮ ಮನೆಗಳ ಸಮೀಪದಲ್ಲಿರುವ ದೇಗುಲಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರಲ್ಲದೆ, ಬಾಣ, ಬಿರುಸುಗಳನ್ನು ಸಿಡಿಸಿ ಮಕ್ಕಳು ಹಾಗೂ ಕುಟುಂಬದವರೊಂದಿಗೆ ಹಬ್ಬ ಆಚರಿಸಿದರು. ಇವರ ಈ ಸಂಭ್ರಮಾಚರಣೆಗೆ ಅವರ ಸ್ನೇಹಿತರೂ ವಿದೇಶೀಯರೂ ಸಾಥ್ ನೀಡಿದರು.
Related Articles
Advertisement
ಷೇರು ಪೇಟೆಗೆ ಬೆಳಕಿಲ್ಲ: ಹಾಲಿ ಸಾಲಿನ ದೀಪಾವಳಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಬೆಳಕನ್ನೇನೂ ತಂದಿಲ್ಲ. ಗುರುವಾರ ನಡೆದ ಮುಹೂರತ್ ಟ್ರೇಡಿಂಗ್ ಪ್ರಯುಕ್ತ ನಡೆಸಲಾದ ವಿಶೇಷ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 194 ಅಂಕ ಗಳಷ್ಟು ಕುಸಿದು ಸೂಚ್ಯಂಕ 32,389.96ರಲ್ಲಿ ಮುಕ್ತಾಯವಾಯಿತು.
ಶ್ವೇತಭವನದಲ್ಲಿ ದೀಪ ಬೆಳಗಿದ ಟ್ರಂಪ್ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಹಣತೆ ಹಚ್ಚುವ ಮೂಲಕ ದೀಪಾವಳಿಯ ಸಂಭ್ರಮಕ್ಕೆ ಚಾಲನೆ ನೀಡಿದರು. ಭಾರತೀಯ- ಅಮೆರಿಕನ್ನರಿಗೆ ಬೆಳಕಿಗೆ ಹಬ್ಬಕ್ಕೆ ಶುಭಕೋರಿದ ಟ್ರಂಪ್ ಅವರು, ಪ್ರಧಾನಿ ಮೋದಿ ಅವರೊಂ ದಿಗಿನ ತಮ್ಮ ಆತ್ಮೀಯತೆಯನ್ನೂ ಪ್ರಸ್ತಾವಿಸಿ ದರು. ಭಾರತೀಯರನ್ನು “ಶ್ರೇಷ್ಠ ಅಮೆರಿಕದ ಕುಟುಂಬದ ಅಮೂಲ್ಯ ಹಾಗೂ ಪ್ರೀತಿಯ ಸದಸ್ಯರು’ ಎಂದೇ ಉಲ್ಲೇಖೀಸಿದರಲ್ಲದೆ, ಜಗ ತ್ತಿಗೆ ಭಾರತೀಯರು ನೀಡಿರುವ ಕೊಡುಗೆ ಗಳನ್ನು ಶ್ಲಾ ಸಿದರು. ಅವರ ಪುತ್ರಿ ಹಾಗೂ ಸಲಹೆಗಾರ್ತಿ ಇವಾಂಕಾ ಟ್ರಂಪ್ ಅವರು ಟ್ವಿಟರ್ ಮೂಲಕ ಭಾರತೀಯರಿಗೆ ಶುಭ ಕೋರಿದರು. ಶ್ವೇತಭವನದ ದೀಪಾವಳಿ ಆಚರಣೆಯ ಫೋಟೋ, ವಿಡಿಯೋಗಳನ್ನು ಹಾಗೂ ಅಧ್ಯಕ್ಷ ಟ್ರಂಪ್ ಅವರ ಸಂದೇಶ ವನ್ನು ಕೂಡ ಅಧ್ಯಕ್ಷರ ಫೇಸ್‌ಬುಕ್ ಪೇಜ್‌ಗೆ ಅಪ್‌ಲೋಡ್ ಮಾಡ ಲಾಗಿದೆ. ಇವಾಂಕಾ ಅವರು ಮುಂದಿನ ತಿಂಗಳು ಹೈದರಾಬಾದ್‌ಗೆ ಆಗಮಿಸಲಿದ್ದಾರೆ. ನ.28ರಂದು ವಾರ್ಷಿಕ ಜಾಗತಿಕ ಉದ್ಯಮ ಶೀಲತೆ ಶೃಂಗದಲ್ಲಿ ಅವರು ಪಾಲ್ಗೊಂಡು, ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರೂ ಈ ಕಾರ್ಯ ಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಚಿನ್ನದ ದರ 250 ರೂ. ಇಳಿಕೆ
ದೀಪಾವಳಿ ಹಿನ್ನೆಲೆಯಲ್ಲಿ ಗುರುವಾರ ಚಿನಿವಾರ ಪೇಟೆಯಲ್ಲಿ ನಡೆದ ವಿಶೇಷ ದಿವಾಳಿ ಮುಹೂರ್ತ ವ್ಯಾಪಾರದ ವೇಳೆ ಚಿನ್ನದ ದರ ಗ್ರಾಂಗೆ 250 ರೂ. ಇಳಿಕೆಯಾಗಿ, 10 ಗ್ರಾಂಗೆ 30,750 ಆಯಿತು. ಇದೇ ವೇಳೆ, ಬೆಳ್ಳಿ ದರ 200 ರೂ. ಕುಸಿದು, ಕೆ.ಜಿಗೆ 40,800ಕ್ಕೆ ತಲುಪಿತು. ಬಸ್ಸು, ರೈಲುಗಳಲ್ಲಿ ಬೆಳಕಿನ ತೋರಣ
ಸಿಂಗಾಪುರದಲ್ಲಿ ದೀಪಾವಳಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗಿದೆ. ಅಲ್ಲಿನ ಬಸ್ಸುಗಳು, ರೈಲುಗಳಲ್ಲಿ ರಂಗೋಲಿಗಳು, ಬೆಳಕಿನ ಹಬ್ಬವನ್ನು ಪ್ರತಿಬಿಂಬಿಸುವ ವಿನ್ಯಾಸಗಳು, ಕಲಾಕೃತಿಗಳು ರಾರಾಜಿಸಿವೆ. ಜತೆಗೆ, ಈ ದೀಪಾವಳಿ ಥೀಮ್ ಇರುವ ಹೆಚ್ಚುವರಿ ಬಸ್ಸುಗಳನ್ನು ಹೊಸ ರೂಟ್‌ಗಳಲ್ಲಿ ಬಿಡಲಾಗಿದ್ದು, “ದೀಪಾವಳಿಯ ಸಂಭ್ರಮದ ಪಯಣ ನಿಮ್ಮದಾಗಲಿ’ ಎಂದು ಹಾರೈಸಲಾಗಿದೆ. ಅಲ್ಪಸಂಖ್ಯಾಕರ ಹಕ್ಕುಗಳ ರಕ್ಷಣೆಗೆ ಬದ್ಧ: ಪಾಕ್ ಪ್ರಧಾನಿ
ಪಾಕ್ ಪ್ರಧಾನಿ ಶಾಹಿದ್ ಖಖಾನ್ ಅಬ್ಟಾಸಿ ಅವರೂ ಗುರುವಾರ ಭಾರತೀಯರು ಹಾಗೂ ಹಿಂದೂ ಧರ್ಮೀಯ ರಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಬೆಳಕಿನ ಹಬ್ಬ ಆಚರಿ ಸುತ್ತಿರುವ ಎಲ್ಲರಿಗೂ ಸಂತೋಷ, ಶಾಂತಿ ಹಾಗೂ ಸಮೃದ್ಧಿ ಸಿಗಲಿ ಎಂದು ಹೇಳಿರುವ ಅವರು, ನಮ್ಮ ಸರಕಾರವು ಅಲ್ಪಸಂಖ್ಯಾ ಕರ ಹಕ್ಕುಗಳ ರಕ್ಷಣೆಗೆ ಬದ್ಧವಾ ಗಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ, ಅಟ್ಟಾರಿ-ವಾಘಾ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಪಾಕಿಸ್ಥಾನದ ರೇಂಜರ್‌ಗಳಿಗೆ ಸಿಹಿ ಹಂಚಿ ದೀಪಾವಳಿಯನ್ನು ಆಚರಿಸಿದ್ದಾರೆ.