Advertisement
ಹಬ್ಬಗಳ ಆಚರಣೆ ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಇಂದು ಹಳ್ಳಿಗಳಲ್ಲಿ ಕಾಣುವ ಈ ಪಾಂಡವರ ಪೂಜೆ ಇಂದು ಗ್ರಾಮೀಣ ಹೆಣ್ಣು ಮಕ್ಕಳ ಭಾಷೆಯಲ್ಲಿ ಅದು ಪಾಂಡ್ರವ್ವ ಪೂಜೆ ಎಂದು ರೂಢಿಯಲ್ಲಿ ಬಂದಿದೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಸಗಣಿಯಿಂದ ಪಾಂಡ್ರವ್ವರ ಮಾಡಿ ಪೂಜಿಸುವ ಹಿಂದಿರುವ ಕಾರಣ ಉತ್ತಮ ಬೆಳೆ ಬೆಳೆಯಲು ಅಗತ್ಯವಾಗಿರುವ ಗೊಬ್ಬರವನ್ನು ಪೂಜಿಸುವುದೇ ಆಗಿದೆ. ಸಗಣಿಯಿಂದ ಸಾಂಕೇತಿಕವಾಗಿ ಪಾಂಡವರನ್ನು ಮಾಡಿ ಪೂಜಿಸುವ ಸಂಪ್ರದಾಯ ಅನೇಕ ವರ್ಷಗಳಿಂದ ಆಚರಿಸಲ್ಪಡುತ್ತಿದೆ.
ಬೆಳೆದಂತೆ ಕಡಿಮೆಯಾಗುತ್ತ ಬರುತ್ತಿದೆ. ಇದು ಹಳ್ಳಿಗಳಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುವ ಆಚರಣೆಯಾಗಿದೆ. ಕೆಲವು ಭಾಗದಲ್ಲಿ ಶೆಗಣಿಯಿಂದ ಕೋಟೆಯನ್ನು ಮಾಡಿ ಅದರಲ್ಲಿಐದು ಜನ ಪಂಚರನ್ನು ಪ್ರತಿಷ್ಠಾಪಿಸುತ್ತಾರೆ. ಇದು ಪಂಚರ ಪೂಜೆ ಹಾಗೂ ರಕ್ಷಣೆಯ ಸಂಕೇತ. ಜನರು ಪಂಚರ ರಕ್ಷಣೆ ಮಾಡಿದರೆ ಪಂಚರು ಜನರ ರಕ್ಷಣೆ ಮಾಡುತ್ತಾರೆ ಎಂಬುದು ವಿಶ್ವಾಸ. ಇನ್ನು ಪಂಚರು ಅಂದರೆ ಐದು ಜನ. ಪಾಂಡವರು ಕೂಡಾ ಐದು ಜನ ಆದ್ದರಿಂದ ಸಾಮಾನ್ಯವಾಗಿ ಯಾವುದೇ ಪ್ರದೇಶದಲ್ಲಿ ಐದು ಜನ ಇದ್ದರೆ ಅವರನ್ನು ಪಂಚ ಪಾಂಡವರು ಎಂದು ಕರೆಯುತ್ತಾರೆ. ಇದೇ ಕಾರಣಕ್ಕೆ ಇದಕ್ಕೆ ಪಾಂಡವರು (ಪಾಂಡ್ರವ್ವ) ಎಂಬ ಹೆಸರೂ ಬಂದಿರಬಹುದು.
Related Articles
Advertisement
ನಂತರ ಅವುಗಳನ್ನು ಕಣಗಲದ ಹಳದಿ ಹೂಗಳನ್ನು ತಂದು ಇದಕ್ಕೆ ಪೂಜೆ ಸಲ್ಲಿಸುತ್ತಾರೆ. ಮೂರು ದಿವಸಗಳ ಕಾಲ ಮನೆಯಲ್ಲಿಮಾಡಿದ ಸಿಹಿ ಅಡುಗೆಯನ್ನು ಇದಕ್ಕೆ ನೈವೇದ್ಯ ಮಾಡುತ್ತಾರೆ. ಪಾಡ್ಯದಂದು ಎಲ್ಲ ಪಾಂಡವರನ್ನು ಮತ್ತೊಮ್ಮೆ ಪೂಜಿಸಿ, ನೈವೇದ್ಯ ಮಾಡಿ ಸೂರ್ಯ ಮುಳಗುವ ಮುಂಚೆ ಮನೆಯ ಮಾಳಿಗೆಯ ಮೇಲಿಡುತ್ತಾರೆ. ಕೆಲವು ಕಡೆ ಪಾಡ್ಯದ ದಿನವೇ ಪಾಂಡವರನ್ನು ಪೂಜಿಸುವ ಸಂಪ್ರದಾಯವಿದೆ. ಪಂಚರ ಪ್ರಾಮುಖ್ಯತೆ
ಪಾಂಡವರು ಎಂದರೆ ಗ್ರಾಮೀಣ ಭಾಗದಲ್ಲಿ ಗ್ರಾಮದ ಪ್ರಮುಖರು ಪಂಚರು. ಯಾವುದೇ ಕಾರ್ಯ ಮಾಡಬೇಕಾದರೂ ಈ ಪಂಚರು ಬೇಕೇ ಬೇಕು. ಯಾವುದೇ ಬೆಳೆಯನ್ನು ಕೊಯ್ಲು ಮಾಡಬೇಕೆಂದರೂ ಪಂಚ ಮುತ್ತೈದೆಯರಿಗೆ ಉಡಿ ತುಂಬುತ್ತಾರೆ. ರಾಶಿ ಮಾಡುವ ಸಂದರ್ಭದಲ್ಲಿ ಐದು ಜನರಿಗೆ ದವಸ- ಧಾನ್ಯಗಳನ್ನು ದಾನವಾಗಿ ನೀಡುತ್ತಾರೆ. ಆಧುನಿಕತೆಗೆ ತಕ್ಕಂತೆ ಆಚರಣೆ ಮಾಯ
ಪಂಚರನ್ನು ಪೂಜಿಸುವುದರ ಸಲುವಾಗಿ ಸೆಗಣಿಯಿಂದ ಮೂರ್ತಿಗಳನ್ನು ಮಾಡಿ ದೀಪಾವಳಿಯ ಸಂದರ್ಭದಲ್ಲಿಅವರನ್ನು ಗೌರವಿಸಲಾಗುತ್ತದೆ.ಇಂತಹ ಇತಿಹಾಸವಿರುವ ಈ ಆಚರಣೆ ಆಧುನಿಕತೆಗೆ ತಕ್ಕಂತೆ ಮಾಯವಾಗುತ್ತಿದೆ. ಇದರ ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದ್ದು, ಗ್ರಾಮೀಣ ಪ್ರದೇಶದ ಸಂಪ್ರದಾಯಸ್ತ ಕುಟುಂಬಗಳಲ್ಲಿ ಮಾತ್ರ ಈ ಆಚರಣೆ ಇಂದಿಗೂ ಇದೆ.