ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ದಿವ್ಯಾ ಸುರೇಶ್ ಈಗ “ರೌಡಿ ಬೇಬಿ’ ಎಂಬ ಪಕ್ಕಾ ಸಸ್ಪೆನ್ಸ್ ಕಂ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ಯೋಚನೆಯಲ್ಲಿದ್ದಾರೆ. ಪ್ರೀತಿ, ಬದುಕು ಹಾಗೂ ಭಾವನೆಗಳ ಸುತ್ತ ನಡೆಯುವ “ರೌಡಿ ಬೇಬಿ’ ಚಿತ್ರದಲ್ಲಿ ದಿವ್ಯಾ ಸುರೇಶ್‌ಗೆ ಜೋಡಿಯಾಗಿ ರವಿಗೌಡ ಕಾಣಿಸಿಕೊಂಡಿದ್ದಾರೆ.
ಸಿನಿಮಾದ ದೃಶ್ಯವೊಂದರಲ್ಲಿ ದಿವ್ಯಾ ಸುರೇಶ್ ಮಾಡಿದ್ದಾರೆ ಎನ್ನಲಾದ ಲಿಪ್‌ಲಾಕ್ ಪೋಟೊಗಳು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಇದೇ ಪ್ರೇಮಿಗಳ ದಿನದಂದು “ರೌಡಿ ಬೇಬಿ’ ತೆರೆಗೆ ಬರುವ ಯೋಚನೆಯಲ್ಲಿದೆ.
ಕೃಷ್ಣಾ ರೆಡ್ಡಿ “ರೌಡಿ ಬೇಬಿ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ದಿವ್ಯಾ, ರವಿಗೌಡ ಅವರೊಂದಿಗೆ ಹೀರಾ ಕೌರ್ ಮತ್ತೂಬ್ಬ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಅಮಿತ್, ಕೆಂಪೇಗೌಡ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಗೆಳೆಯನೊಂದಿಗೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜೆಎಫ್ ಬೆಡಗಿ
ಒಟ್ಟಾರೆ ಹೊಸವರ್ಷದಲ್ಲಿ ಬಿಗ್ ಸ್ಕ್ರೀನ್ ಮೇಲೆ ಎಂಟ್ರಿಕೊಡಲು ರೆಡಿಯಾಗಿರುವ ದಿವ್ಯಾ ಸುರೇಶ್ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಗಮನ ಸೆಳೆಯುತ್ತಾರೆ ಅನ್ನೋದು “ರೌಡಿ ಬೇಬಿ’ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.