Advertisement

ವಿಚ್ಛೇದನ ನೀಡಿದ ಸುಪ್ರೀಂಕೋರ್ಟ್‌

11:23 AM Oct 11, 2019 | sudhir |

ಹೊಸದಿಲ್ಲಿ: 22 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿಗೆ ಸಂವಿಧಾನದ 142ನೇ ಕಲಂ ಅನ್ನು ಬಳಸಿ ವಿವಾಹವನ್ನು ರದ್ದುಗೊಳಿಸಿದೆ.

Advertisement

ವೈವಾಹಿಕ ಸಂಬಂಧವನ್ನು ಮುಂದುವರಿಸಲು ಪ್ರಯತ್ನಿಸಿದ ಎಲ್ಲ ಪ್ರಯತ್ನಗಳೂ ವಿಫ‌ಲವಾಗಿವೆ ಮತ್ತು ದಂಪತಿ ಯನ್ನು ಒಟ್ಟಾಗಿಸುವುದು ಸಾಧ್ಯವಿಲ್ಲದ ಕಾರಣ ಸುಪ್ರೀಂಕೋರ್ಟ್‌ ನಿರ್ಧಾರ ಕೈಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಷನ್‌ ಕೌಲ್‌ ಮತ್ತು ಎಂ.ಆರ್‌.ಷಾ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ದೂರು ನೀಡಿದ ಪತ್ನಿಯ ಹಿತಾಸಕ್ತಿಯನ್ನು ಕಾಯುವ ದೃಷ್ಟಿಯಿಂದ ವಿವಾಹ ರದ್ದತಿಗೆ ಆದೇಶ ನೀಡಲಾಗಿದೆ.

ಪತಿ ಮತ್ತು ಪತ್ನಿ ಇಬ್ಬರೂ ಒಪ್ಪಿದಾಗ ಮಾತ್ರವೇ ವಿಚ್ಛೇದನಕ್ಕೆ ಅನುವು ಮಾಡಬಹುದಾಗಿದೆ. ಆದರೆ ಈ ಪ್ರಕರಣದಲ್ಲಿ ಪತಿ ವಿಚ್ಛೇದನಕ್ಕೆ ವಿರೋಧಿಸಿದ್ದರು. ಪತಿಯ ವಿರೋಧವನ್ನು ನಿರ್ಲಕ್ಷಿಸಿದ ಸುಪ್ರೀಂಕೋರ್ಟ್‌ ಈ ಆದೇಶ ನೀಡಿ, ಎಂಟು ವಾರಗಳೊಳಗೆ 20 ಲಕ್ಷ ಪರಿಹಾರವನ್ನು ಪತ್ನಿಗೆ ನೀಡಬೇಕು ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next