Advertisement

ಇದು ರಿಯಲ್‌! ವಿಚ್ಛೇದಿತ ಪತಿ ಸಮ್ಮುಖದಲ್ಲೇ ಮರು ಮದುವೆಯಾದ ವಕೀಲೆ

03:27 PM Jul 07, 2017 | |

ಚಿಂತಾಮಣಿ: ಕಲಾಣ್ಯ ಮಂಟಪದಲ್ಲಿ ಸಪ್ತಪದಿ ತುಳಿದು ಮದುವೆಯಾಗಿದ್ದ ಗಂಡನಿಗೆ ವಿಚ್ಛೇದನ ನೀಡಿ, ತನ್ನ ಸ್ವಂತ ಶಾಲೆಯಲ್ಲಿ ಚಾಲಕನಾಗಿದ್ದ ಪ್ರಿಯಕರನೊಂದಿಗೆ ಶಾಲೆಯ ಒಡತಿಯೊಬ್ಬರು ಗಂಡನ ಸಮ್ಮುಖದಲ್ಲಿಯೇ ಮದುವೆಯಾಗಿರುವ ಘಟನೆ ನಗರದ ಆಶ್ವನಿ ಬಡಾವಣೆಯಲ್ಲಿ ನಡೆದಿದೆ.

Advertisement

 ಗಂಡನಿಗೆ ವಿಚ್ಛೇದನ ನೀಡಿ ಪ್ರಿಯಕರನೊಂದಿಗೆ ಮದುವೆಯಾದ ನಗರದ ಆಶ್ವನಿ ಬಡಾವಣೆಯಲ್ಲಿ ವಾಸವಾಗಿರುವ ಮಹಿಳೆ ರಚನಾ ವೃತ್ತಿಯಲ್ಲಿ ವಕೀಲೆ. ಹಾಗೂ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆಯಾಗಿದ್ದಾರೆ. ಅವರು ಕಳೆದ ಹದಿನೈದು ವರ್ಷಗಳ ಹಿಂದೇ ಪೆದ್ದೂರು ಗ್ರಾಮದ ವಕೀಲ ಈಶ್ವರಗೌಡರನ್ನು ಮದುವೆಯಾಗಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿನ ತಾಯಿಯಾಗಿದ್ದಾರೆ. ಕೆಲ ದಿನಗಳ ನಂತರ ಇವರ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದ ಕಾರಣ ರಚನಾ 2016ರ ಮಾರ್ಚ್‌ 3 ರಂದು ನ್ಯಾಯಾಲಯದ ಮುಖಾಂತರ ವಿಚ್ಛೇದನ ಪಡೆದಿದ್ದರು.

ಪತಿ ಸಮ್ಮುಖದಲ್ಲೇ ಮರು ಮದುವೆ 

ನಂತರ ತಮ್ಮದೇ ಆದ ರಚನಾ ಕ್ರಿಯೇಟಿವ್‌ ಶಾಲೆಯನ್ನು ನಡೆಸುತ್ತಿದ್ದರು. ಈಶಾಲೆಯಲ್ಲಿ ವಾ ಹನ ಚಾಲಕನಾಗಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಪಾಪ ತಿಮ್ಮನಹಳ್ಳಿ ಗ್ರಾಮದ ಎನ್‌.ಮಂಜುನಾಥ್‌ನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದಾರೆ. ಹಾಗಾಗಿ, ವಿಚ್ಛೇದನ ನೀಡಿದ್ದ ಮೊದಲ ಪತಿಗೆ ಈ ವಿಷಯವನ್ನು ತಿಳಿಸಿ ಆತನ ಸಮ್ಮುದಲ್ಲಿಯೇ ತಮ್ಮ ಸ್ವಂತ ಮನೆಯಲ್ಲಿ ಚಾಲಕ ಮಂಜುನಾಥ್‌ನ ಜತೆಗೆ ಮದುವೆಯಾಗಿದ್ದಾರೆ.

ಮರು ಮದುವೆಗಾಗಿ ವಿಚ್ಛೇದನ

Advertisement

 ತಾನು ತನ್ನ ಮುಂದಿನ ಜೀವನಕ್ಕೆ ಅನುಕೂಲವಾಗುವ ಹಾಗೂ ತನ್ನನ್ನು ಇಷ್ಟಪಡುವವರನ್ನು ಮದುವೆಯಾಗ ಬೇಕೆಂಬ ಉದ್ದೇಶದಿಂದ ಗಂಡನಿಗೆ ವಿಚ್ಛೇದನ ನೀಡಿದ್ದೆ. ತಮ್ಮ ಶಾಲೆಯಲ್ಲಿಯೇ ವಾಹನ ಚಾಲಕನಾಗಿರುವ ಮಂಜುನಾಥ್‌ ತನ್ನನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ ಕಾರಣ ಜಾತಿ, ಮತ ಯಾವು ದನ್ನೂ ಲೆಕ್ಕಿಸದೇ ಅವರನ್ನು ಮೊದಲ ಪತಿ ಈಶ್ವರಗೌಡರ ಸಮ್ಮುಖದಲ್ಲಿಯೇ ಮದುವೆ ಯಾಗಿದ್ದೇನೆ ಎಂದು ರಚನಾ ಸ್ಪಷ್ಟಪಡಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next