Advertisement

Congress ಡಿಎನ್ ಎಯಲ್ಲೇ ವಿಭಜನೆ ಅಂತರ್ಗತವಾಗಿದೆ: ಸಂಸದ ತೇಜಸ್ವಿ ಸೂರ್ಯ

06:34 PM Feb 29, 2024 | Team Udayavani |

ನಾಗ್ಪುರ: “ಕಾಂಗ್ರೆಸ್‌ನ ಡಿಎನ್‌ಎಯಲ್ಲಿ ವಿಭಜನೆ ಅಂತರ್ಗತವಾಗಿದೆ” ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗುರುವಾರ ಕಿಡಿ ಕಾರಿದ್ದಾರೆ.

Advertisement

ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ವಿಧಾನಸೌಧದ ಕಾರಿಡಾರ್‌ಗನಲ್ಲಿ ಪಾಕಿಸ್ಥಾನದ ಪರ ಘೋಷಣೆಗಳು ಕೇಳಿಬಂದಿರುವ ಕುರಿತು ಪ್ರತಿಕ್ರಿಯಿಸಿ,”ದೇಶವನ್ನು ವಿಭಜಿಸಲು ಕಾಂಗ್ರೆಸ್ ಮೂಲ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದ ಡಿಎನ್‌ಎಯಲ್ಲೇ ವಿಭಜನೆ ಅಂತರ್ಗತವಾಗಿದೆ. ಇದನ್ನು ಬಿಟ್ಟು ಬೇರೆ ಏನನ್ನೂ ಕಾಂಗ್ರೆಸ್‌ನಿಂದ ನಿರೀಕ್ಷಿಸುವುದು ತಪ್ಪಾಗುತ್ತದೆ” ಎಂದರು.

”ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತ ಬಿಜೆಪಿಯ ಕೋಟೆಯಾಗಲಿದೆ. ಕರ್ನಾಟಕದ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಮೈತ್ರಿಕೂಟ ಗೆಲ್ಲಲಿದೆ. ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಐತಿಹಾಸಿಕ ಜನಾದೇಶ ಪಡೆಯಲಿದೆ. ಬಿಜೆಪಿ ಕೇರಳದಲ್ಲಿಯೂ ಲೋಕಸಭಾ ಸದಸ್ಯರನ್ನೂ ಹೊಂದಲಿದ್ದು, ಆಂಧ್ರಪ್ರದೇಶದಲ್ಲಿ ಪಕ್ಷದ ಮತಗಳ ಶೇಕಡಾವಾರು ಹೆಚ್ಚಾಗಲಿದೆ” ಎಂದರು.

”ಮಾರ್ಚ್ 4 ರಂದು ನಾಗ್ಪುರದಲ್ಲಿ ಆಯೋಜಿಸಲಾದ ‘ನಮೋ ಮಹಾ ಯುವ ಸಮ್ಮೇಳನ’ದ ರ‍್ಯಾಲಿಯನ್ನುದ್ದೇಶಿಸಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಲಿದ್ದಾರೆ. ಸಮಾವೇಶದಲ್ಲಿ ಮಹಾರಾಷ್ಟ್ರದ ಒಂದು ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಲಿದ್ದಾರೆ” ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next