Advertisement

ಪಂಪಾ ಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀ ಚಕ್ರ ಸ್ಥಳಾಂತರಕ್ಕೆ ಸಂಜೀವ ಮರಡಿ ವಿರೋಧ

03:08 PM May 28, 2022 | Team Udayavani |

ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ  ಪಂಪಾ  ಸರೋವರದ ಗರ್ಭಗುಡಿಯನ್ನು ಆಗೆದು  ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀ ಚಕ್ರವನ್ನು ಅಕ್ರಮವಾಗಿ ಸ್ಥಳಾಂತರ ಮಾಡಿರುವುದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ ಇದಕ್ಕೆ ಕಾರಣರಾದವರ ವಿರುದ್ಧ ಕೇಸ್ ದಾಖಲಿಸಿ ಬಂಧಿಸುವಂತೆ ಶ್ರೀರಾಮ ಸೇನೆಯ ವಿಭಾಗೀಯ ಅಧ್ಯಕ್ಷ  ಸಂಜೀವ  ಮರಡಿ ಆಗ್ರಹಿಸಿದ್ದಾರೆ ಖಂಡಿಸಿದ್ದಾರೆ .

Advertisement

ಪಂಪಾ ಸರೋವರ ಗರ್ಭಗುಡಿಯ ಅಗೆದಿರುವ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಅವರು, ಹಿಂದೂಗಳ ಪವಿತ್ರ ಕ್ಷೇತ್ರಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಜೀರ್ಣೋದ್ಧಾರದ ನೆಪದಲ್ಲಿ ಪಂಪಾಸರೋವರದ ಜಯಲಕ್ಷ್ಮಿ ಗುಡಿಯನ್ನು ಅಗೆದು ಮೂರ್ತಿ ಮತ್ತು ಪವಿತ್ರ ಶ್ರೀಚಕ್ರವನ್ನು ಅಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ .ಈ ಸಂದರ್ಭದಲ್ಲಿ ಪುರಾತತ್ವ ಪ್ರಾಚ್ಯವಸ್ತು ಇಲಾಖೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಾಲ್ಲೂಕು ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳು ಇಲ್ಲದೇ ಇರುವುದು ಖಂಡನೀಯ ಎಂದಿದ್ದಾರೆ.

ಅದಕ್ಕೆ ಕಾರಣ ಅವರ ವಿರುದ್ಧ ಕೂಡಲೇ ಸರಕಾರ ಜಿಲ್ಲಾಡಳಿತ ಕೇಸ್ ದಾಖಲಿಸಿ ಬಂಧಿಸಬೇಕು. ಇಲ್ಲದಿದ್ದರೆ ಶ್ರೀರಾಮಸೇನೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳು ದೇವರ ದೇವಾಲಯಗಳನ್ನು ಅಭಿವೃದ್ಧಿ ಮಾಡಲು ಅನುಮತಿ ನೀಡುವ ಸಂದರ್ಭದಲ್ಲಿ ಕಠಿಣ ಕಾನೂನು ಕ್ರಮ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿಡಿಯೋದಲ್ಲಿ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.

ಕೂಡಲೇ ಪುರಾತತ್ವ ಇಲಾಖೆ ಪ್ರಾಚ್ಯವಸ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅವರನ್ನು ಅಮಾನತು ಮಾಡುವಂತೆ ಸಂಜು ಮರಡಿ ವೀಡಿಯೊದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next