Advertisement

ಬಾಲ್ಟಿಕ್‌ ಸಮುದ್ರದಲ್ಲಿ ಹಿಟ್ಲರ್‌ ಕಾಲದ ಗೂಢಲಿಪಿ ಯಂತ್ರ ಪತ್ತೆ!

05:26 PM Dec 06, 2020 | sudhir |

ಬರ್ಲಿನ್‌: 2ನೇ ವಿಶ್ವಯುದ್ಧ ವೇಳೆ ಹಿಟ್ಲರನ ನಾಜಿ ಪಡೆ ಗೂಢಲಿಪಿ ಸಂದೇಶ ಟೈಪ್‌ ಮಾಡಿ ಕಳುಹಿಸಲು ಬಳಸುತ್ತಿದ್ದ “ಎನಿಗ್ಮಾ ಕೋಡ್‌ ಮಶೀನ್‌’, ಬಾಲ್ಟಿಕ್‌ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ.

Advertisement

ಮೀನು ಬಲೆಯೊಳಗೆ ಸಿಲುಕಿದ್ದ ಈ ಗೂಢಲಿಪಿ ಯಂತ್ರವನ್ನು ನುರಿತ ಈಜುಪಟುಗಳು ಹೊರತೆಗೆದಿದ್ದಾರೆ. ಕಳೆದ ತಿಂಗಳು ಈಶಾನ್ಯ ಜರ್ಮನಿಯ ಬೇ ಆಫ್ ಗೆಲ್ಟಿಂಗ್‌ನ ಆಳದಲ್ಲಿ ಮೀನು ಬಲೆಗಳು ಕಂಡುಬಂದಿದ್ದವು. ಇದನ್ನು ಡಬ್ಲ್ಯುಡಬ್ಲ್ಯುಎಫ್ ನ ಪರಿಸರ ವಿಭಾಗದ ಈಜುಪಟುಗಳು ಹೊರತೆಗೆಯಲು ಮುಂದಾದಾಗ, ಹಿಟ್ಲರ್‌ ಕಾಲದ ಯಂತ್ರ ಪತ್ತೆಯಾಗಿದೆ.

ಐತಿಹಾಸಿಕ ವಸ್ತು ಎಂದು ತಿಳಿದ ಕೂಡಲೇ ಪುರಾತತ್ವ ಕಚೇರಿಗೆ ಇದನ್ನು ತಲುಪಿಸಲಾಗಿದ್ದು, ಮ್ಯೂಸಿಯಂನಲ್ಲಿ ಸಂರಕ್ಷಿಸಲು ನಿರ್ಧರಿಸಲಾಗಿದೆ.

3 ರಾಟರ್‌ ಉಳ್ಳ “ಎನಿಗ್ಮಾ ಕೋಡ್‌’ ಯಂತ್ರ ಶತ್ರುಗಳಿಗೆ ಸಿಗಬಾರದೆಂದು ನಾಜಿಪಡೆ ಯುದ್ಧದ ಕೊನೆಯ ದಿನಗಳಲ್ಲಿ ಸಮುದ್ರಕ್ಕೆ ಎಸೆದಿರಬಹುದು ಎಂದು ಇತಿಹಾಸ ತಜ್ಞರು ಊಹಿಸಿದ್ದಾರೆ.

ಇದನ್ನೂ ಓದಿ:ಪಾಂಡ್ಯ ಅಬ್ಬರ, ಧವನ್ ಅರ್ಧ ಶತಕ : ಆಸೀಸ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ

Advertisement

Advertisement

Udayavani is now on Telegram. Click here to join our channel and stay updated with the latest news.

Next