Advertisement

ದಿವಾಕರ ಶಾಸ್ತ್ರಿ ವಿರುದ್ಧದ ಸಮನ್ಸ್‌ ರದ್ದು

12:07 PM Apr 19, 2017 | Team Udayavani |

ಬೆಂಗಳೂರು: ಪುತ್ತೂರಿನ ಸಿ. ಆರ್‌ ಶ್ಯಾಮಶಾಸ್ತ್ರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ದಿವಾಕರ ಶಾಸ್ತ್ರಿಗೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಜಾರಿಗೊಳಿಸಿದ್ದ ಸಮನ್ಸ್‌ ಅನ್ನು ಮಂಗಳವಾರ ಹೈಕೋರ್ಟ್‌ ರದ್ದುಗೊಳಿಸಿದೆ.

Advertisement

ಖಾಸಗಿ ದೂರಿನ ಅನ್ವಯ ಪುತ್ತೂರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಅಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ದಿವಾಕರ ಶಾಸ್ತ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ  ಹೈಕೋರ್ಟ್‌, ಪ್ರಕರಣ ರದ್ದುಗೊಳಿಸಲು ನಿರಾಕರಿಸಿ, ಅಧೀನ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್‌ ರದ್ದುಪಡಿಸಿ ಆದೇಶ ನೀಡಿತು.

ಪ್ರಕರಣದ ಹಿನ್ನೆಲೆ: ಪುತ್ತೂರಿನ ಕೆದಿಲ ಗ್ರಾಮದ ನಿವಾಸಿ ಸಿ.ಆರ್‌ ಶ್ಯಾಮಶಾಸ್ತ್ರಿ 2014ರ ಆಗಸ್ಟ್‌ 31 ರಂದು ತಲೆಗೆ  ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗೋವಿಂದ ಶಾಸ್ತ್ರಿ ಎಂಬುವವರು, ಶ್ಯಾಮಶಾಸ್ತ್ರಿ ಸಾವಿನಲ್ಲಿ ಅವರ ಸಹೋದರ ದಿವಾಕರ ಶಾಸ್ತ್ರಿ ಮತ್ತಿತರ ಕೈವಾಡವಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌, ದಿವಾಕರ ಶಾಸ್ತ್ರಿಯವರಿಗೆ ಸಮನ್ಸ್‌ ಜಾರಿಗೊಳಿಸಿತ್ತು.

ಸಹೋದರ ಶ್ಯಾಮಶಾಸ್ತ್ರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿದೆ. ಹೀಗಿದ್ದರೂ, ವೈಯಕ್ತಿಕ ದ್ವೇಷ ಸಾಧನೆ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಖಾಸಗಿ ದೂರು ಸಲ್ಲಿಕೆಯಾಗಿದ್ದು,ಕೋರ್ಟ್‌ನಿಂದ ಸಮನ್ಸ್‌ ಜಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಕರಣ ರದ್ದುಗೊಳಿಸುವಂತೆ ಕೋರಿ ದಿವಾಕರ ಶಾಸ್ತ್ರಿ ಹೈಕೋರ್ಟ್‌ ಮೊರೆಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next