Advertisement
ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಕಂಟೋನ್ಮೆಂಟ್ ವಾರ್ಡ್ ನ ದಿವಾಕರ್ ಪಾಂಡೇಶ್ವರ್ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ನಿಂದ ಕೇಶವ್ ಅವರು ಸ್ಪರ್ಧೆ ಮಾಡಿದ್ದರು.
Related Articles
ನೂತನ ಉಪ ಮೇಯರ್ ಆಗಿ ಬಿಜೆಪಿಯ ಜಾನಕಿ ಯಾನೆ ವೇದಾವತಿ ಆಯ್ಕೆಯಾದರು.
Advertisement
ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ, ವಿ. ಪರಿಷತ್ ಸದಸ್ಯ ಐವನ್ ಡಿಸೋಜ ಉಪಸ್ಥಿತರಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಗೈರುಹಾಜರಾಗಿದ್ದರು.
ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ವಿ. ಯಶವಂತ್, ಅಪರ ಪ್ರಾದೇಶಿಕ ಆಯುಕ್ತೆ ಕೆ.ಎಂ. ಗಾಯತ್ರಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದು ಚುನಾವಣೆ ನಡೆಸಿಕೊಟ್ಟರು.