“ಹೌದಪ್ಪಾ, ಹೌದು!’.
ಟಿ.ವಿಯಲ್ಲಿ ನಟ ಶಿವಾಜಿ ಪ್ರಭು ಮೂಗು, ಹಣೆ, ತಲೆ ಹಿಂಡುತ್ತಾ ಹೇಳುವ ಈ ಜಾಹೀರಾತು ಒಂದೆಡೆ ನಗೆ ತರಿಸಿದರೆ, ಇನ್ನೊಂದೆಡೆ ಅನುಕಂಪ ಮೂಡಿಸುತ್ತದೆ. ಯಾಕಂದ್ರೆ, ನೆಗಡಿಯ ಗಡಿಬಿಡಿ, ಸಿಡಿಸಿಡಿ ಅನುಭವಿಸುವುದು ಕಷ್ಟವೇ. ಶೀತವಾದಾಗ, ಅಡುಗೆಮನೆಯಲ್ಲಿ ಇರುವ ಸಾಮಗ್ರಿಗಳನ್ನೇ ಔಷಧವಾಗಿ ಬಳಸಬಹುದು.
Advertisement
– ಬಿಸಿ ಹಾಲಿಗೆ ಕಲ್ಲು ಸಕ್ಕರೆ ಹಾಗೂ ಕಾಳು ಮೆಣಸಿನ ಪುಡಿ ಬೆರೆಸಿ ಕುಡಿಯಿರಿ.
Related Articles
Advertisement
– 50 ಗ್ರಾಂ ಹುರುಳಿ, 10 ಗ್ರಾಂ ನೆಲ್ಲಿಹೋಳು, 3 ಗ್ರಾಂ ಹಿಪ್ಪಲಿಯನ್ನು ಕುಟ್ಟಿ ಕಷಾಯ ಮಾಡಿ, ಸೋಸಿ ಕುಡಿಯಬೇಕು.
-ಬೆಳ್ಳುಳ್ಳಿ ಮತ್ತು ಬೆಲ್ಲವನ್ನು ಸಮ ಪ್ರಮಾಣದಲ್ಲಿ ಕುಟ್ಟಿ, ರಾತ್ರಿ ಮಲಗುವ ಮುನ್ನ ತಿನ್ನಿ.
-ಒಂದಷ್ಟು ಸಬ್ಬಸಿಗೆ ಸೊಪ್ಪಿಗೆ ಅದರ ಎರಡರಷ್ಟು ಜೇಷ್ಠ ಮಧು ಬೆರೆಸಿ ಕುಟ್ಟಿ ಚೂರ್ಣ ಮಾಡಿಕೊಳ್ಳಿ. ಆ ಚೂರ್ಣಕ್ಕೆ ಒಂದಕ್ಕೆ ಎರಡರಂತೆ ಸಕ್ಕರೆ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿ.
– ಅಮೃತಬಳ್ಳಿ ಸೊಪ್ಪಿಗೆ ಉಪ್ಪು ಬೆರೆಸಿ ಜಗಿದು ಅದರ ರಸ ನುಂಗಬೇಕು.
-ಅಳಲೆಕಾಯಿ, ಶುಂಠಿ ಮತ್ತು ಕಾಳು ಮೆಣಸನ್ನು ಹುರಿದು ಚೂರ್ಣ ಮಾಡಿ, ಸಮಾಂಶ ಬೆಲ್ಲದೊಂದಿಗೆ ಎಳ್ಳೆಣ್ಣೆ ಸೇರಿಸಿ ಕಲಸಿ ಕೊಂಚ ಕೊಂಚ ಸೇವಿಸಿ.
ಕೆ. ಶ್ರೀನಿವಾಸರಾವ್