ಅಳ್ನಾವರ: ಘೋಷಿತ 43 ಹೊಸ ತಾಲೂಕುಗಳನ್ನು ಏಕಕಾಲಕ್ಕೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಘೋಷಿತ ತಾಲೂಕುಗಳ ಜನರು ಬುಧವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ತಾಲೂಕುಗಳ ವಿಂಗಡನೆ ಮಾಡಿ ನೂತನ ತಾಲೂಕುಗಳನ್ನು ಜಾರಿಗೆ ತರುವುದು ಅಗತ್ಯವಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಿತ ಎಲ್ಲ 43 ಹೊಸ ತಾಲೂಕುಗಳಲ್ಲಿ ಯಾವೊಂದು ತಾಲೂಕನ್ನು ಕೈಬಿಡಬಾರದೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಮುಂಬರುವ ಆಯವ್ಯಯದಲ್ಲಿ ಜಾರಿಗೆ ತರಲೇಬೇಕು ಎಂದು ಒತ್ತಾಯಿಸಿದರು.
ಭರವಸೆ: ಅಳ್ನಾವರ ತಾಲೂಕು ಹೋರಾಟ ಸಮಿತಿ ಸದಸ್ಯರು ಕಲಘಟಗಿ ಕ್ಷೇತ್ರದ ಶಾಸಕ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ ಅವರ ನೇತೃತ್ವದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿ ಘೋಷಿತ ಅಳ್ನಾವರ ತಾಲೂಕು ಅನುಷ್ಠಾನಕ್ಕೆ ತರಬೇಕು ಎಂದು ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವ ಕಾಗೋಡು ತಿಮ್ಮಪ್ಪ ಅವರು, ಈ ಹಿಂದೆ ಘೋಷಿತ ಎಲ್ಲ ತಾಲೂಕುಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಬದ್ಧವಾಗಿದೆ. ಅನುದಾನದ ಲಭ್ಯತೆ ಆಧರಿಸಿ ಆದಷ್ಟು ಶೀಘ್ರದಲ್ಲಿ ತಾಲೂಕುಗಳನ್ನು ಅನುಷ್ಠಾನಕ್ಕೆ ತರಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಳ್ನಾವರ ತಾಲೂಕು ಹೋರಾಟ ಸಮೀತಿ ಅಧ್ಯಕ್ಷ ಮುಜಾಹಿದ ಕಂಟ್ರಾಕ್ಟರ್, ಪಪಂನ ಪ್ರಭಾರಿ ಅಧ್ಯಕ್ಷ ಉಸ್ಮಾನ ಬಾತಖಂಡೆ ಛಗನಲಾಲ ಪಟೇಲ, ಸುಮಿತ್ರಾ ಮಾಂಗಜಿ, ಸುನಂದಾ ಕಲ್ಲು, ಮಂಜುಳಾ ಮೇದಾರ, ಸತ್ತಾರ ಬಾತಖಂಡೆ, ನಾಗತರ್‍ನಾ ಜಮಖಂಡಿ,
ನಬೀಸಾಬ ಮುಜಾವರ, ತಮೀಮ, ಜೈಲಾನಿ, ಪರಮೇಶ್ವರ ತೇಗೂರ, ರಾಜೇಶ ಬೈಕೇರಿಕರ, ನಾರಾಯಣ ಗಡಕರ, ಪ್ರವೀಣ ಪವಾರ, ಅಶೋಕ ಬಸನ್ನವರ, ವಿನಾಯಕ ಕುರುಬರ, ಇಕ್ಬಾಲ ಅವರಾದಿ, ಸುರೇಂದ್ರ ಕಡಕೋಳ, ಶ್ರೀಕಾಂತ ಗಾಯಕವಾಡ, ನದೀಮ ಕಂಟ್ರಾಕ್ಟರ್, ಜಾವಿದ ಇದ್ದರು.