Advertisement
ಸದ್ಯ ಲಭ್ಯ ಮಾಹಿತಿ ಪ್ರಕಾರ ಎಲ್ಲ ಪಕ್ಷಗಳೂ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಇದರ ಮಧ್ಯದಲ್ಲಿ ಜಿ.ಪಂ.,ತಾ.ಪಂ. ಗಳ ಸ್ಥಾನಕ್ಕೆ ಚುನಾವಣೆ ನಡೆದರೆ ನಿರ್ವಹಣೆ ಕಷ್ಟ. ಹಾಗಾಗಿ ಸದ್ಯಕ್ಕೆ ಈ ಚುನಾವಣೆ ಕನಿಷ್ಠ ಐದಾರು ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ಈಗಾಗಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮತದಾರರ ಪಟ್ಟಿ ಅಂತಿಮವಾದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ಜಾತಿವಾರು ಹಾಗೂ ಕ್ಷೇತ್ರ ವಾರು ಸ್ಥಿತಿಗತಿಗಳ ಲೆಕ್ಕಾಚಾರ ಆರಂಭವಾಗಿದ್ದವು. ಯಾವ ಕ್ಷೇತ್ರದಲ್ಲಿ ಹೇಗಿದೆ ಎಂಬುದರ ಲೆಕ್ಕಾಚಾರವನ್ನೂ ಮುಖಂಡರು ಹಾಕಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಸ್ಥಳೀಯ ಅಧಿಕಾರವನ್ನು ಭದ್ರಪಡಿಸಲು ರಣತಂತ್ರ ರೂಪಿಸಲಾಗಿತ್ತು. ಆದರೀಗ ಎಲ್ಲ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಉಡುಪಿ ಜಿಲ್ಲಾ ಪಂಚಾಯತ್‌ನ 28 ಕ್ಷೇತ್ರಗಳ ಪೈಕಿ 14 ಹಾಗೂ ತಾಲೂಕು ಪಂಚಾಯ ತ್‌ನ 95 ಕ್ಷೇತ್ರಗಳ ಪೈಕಿ 49 ಸ್ಥಾನಗಳು ಮಹಿಳೆಯರಿಗೆ ಮೀಸಲಿ ರಿಸಿ ಆದೇಶ ಹೊರಡಿಸಿದೆ.
Related Articles
Advertisement
ಜಿ.ಪಂ. ಮೀಸಲಾತಿ ವಿವರಜಿ.ಪಂ.ನ 26 ಕ್ಷೇತ್ರಗಳಲ್ಲಿ ಮಹಿಳೆಯರಿಗೆ 14 ಸ್ಥಾನಗಳು ಸಿಕ್ಕಿವೆ. ಅನುಸೂಚಿತ ಜಾತಿಗೆ ಎರಡು ಸ್ಥಾನಗಳನ್ನು ನೀಡಿದ್ದು. ಅದರಲ್ಲಿ ಒಂದು ಮಹಿಳೆಗೆ ಮೀಸಲಿಟ್ಟಿದೆ. ಅನುಸೂಚಿತ ಪಂಗಡ ಒಂದು ಸ್ಥಾನದಲ್ಲಿ ಒಂದು ಮಹಿಳೆಗೆ, ಹಿಂದುಳಿದ ವರ್ಗ (ಅ)ದಲ್ಲಿರುವ ಒಟ್ಟು 7 ಸ್ಥಾನಗಳಲ್ಲಿ 4 ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗ (ಬಿ) 2 ಸ್ಥಾನದಲ್ಲಿ ಒಬ್ಬ ಪುರುಷ, ಒಬ್ಬ ಮಹಿಳೆಗೆ ಮೀಸಲಿಡಲಾಗಿದೆ. ಸಾಮಾನ್ಯ ಸ್ಥಾನಗಳನ್ನು ಒಟ್ಟು 15ರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಿಟ್ಟಿದೆ. ತಾ.ಪಂ. ವಿವರ
7 ತಾಲೂಕು ಪಂಚಾಯತ್‌ಗಳಲ್ಲಿ ಒಟ್ಟು ಇರುವ 95 ಸ್ಥಾನಗಳ ಪೈಕಿ ಮಹಿಳೆಯರಿಗೆ 49 ಸ್ಥಾನಗಳು ನಿಗದಿಯಾಗಿವೆ. ಹೆಬ್ರಿ 7 ಸ್ಥಾನದಲ್ಲಿ 4 ಮಹಿಳೆಯರಿಗೆ, ಬೈಂದೂರು 11 ಸ್ಥಾನದಲ್ಲಿ 6 ಮಹಿಳೆಯರಿಗೆ, ಕಾಪು 12 ಸ್ಥಾನದಲ್ಲಿ 6 ಮಹಿಳೆಯರಿಗೆ, ಉಡುಪಿ 13 ಸ್ಥಾನದಲ್ಲಿ 7 ಮಹಿಳೆ ಯರಿಗೆ, ಬ್ರಹ್ಮಾವರ, ಕಾರ್ಕಳ ತಲಾ 16 ಸ್ಥಾನದಲ್ಲಿ 8 ಮಹಿಳೆಯರಿಗೆ, ಕುಂದಾಪುರ 20 ಸ್ಥಾನದಲ್ಲಿ 10 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. -ಅವಿನ್ ಶೆಟ್ಟಿ