Advertisement

ಜಿಲ್ಲೆ ಹಾಲು ಒಕ್ಕೂಟ ಶೀಘ್ರ ಅಸ್ತಿತ್ವಕ್ಕೆ

04:03 PM Sep 23, 2020 | Suhan S |

ಚಿಕ್ಕಬಳ್ಳಾಪುರ: ರಾಜ್ಯದ ಮೂರು ಹಾಲು ಒಕ್ಕೂಟಗಳನ್ನು ಪ್ರತ್ಯೇಕಗೊಳಿಸಲು ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟಗಳು ಆಗುತ್ತಿವೆ ಎಂದುಕೆಎಂಎಫ್‌ ಹಾಗೂ ಕೋಚಿಮುಲ್‌ ನಿರ್ದೇಶಕ ಶ್ರೀ ನಿವಾಸ್‌ ರಾಮಯ್ಯ ಸುಳಿವು ನೀಡಿದರು.

Advertisement

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕಾಳಿನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೋಲಾರ-ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ-ಮೈಸೂರು ಸಹಿತ ಮೂರು ಒಕ್ಕೂಟಗಳನ್ನು ಪ್ರತ್ಯೇಕಗೊಳಿಸಲು ಒತ್ತಾಯ ಕೇಳಿ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೋಚಿಮುಲ್‌ನಿಂದ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಹಾಲು ಒಕ್ಕೂಟ ಕಾರ್ಯರಂಭಗೊಳ್ಳಲಿದೆ ಎಂದರು.

ಉದ್ಯೋಗ ಭದ್ರತೆ: ಕೋಚಿಮುಲ್‌ನಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಬಿಎಂಸಿಘಟಕಗಳನ್ನು ಹೊಸದಾಗಿ ತೆರೆಯಲು ನಿಯಂತ್ರಿಸಿ ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಹಾಲಿನ ಪುಡಿ ತಯಾರಿಕೆ ಮಾಡುವ ಕೆಲಸ ನೀಡಿ ಅವರಿಗೆ ಉದ್ಯೋಗ ಭದ್ರತೆ ನೀಡಲು ಆಡಳಿತ ಮಂಡಳಿ ನಿರ್ದೇಶಕರು ತೀರ್ಮಾನಿಸಿದ್ದಾರೆ ಎಂದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಳಿನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ ಎಂದರು.  ಹಾಲಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಯಲ್ಲಿ ಇಲ್ಲ. ಹೀಗಾಗಿ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ರಾಜ್ಯಪಶುಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಸಿಎಂ ಯಡಿಯೂರಪ್ಪ ಆರಂಭಿಸಿದರು. ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಾರಿಗೊಳಿಸಿದರು ಎಂದು ಹೇಳಿದರು.

ಕೋಚಿಮುಲ್‌ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ ಮಾತನಾಡಿ, ಸಮಾಜದಲ್ಲಿರುವ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಸಲುವಾಗಿ ಸಹಕಾರ ಕಾಯ್ದೆಯನ್ನು ತಿದ್ದುಪಡಿ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಸ್‌.ಸಿ/ಎಸ್‌.ಟಿ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಅವಕಾಶಕಲ್ಪಿಸಿದ್ದಾರೆ ಎಂದರು.

Advertisement

ಕಾರ್ಯಕ್ರಮದಲ್ಲಿ ಎಂಪಿಸಿಎಸ್‌ ಅಧ್ಯಕ್ಷಕೆ.ಎಂ.ವೆಂಕಟೇಶ್‌, ಉಪಾಧ್ಯಕ್ಷಕೆ.ಎಂ. ಕೃಷ್ಣಪ್ಪ, ಕೋಚಿಮುಲ್‌ ಉಪವ್ಯವಸ್ಥಾಪಕ ಬಿ.ವಿ.ಚಂದ್ರಶೇಖರ್‌, ವಿಸ್ತರಣಾಧಿಕಾರಿ ಎನ್‌.ಜಿ.ಜಯಚಂದ್ರ, ಭೂ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕ ಕೆ.ಎಂ.ಭೀಮೇಶ್‌, ಗ್ರಾಪಂ ಸದಸ್ಯಕೆ.ಎಸ್‌.ರಾಜಣ್ಣ, ಗಣೇಶ್‌, ಎಂಪಿಸಿಎಸ್‌ ನಿರ್ದೇಶಕರಾದಕೆ.ಎನ್‌. ರಾಜಣ್ಣ, ಕೆ.ಎನ್‌.ಆಂಜಿನಪ್ಪ, ಕೆ.ಬಿ.ನಾರಾಯಣಸ್ವಾಮಿ, ರಾಮಪ್ಪ, ಶಿಡ್ಲಘಟ್ಟ ತಾಲೂಕಿನಕಾಳಿನಾಯಕನಹಳ್ಳಿಹಾಲು ಉತ್ಪಾದಕರ ಸಹಕಾರ ಸಂಘದ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಕೋಚಿಮುಲ್‌ ನಿರ್ದೇಶಕ ಶ್ರೀನಿವಾಸ್‌ ರಾಮಯ್ಯ ಉದ್ಘಾಟಿಸಿದರು.

ಕೆ.ಎ.ರಾಮಚಂದ್ರಪ್ಪ, ಕೆ.ಎನ್‌.ರಾಜಣ್ಣ, ಮುಖ್ಯ ಕಾರ್ಯನಿರ್ವಾಹಕರಾದ ಕೆ.ಎಂ. ಶ್ರೀನಾಥ್‌, ಹಾಲು ಪರೀಕ್ಷರಾದಕೆ.ಪಿ.ಕೃಷ್ಣಪ್ಪ, ಸಹಾಯಕಕೆ.ಎ.ನಟರಾಜ, ಮುಖಂಡರಾದ ಮಂಜಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next