ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಮಿಣ್ ಸಂದ್ರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಜರುಗಿತು.
ತಹಶೀಲ್ದಾರ್ ನಾಹಿದಾ ಜಮ್ ಜಮ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ಸರ್ಕಾರ ರೈತರಿಗೆ ಹಲವಾರು ಸೌಲಭ್ಯಗಳನ್ನು ಹೊರತರುತ್ತಿದೆ. ಸರ್ಕಾರ ಗ್ರಾಮೀಣ ಜನತೆಗಾಗಿ ಉದ್ಯೋಗ ಖಾತರಿ ಮೂಲಕ ರೈತರ ಜಮೀನು ಹಾಗೂ ತಮ್ಮ ತಮ್ಮ ಗ್ರಾಮಗಳಲ್ಲಿ ಕೂಲಿ ಕೆಲಸಕ್ಕೆ ಉತ್ತೇಜನ ನೀಡಲಾಗುತ್ತಿದೆ.ಕಂದಾಯ ಇಲಾಖೆಯ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಮನೆ ಬಾಗಿಲಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ ರೇಷ್ಮೆ ಕೃಷಿ ಹಾಗೂ ಕುರಿ-ಮೇಕೆ ಸಾಕಾಣಿಕೆಗಳ ಮೂಲಕ ರೈತರು ನಮ್ಮಲ್ಲಿಯೇ ಉದ್ಯೋಗ ಸೃಷ್ಟಿಸಿಕೊಂಡು ಇತರರಿಗೆ ಉದ್ಯೋಗ ಕಲ್ಪಿಸುತ್ತಿರುವುದು ಅತ್ಯಂತ ಸಂತಸದ ವಿಷಯ. ಗ್ರಾಮೀಣಾಭಿವೃದ್ಧಿಯೇ ಸರಕಾರದ ಗುರಿ ಎಂದು ತಿಳಿಸಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದನಗೌಡ ಮಾತನಾಡಿ, ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು ನಮ್ಮ ಇಲಾಖೆಯು ಯುದ್ದೋಪಹಾದಿಯಲ್ಲಿ ರಾಸುಗಳಿಗೆ ಲಸಿಕೆ ಚಿಕಿತ್ಸೆ ನೀಡಲಾಗಿದೆ. ಚರ್ಮ ಗಂಟು ಕಾಯಿಲೆಯಿಂದ ಸಾವನ್ನಪ್ಪಿದ ರಾಸುಗಳಿಗೆ ಸರ್ಕಾರದಿಂದ ಪರಿಹಾರದ ಹಣವನ್ನು ಸಂದಾಯ ಮಾಡಲಾಗುತ್ತಿದೆ. ರಾಸುಗಳಲ್ಲಿ ಈ ರೋಗ ಕಂಡು ಬಂದಲ್ಲಿ ನೇರವಾಗಿ ಇಲಾಖೆಯ ಗಮನಕ್ಕೆ ತಂದು ಔಷದೋಪಚಾರ ಮಾಡಬಹುದಾಗಿದೆ. ರೈತರು ಕೊಟ್ಟಿಗೆಗಳನ್ನು ಸ್ವಚ್ಚವಾಗಿರಿಸತ್ತಕ್ಕದ್ದು, ಕಾಲು ಬಾಯಿ ಜ್ವರಕ್ಕೆ ಈ ಗ್ರಾಮದಲ್ಲಿ ಲಸಿಕೆ ಸಹ ನೀಡಲಾಗಿದೆ ರಾಸುಗಳಿಗೆ ಸರ್ಕಾರದ ಸಬ್ಸಿಡಿ ದರದಲ್ಲಿ ರಾಸುಗಳ ವಿಮೆ ಮಾಡಿಸಲಾಗುತ್ತಿದೆ. ಪ್ರತಿಯೊಬ್ಬ ರೈತರು ವಿಮೆ ಮಾಡಿಸಿಕೊಳ್ಳಲು ಮನವಿ ಮಾಡಿದರು. ಎಸ್ಸಿ ಎಸ್ಟಿ ರೈತರಿಗೆ ರಬ್ಬರ್ ನೆಲಹಾಸು ರಾಸುಗಳಿಗೆ ನೀಡಲಾಗುತ್ತಿದೆ. ರಸಮೇವು ಘಟಕ, ಹಾಗೂ ಪರಿಕರಗಳ ವಿತರಣೆ ಮಾಡಲಾಗುತ್ತಿದೆ ರಾಸುಗಳಿಗೆ ಸತ್ವಗಳಿರುವ ಮೇವನ್ನು ಬಳಸಬೇಕು. ಸರ್ಕಾರದ ಅಮೃತ ಯೋಜನೆ ಗುರಿಯನ್ನು ಸರ್ಕಾರ ನೀಡಿದ್ದು ಅರ್ಜಿ ಕರೆದಿದ್ದು ಸರ್ಕಾರ ಮಂಜೂರು ಮಾಡಲಿದೆ. ಹಾಗೂ ಎಸ್ಸಿ ಪಿ.ಟಿ.ಎಸ್. ಅಡಿಯಲ್ಲಿ ಕುರಿ ಮೇಕೆ ಘಟಕಕ್ಕೂ ಉತ್ತೇಜನ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾವತ್ತೂರು ಗ್ರಾ. ಪಂ ಅದ್ಯಕ್ಷರಾದ ಅನುಸೂಯಮ್ಮ, ಸದಸ್ಯರಾದ ಮಂಜುನಾಥ್, ಭಾಗ್ಯಮ್ಮ, ಹನುಮಂತರಾಯಪ್ಪ, ಕುಮಾರ್, ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ವೈ.ಕೆ ಬಾಲಕೃಷ್ಣ, ವೈಧಾದ್ಯಿಕಾರಿ ಡಾ. ವಿಜಯ ಕುಮಾರ್ , ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ಪಂಚಾಯತ್ ರಾಜ್ ಇಂಜಿನಿಯರ್ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ಉಮಾದೇವಿ, ತೋಟಗಾರಿಕೆಯ ಗೋವಿಂದರಾಜು, ಮೀನುಗಾರಿಕೆ ಸಹಾಯಕ ನಿರ್ದೇಶಕ ಮಹೇಶ್ವರ್, ವಲಯ ಅರಣ್ಯಾಧಿಕಾರಿ ಸುರೇಶ್, ಎ.ಡಿ ಎಲ್.ಆರ್ ಬಿ.ಸಿ ಮಹೇಶ್, ರಾಜಸ್ವ ನಿರೀಕ್ಷಕ ಜಯಪ್ರಕಾಶ್, ಪ್ರತಾಪ್ ಕುಮಾರ್ , ಮುಖ್ಯ ಶಿಕ್ಷಕ ಗೋಪಿನಾಥ್ , ಗ್ರಾಮ ಲೆಕ್ಕಾಧಿಕಾರಿಗಳಾದ ರಂಜಿತಾ, ರಶ್ಮಿ, ಮಧು, ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.