Advertisement
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಗ್ರಾಮೀಣ ಪ್ರದೇಶದ ಕೃಷಿಕರಿಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತ. ಗ್ರಾಮೀಣ ಭಾಗದ ಜನರು ಹೈನುಗಾರಿಕೆ ಯಲ್ಲಿ ಹೊಸದಾಗಿ ಬಂದಿರುವ ಉಪಕರಣ ಗಳು ಹಾಗೂ ಸರಿಯಾದ ಮಾಹಿತಿ ಪಡೆದುಕೊಂಡು ಆರ್ಥಿಕ ಅಭಿವೃದ್ಧಿ ಸಾಧಿಸುವಂತಾಗಲಿ ಎಂದರು. ಸ್ಥಳೀಯರಿಂದ ಬಂದ ಬೇಡಿಕೆಗಳಿಗೆ ಉತ್ತರಿಸಿದ ಅವರು, ಪಟ್ರಮೆಯ ಪ್ರಮುಖ ಸಂಪರ್ಕ ರಸ್ತೆಗೆ ಈಗಾಗಲೇ 8 ಕೋಟಿ ರೂ. ಪ್ರಸ್ತಾವನೆ ಕಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮಂಜೂರಾತಿಯಾಗಬಹುದು ಎಂದರು. ಅನಾರು ಸರಕಾರಿ ಶಾಲೆಯ ದುಸ್ಥಿತಿ ಬಗ್ಗೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಸ್ಥಳೀಯರು ಮುತುವರ್ಜಿ ವಹಿಸಬೇಕು. ಪ್ರಸ್ತುತ ಕೊಠಡಿಗಳ ಕೊರತೆಯಿಂದಾಗಿ ಊರವರು ದಾನಿಗಳ ನೆರವಿನಿಂದ ನಿರ್ಮಿ ಸುತ್ತಿರುವ 20 ಲಕ್ಷ ರೂ. ವೆಚ್ಚದ ಸಭಾಂಗಣಕ್ಕೆ 2 ಲಕ್ಷ ರೂ. ನೆರವು ಒದಗಿಸುವುದಾಗಿ ಭರವಸೆ ನೀಡಿದರು.
ಬೆಳಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಶ್ರೀ ವಿಲಿಯಂ ಲೋಬೋ ಕರಾಯ ಅವರು ಆಧುನಿಕ ಲಾಭದಾಯಕ ಹೈನುಗಾರಿಕಾ ಅನುಭವ ವಿಷಯದ ಬಗ್ಗೆ ಮಾತನಾಡಿ, ಉತ್ತಮ ಮಟ್ಟದ ರಾಸುಗಳ ಆಯ್ಕೆ, ಹಾಲು ಉತ್ಪಾದಕರ ಸಂಘವು ನೀಡುತ್ತಿರುವ ಹಿಂಡಿಗಳ ಸರಿಯಾದ ಪ್ರಮಾಣದ ಬಳಕೆ, ಹೈನುಗಾರಿಕೆಯ ಉಪ ಉತ್ಪನ್ನಗಳನ್ನು ಸರಿಯಾದ ರೀತಿಯಲ್ಲಿ ಕೃಷಿಯಲ್ಲಿ ತೊಡಗಿ ಸುವಿಕೆ ಮೊದಲಾದ ಕ್ರಮಬದ್ಧವಾದ ರೀತಿ ಯಲ್ಲಿ ಹೈನುಗಾರಿಕೆ ನಡೆಸುವುದರಿಂದ ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದೆ ಎಂದರು. ಪಶು ವೈದ್ಯಾಧಿಕಾರಿ ಡಾ| ಮನೋಹರ ಉಪಾಧ್ಯಾಯ ಅವರು, ಜಾನುವಾರುಗಳಿಗೆ ಬರುವ ರೋಗಗಳ ತಡೆಗಟ್ಟುವಿಕೆಯಲ್ಲಿ ಸ್ಥಳೀಯ ನಾಟಿ ಔಷಧಿಗಳ ಬಗ್ಗೆ ಮಾಹಿತಿ ನೀಡಿ ಹಲವು ರೋಗಗಳಿಗೆ ಶಮನ ಮಾಡುವುದಕ್ಕಾಗಿ ಹಾಗೂ ರೋಗ ಬರದಂತೆ ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಪಟ್ರಮೆ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಕಜೆ ಸಭಾಧ್ಯಕ್ಷತೆ ವಹಿಸಿದ್ದರು. ಡಾ| ಜಯಕೀರ್ತಿ ಜೈನ್ ಅವರ ಉಸ್ತುವಾರಿಯಲ್ಲಿ ಅನಾರು ಹಾಲು ಉತ್ಪಾದಕರ ಸ.ಸಂಘದ ಸದಸ್ಯರು, ಹಾಗೂ ಸ್ವ ಸಹಾಯ ಸಂಘಗಳ ಸ್ವಯಂ ಸೇವಕರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಭಾರೀ ಗಾತ್ರದ ಎಮ್ಮೆ, ಹಾಗೂ ಹಲವು ದೇಶೀ ಹಾಗೂ ಇನ್ನಿತರ ತಳಿಗಳ ರಾಸುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು.
Related Articles
Advertisement
ಪ್ರದರ್ಶನಜಾನುವಾರು ಜಾತ್ರೆಯಲ್ಲಿ 100ಕ್ಕೂ ಅಧಿಕ ವಿವಿಧ ತಳಿಯ ಜಾನುವಾರು ಹಾಗೂ ಕರುಗಳ ಪ್ರದರ್ಶನ ನಡೆಯಿತು. ಹೈನುಗಾರಿಕೆಗೆ ಸಂಬಂಧಪಟ್ಟ ಔಷಧ ಹಾಗೂ ಯಂತ್ರೋಪಕರಣಗಳು, ವಿವಿಧ ರೀತಿಯ ಹಿಂಡಿಗಳ ಮಳಿಗೆಗಳ ಪ್ರದರ್ಶನ ಕೂಡಾ ನಡೆಯಿತು. ಗ್ರಾಮೀಣ ಭಾಗದಲ್ಲಿ ನಡೆದ ಜಾನುವಾರು ಜಾತ್ರೆಗೆ ಜನರು ಕೂಡಾ ಉತ್ಸಾಹದಿಂದ ಭಾಗವಹಿಸಿ ಮಾಹಿತಿ ಪಡಕೊಂಡರು.