Advertisement
ಅವಿಭಜಿತ ದ.ಕ. ಜಿಲ್ಲೆಯ 8 ತಾಲೂಕುಗಳಲ್ಲಿ ನಡೆದ ತಾಲೂಕು ಮಟ್ಟದ “ಚಿಣ್ಣರ ಬಣ್ಣ’ ಸ್ಪರ್ಧೆಗಳಲ್ಲಿ ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಈ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹರಾಗಿದ್ದು, ಈಗಾಗಲೇ ಸ್ಪರ್ಧೆಗೆ ಆಹ್ವಾನ ನೀಡಿದವರು ಮಾತ್ರ ಭಾಗವಹಿಸಬಹುದು. 1ರಿಂದ 7ನೇ ತರಗತಿ ವಿದ್ಯಾರ್ಥಿಗಳು ಯಾವುದೇ ವಿಷಯಗಳಲ್ಲಿ ಚಿತ್ರ ಬರೆಯಬಹುದು. ಆದರೆ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ರಚಿಸಿದ್ದ ಚಿತ್ರಗಳನ್ನು ಮತ್ತೆ ಚಿತ್ರಿಸುವಂತಿಲ್ಲ. 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು. ಸ್ಪರ್ಧೆಯ ಬಳಿಕ ನಡೆಯುವ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಲಿದ್ದಾರೆ.
Advertisement
ಉದಯವಾಣಿ-ಕೆನರಾ “ಚಿಣ್ಣರ ಬಣ್ಣ’ -2019: ನ.3: ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ
11:21 PM Nov 01, 2019 | mahesh |
Advertisement
Udayavani is now on Telegram. Click here to join our channel and stay updated with the latest news.