Advertisement

 ಜಿಲ್ಲಾ ಮಟ್ಟದ ಅಕ್ಷರೋತ್ಸವ 2017

11:58 AM Dec 20, 2017 | |

ಮುಡಿಪು: ಪ್ರತಿಯೊಬ್ಬರು ಅಕ್ಷರಜ್ಞಾನಿಗಳಾದಾಗ ಮಾತ್ರ ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ಮುಡಿಪುವಿನ ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಮಾದರಿ ಗ್ರಾಮಾಭಿವೃದ್ಧಿ ಆಂದೋಲನ ಸಮಾಜ ಕಾರ್ಯ ಸಂಸ್ಥೆ ಜನ ಶಿಕ್ಷಣ ಟ್ರಸ್ಟ್‌, ಗ್ರಾಮ ವಿಕಾಸ ಕೇಂದ್ರ, ಅಪ್ನಾ ದೇಶ್‌ ಬಳಗ, ಸುಗ್ರಾಮ ಸಂಘ, ಸೆಲ್ಕೋ ಫೌಂಡೇಶನ್‌, ಆದಿವಾಸಿ ಅಭಿವೃದ್ಧಿ ಸಂಘ ಹಾಗೂ ಗ್ರಾಮ ಪಂಚಾಯತ್‌ಗಳ ಸಹಭಾಗಿತ್ವದಲ್ಲಿ ಮಂಗಳವಾರ ಜರಗಿದ ನವಸಾಕ್ಷರರ ಸಂಘಟನೆಯ 26ನೇ ವರ್ಷಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಅಕ್ಷರೋತ್ಸವ 2017ರಲ್ಲಿ ಸ್ವಚ್ಛತಾ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು. ಶೋಷಣೆಮುಕ್ತ ಸಮಾಜಕ್ಕೆ ನವಸಾಕ್ಷರರು ಕಾರಣೀಭೂತರಾಗಬೇಕು. ಜಾತಿ ಧರ್ಮದ ಆಧಾರದಲ್ಲಿ ಸಮಾಜವನ್ನು ವಿಭಜಿಸುವುದರ ವಿರುದ್ಧ ಜಾಗೃತರಾಗಬೇಕು ಎಂದರು.

ಜಿಲ್ಲಾ ಸ್ವಚ್ಛತಾ ರಾಯಭಾರಿ ಹಾಗೂ ಜನಶಿಕ್ಷಣ ಟ್ರಸ್ಟ್‌ ಮುಖ್ಯಸ್ಥ ಶೀನ ಶೆಟ್ಟಿ ಮಾತನಾಡಿ, ಬಡ ಜನರು ಇಂದು ಸಂಘಟನೆಯ ಮೂಲಕ ಸಶಕ್ತರಾಗಿದ್ದಾರೆ. ನವಸಾಕ್ಷರತೆಗೆ ತನ್ನದೇ ಆದ ಶಕ್ತಿ ಇದ್ದು, ಇದು ನಿರಂತರವಾಗಿ ನಡೆಯಬೇಕು. ಅಕ್ಷರ ಉತ್ಸವ ಕೇವಲ ಒಂದು ಗ್ರಾಮ ಅಥವಾ ಜಿಲ್ಲೆಗೆ ಸೀಮಿತವಾಗಿರಬಾರದು ಹಾಗೂ ಈ ಉತ್ಸವದಲ್ಲಿ ಕಟ್ಟ ಕಡೆಯ ಬಡವನೂ ಭಾಗವಹಿಸುವಂತಾಗಬೇಕು ಎಂದರು.

ನವ ಸಾಕ್ಷರೆ ಸೀತಾ ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲದ ಬಾನುಲಿ ಸಮುದಾಯ ರೇಡಿಯೋದ ಶ್ಯಾಮ್‌ ಭಟ್‌, ತಾ.ಪಂ.ಸದಸ್ಯ ಹೈದರ್‌ ಕೈರಂಗಳ, ಸೆಲ್ಕೋ ಸೀನಿಯರ್‌ ಮ್ಯಾನೇಜರ್‌ ಸಂಜೀತ್‌ ರೈ, ಹಿರಿಯ ಸಾಕ್ಷರತಾ ಕಾರ್ಯಕರ್ತ ಗಂಗಾಧರ ಶೆಟ್ಟಿ, ಶಿಕ್ಷಣ ಪ್ರೇಮಿ ರಮೇಶ್‌ ಶೇಣವ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ಪಂಚಾಯತ್‌ ಸದಸ್ಯ ಚಂದ್ರಪ್ರಕಾಶ್‌, ಆದಿವಾಸಿ ಕೊರಗ ಜನಾಂಗದ ಮುಖಂಡ ಮುಂಗುಲಿ ಕೊರಗ, ಸುಗ್ರಾಮ ಸದಸ್ಯೆ ಲೀಲಾವತಿ ಶಿವರಾಂ, ಬಾಳೆಪುಣಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಲೀಲಾವತಿ, ಆಕೃತಿ ಆಶಾ ಪ್ರಕಾಶನದ ಮುಖ್ಯಸ್ಥ ನಾಗೇಶ್‌ ತಲ್ಲೂರು, ಚಿತ್ತಾರ ಬಳಗದ ಅಧ್ಯಕ್ಷ, ಇರಾ ಗ್ರಾ. ಪಂ. ಅಧ್ಯಕ್ಷ ರಝಾಕ್‌ ಕುಕ್ಕಾಜೆ, ಬೆಳ್ಮ ಗ್ರಾಮ ಪಂಚಾಯತ್‌ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ ಉಪಸ್ಥಿತರಿದ್ದರು.

ನವಸಾಕ್ಷರರಾಗಿ ಸಾಧನೆ ಮಾಡಿದವರು ತಮ್ಮ ಯಶೋಗಾಥೆಯನ್ನು ವಿವರಿಸಿದರು. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಂಗನವಾಡಿ ಕೇಂದ್ರದ ಅಭಿವೃದ್ಧಿ ಮಾಹಿತಿ ನೀಡಿದರು. ಜನಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ಬನ್ನೂರು ಅಂಗನವಾಡಿ ಪ್ರೇರಕಿ ಅರುಣಾ ಡಿ. ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next