Advertisement
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರನ್ನು ಅಥವಾ ಕನ್ನಡ ಅಭಿಮಾನಿಗಳನ್ನು ಸೇರಿಸಬಾರದೆಂದುನಿರ್ಬಂಧ ಹೇರಿದ್ದರಿಂದ ಸಮ್ಮೇಳನದಲ್ಲಿ ಸರಳದ ನೆಪದಲ್ಲಿ ಸಂಪೂರ್ಣವಾಗಿ ಸರಳವಾಗಿ ನಡೆಯಿತು. ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ನಿಲುವುಮತ್ತು ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ವಿಷಯದಲ್ಲಿ ಏನು ಕಾರ್ಯಕ್ರಮರೂಪಿಸಲಾಗಿದೆ ಎಂಬುದು ತಿಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಗೈರು ಹಾಜರಾಗಿದ್ದರು.
Related Articles
Advertisement
ಕೋವಿಡ್ ಸೋಂಕು ಕಾರಣ 500 ಮಂದಿಗೆ ಮಾತ್ರ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರ ಅನ್ವಯ ಕನ್ನಡಪರ ಹೋರಾಟಗಾರರು-ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಸಾಪ ಸದಸ್ಯರಿಗೆಮಾಹಿತಿ ನೀಡಲಾಗಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ ನಿರಾಧಾರ. ಜಿಲ್ಲೆಯ ಶಾಸಕರಿಗೆ ಖುದ್ದಾಗಿ ಭೇಟಿ ನೀಡಿ ಆಮಂತ್ರಣ ನೀಡಿದ್ದೇನೆ. ಅವರು ಯಾಕೆ ಬಂದಿಲ್ಲ ಎಂಬುದು ಗೊತ್ತಿಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೈವಾರ ಶ್ರಿನಿವಾಸ್ ಸ್ಪಷ್ಟಪಡಿಸಿದರು.
ಭಾಷಾಭಿಮಾನಿಗಳ ಕೊರತೆ :
ಸಮ್ಮೇಳನದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಹಿತ್ಯಾಭಿಮಾನಿಗಳು ಬಂದಿಲ್ಲ. ಕನ್ನಡಪರ ಸಂಘಟನೆಗಳ ಸದಸ್ಯರು ಸಹ ಕಾಣಿಸಲಿಲ್ಲ. ಕೆಲವರು ಒಲ್ಲದ ಮನಸ್ಸಿನಿಂದ ಸಮ್ಮೇಳನಕ್ಕೆ ಬಂದು ಕಾರ್ಯಕ್ರಮ ನೋಡಿ ಇದು ಜಿಲ್ಲಾ ಸಮ್ಮೇಳನವೋ? ಅಥವಾ ತಾಲೂಕು ಸಮ್ಮೇಳನವೋ? ಎಂದು ಬೇಸರ ವ್ಯಕ್ತಪಡಿಸಿದರು. ಸಮ್ಮೇಳನದ ಅಂಗವಾಗಿ ಪುಸ್ತಕಗಳ ಮಳಿಗೆಗಳನ್ನು ಹಾಕಿದರೂ ಸಹ ಸಮ್ಮೇಳನದಲ್ಲಿ ಸಾಹಿತ್ಯ ಅಭಿಮಾನಿಗಳ ಕೊರತೆಯಿಂದ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ಸಹ ಕುಂಠಿತಗೊಂಡಿತ್ತು