Advertisement

ಜಿಲ್ಲಾ ಉಸ್ತುವಾರಿ ಬದಲಾವಣೆ: ತವರು ಜಿಲ್ಲೆ ಬಹುತೇಕ ಸಚಿವರಿಗೆ ಇಲ್ಲ

04:37 PM Jan 24, 2022 | Team Udayavani |

ಬೆಂಗಳೂರು : ಆರು ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿ ಪಟ್ಟಿ ಬಿಡುಗಡೆ ಮಾಡುವಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಯಶಸ್ವಿಯಾಗಿದ್ದು, ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದು, ಬಹುತೇಕ ಸಚಿವರಿಗೆ ತವರು ಜಿಲ್ಲೆಯ ಉಸ್ತುವಾರಿ ತಪ್ಪಿಸಲಾಗಿದೆ.

Advertisement

ಕರಾವಳಿ ಜಿಲ್ಲೆಗಳಲ್ಲಿ ಈ ಬದಲಾವಣೆ ಭಾರಿ ಚರ್ಚೆಗೆ ಕಾರಣವಾಗಿದ್ದು, ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ನೀಡಲಾಗಿದ್ದು, ಉತ್ತರ ಕನ್ನಡದ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯ ಜವಾಬ್ದಾರಿ ನೀಡಲಾಗಿದೆ. ಉಡುಪಿಗೆ  ಅಂಗಾರ, ದಕ್ಷಿಣ ಕನ್ನಡಕ್ಕೆ ವಿ.ಸುನೀಲ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಆರ್ ಎಸ್ ಎಸ್ ಹಾಗೂ ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಸಚಿವರಿಗೆ ತವರು ಜಿಲ್ಲೆಯ ಉಸ್ತುವಾರಿಯನ್ನು ತಪ್ಪಿಸಲಾಗಿದೆ ಎಂದು ಹೇಳಲಾಗಿದೆ.

ಪಟ್ಟಿ ವಿವರ ಹೀಗಿದೆ

ಶ್ರೀರಾಮುಲು ಅವರಿಗೆ ಮಾತ್ರ ತವರು ಜಿಲ್ಲೆಯ ( ಬಳ್ಳಾರಿ) ಉಸ್ತುವಾರಿ ಭಾಗ್ಯ ಮರಳಿ ದೊರೆತಿದೆ.

Advertisement

ಆರ್.ಅಶೋಕ ಹಾಗೂ ಮಾಧುಸ್ವಾಮಿ ಅವರಿಗೆ ಯಾವುದೇ ಉಸ್ತುವಾರಿ ನೀಡಿಲ್ಲ.

ಆದರೆ ಎಸ್.ಟಿ.ಸೋಮಶೇಖರ್(ಮೈಸೂರು) ಹಾಗೂ ಅಶ್ವತ್ಥನಾರಾಯಣ (ರಾಮನಗರ )ಅವರಿಗೆ ಮಾತ್ರ ಈ ಹಿಂದೆ ಇದ್ದ ಜಿಲ್ಲೆಯ ಉಸ್ತುವಾರಿ ಮುಂದುವರಿಸಲಾಗಿದೆ

ಗೋವಿಂದ ಕಾರಜೋಳ- ಬೆಳಗಾವಿ

ಕೆ.ಎಸ್.ಈಶ್ವರಪ್ಪ-ಚಿಕ್ಕಮಗಳೂರು

ವಿ.ಸೋಮಣ್ಣ-ಚಾಮರಾಜನಗರ

ಉಮೇಶ್ ಕತ್ತಿ- ವಿಜಯಪುರ

ಆರಗ ಜ್ಞಾನೇಂದ್ರ-ತುಮಕೂರು

ಸಿ.ಸಿ.ಪಾಟೀಲ್-ಬಾಗಲಕೋಟೆ

ಆನಂದ್ ಸಿಂಗ್ -ಕೊಪ್ಪಳ

ಪ್ರಭು ಚೌಹಾಣ್-ಯಾದಗಿರಿ

ಮುರುಗೇಶ್ ನಿರಾಣಿ-ಕಲಬುರಗಿ

ಎಸ್.​ಟಿ.ಸೋಮಶೇಖರ್-ಮೈಸೂರು

ಬಿ.ಸಿ.ಪಾಟೀಲ್-ಚಿತ್ರದುರ್ಗ, ಗದಗ

ಬೈರತಿ ಬಸವರಾಜ್-ದಾವಣಗೆರೆ

ಡಾ.ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ

ಕೆ.ಗೋಪಾಲಯ್ಯ-ಹಾಸನ, ಮಂಡ್ಯ

ಶಶಿಕಲಾ ಜೊಲ್ಲೆ-ವಿಜಯನಗರ

ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ

ಕೆ.ಸಿ.ನಾರಾಯಣಗೌಡ-ಶಿವಮೊಗ್ಗ

ಬಿ.ಸಿ.ನಾಗೇಶ್-ಕೊಡಗು

ಹಾಲಪ್ಪ ಆಚಾರ್-ಧಾರವಾಡ

ಶಂಕರ ಪಾಟೀಲ್ ಮುನೇನಕೊಪ್ಪ-ರಾಯಚೂರು, ಬೀದರ್

ಮುನಿರತ್ನ-ಕೋಲಾರ

Advertisement

Udayavani is now on Telegram. Click here to join our channel and stay updated with the latest news.

Next