Advertisement

ಜಿಲ್ಲಾ ಹಿಂದೂ ಅಧಿವೇಶನ 

09:36 AM Dec 31, 2017 | Team Udayavani |

ಮಹಾನಗರ: ಹಿಂದೂ ಅಧಿವೇಶನ ಧರ್ಮದ ಉಳಿವಿಗಾಗಿ ನಡೆಸುವ ಹೋರಾಟವಾಗಿದ್ದು, ಭ್ರಷ್ಟಾಚಾರ, ಬಡತನ, ಭಯೋತ್ಪಾದನೆಯನ್ನು ಹೋಗಲಾಡಿಸುವುದೇ ಇದರ ಉದ್ದೇಶವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಅಭಿಪ್ರಾಯಪಟ್ಟರು. ಅವರು ಶನಿವಾರ ನಗರದ ಕೊಡಿಯಾಲ್‌ಬೈಲ್‌ ಶಾರದಾ ವಿದ್ಯಾಲಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಹಿಂದೂ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

Advertisement

ಒಂದಾಗುವುದು ಅನಿವಾರ್ಯ
ಅಧಿವೇಶನವನ್ನು ಉದ್ಘಾಟಿಸಿದ ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಗೌರವಾಧ್ಯಕ್ಷ ಮಧುಸೂಧನ ಅಯ್ಯರ್‌ ಮಾತನಾಡಿ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯಿಂದ ಎಲ್ಲ ಹಿಂದೂ ಸಂಘಟನೆಗಳನ್ನು ಒಂದೇ ವೇದಿಕೆಗೆ ಸೇರಿಸುವಂತಹ ಮಹಾನ್‌ ಕಾರ್ಯ ನಡೆಯುತ್ತಿದೆ. ಕೆಲವೊಂದು ಸಂಘಟನೆಗಳು ಸಮಾಜದ ಕೊಲೆ, ಅಪರಾಧ ಕೃತ್ಯಗಳನ್ನು ಸನಾತನ ಸಂಸ್ಥೆಯ ಮೇಲೆ ಹೊರಿಸುವ ಷಡ್ಯಂತ್ರಗಳನ್ನು ನಡೆಸುತ್ತಿದೆ. ಆದರೆ ಹಿಂದೂ ಅಧಿವೇಶನದ ಮೂಲಕ ಎಲ್ಲರೂ ಒಂದಾಗುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಉದ್ಯಮಿ ಶ್ರೀನಿವಾಸ ಕಿಣಿ ಉಪಸ್ಥಿತರಿದ್ದರು. ಬೆಳ್ತಂಗಡಿಯ ಬಂದಾರು ಗ್ರಾಮ ಪಂಚಾಯತ್‌ ಅಧ್ಯಕ್ಷ
ಉದಯ ಕುಮಾರ್‌ ಬಿ.ಕೆ., ಕಾನರ್ಪದ ಚಿರಂಜೀವಿ ಯುವಕ ಮಂಡಲದ ಸಂಚಾಲಕ ಜಯರಾಜ್‌ ಸಾಲ್ಯಾನ್‌ ತಮ್ಮ ಅಭಿಪ್ರಾಯ ತಿಳಿಸಿದರು. ಅಧಿವೇಶನದಲ್ಲಿ ಹಿಂದೂ ನೇತಾರರ ಹತ್ಯೆ, ದೇವಸ್ಥಾನಗಳ ರಕ್ಷಣೆ, ಗಲಭೆಪೀಡಿತ ಹಿಂದೂಗಳ ರಕ್ಷಣೆ, ಮತಾಂತರಕ್ಕೆ ತಡೆ, ಹಿಂದೂ ಸಂಘಟನೆಗಳ ದಮನ ನೀತಿಯ ಕುರಿತು ಚರ್ಚೆಗಳು ನಡೆದವು.

ಒಗ್ಗಟ್ಟಾಗಬೇಕಿದೆ
ದೇಶದಲ್ಲಿ ಗೋಹತ್ಯೆ ನಿಷೇಧ, ಸಮಾನ ನಾಗರಿಕ ಕಾಯ್ದೆ ಮೊದಲಾದ ಕಾರ್ಯಗಳ ಈಡೇರಿಕೆಗಾಗಿ ಮುಂದೆ ಸಮಿತಿಯ ಸುರಾಜ್ಯ ಅಭಿಯಾನವನ್ನು ಆರಂಭಿಸಲಿದೆ. ವ್ಯವಸ್ಥೆಯ ಬದಲಾವಣೆಗಾಗಿ ಕಾಲ ಪಕ್ವ ವಾಗಿದ್ದು, ರಾಷ್ಟ್ರಭಕ್ತರ ಸಂಘಟನೆಗಳು ಒಗ್ಗಟ್ಟಾಗ ಬೇಕಿದೆ. ಈ ಮೂಲಕ ಸಾಮಾಜಿಕ ಪಿಡುಗು ದೂರವಾಗಬೇಕಿದೆ.
–  ಮೋಹನ ಗೌಡ,
   ರಾಜ್ಯ ವಕ್ತಾರ ಹಿಂದೂ ಜನಜಾಗೃತಿ ಸಮಿತಿ 

Advertisement

Udayavani is now on Telegram. Click here to join our channel and stay updated with the latest news.

Next