ಬ್ರಹ್ಮಾವರ: ಹೊಸ ತಾಲೂಕು ರಚನೆ ಅಭಿವೃದ್ಧಿ ದೃಷ್ಟಿಯಿಂದ ಪೂರಕ. ಆದರೆ ಕೇವಲ ಘೋಷಣೆಯಾದರೆ ಸಾಲದು, ಶೀಘ್ರ ಸಮರ್ಪಕ ಅನುಷ್ಠಾನ ಅತ್ಯಗತ್ಯ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಅವರು ಶನಿವಾರ ಬ್ರಹ್ಮಾವರ ತಾಲೂಕು ಹೋರಾಟಗಾರರ ಅಭಿನಂದನಾ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮುಂದೆ ಬ್ರಹ್ಮಾವರಕ್ಕೆ ಪುರಸಭೆ ಮಂಜೂರಾಗಬೇಕು ಎಂದರು. ಸುಸಜ್ಜಿತ ಕಚೇರಿ ತಾಲೂಕು ರಚನೆ ಸಂದರ್ಭ ಸುಸಜ್ಜಿತ ತಾ. ಪಂ. ಕಟ್ಟಡ, ತಾಲೂಕು ನ್ಯಾಯಾಲಯ, ತಾಲೂಕು ಆಸ್ಪತ್ರೆ, ವಿವಿಧ ಇಲಾಖೆಗಳ ಕಚೇರಿ ನಿರ್ಮಾಣವಾಗಬೇಕು. ಬ್ರಹ್ಮಾವರ ತಾಲೂಕಿಗೆ ಈಗಾಗಲೇ ವಾರಂಬಳ್ಳಿಯಲ್ಲಿ ಮೀಸಲಿರಿಸಿದ 13 ಎಕ್ರೆ ಜಾಗದಲ್ಲಿ ಸುಮಾರು 6 ಎಕ್ರೆಯನ್ನು ಗೃಹ ಮಂಡಳಿಗೆ ನೀಡಲಾಗಿದೆ. ಇದನ್ನು ಹಿಂಪಡೆದು ತಾಲೂಕಿಗಾಗಿ ವಿನಿಯೋಗಿಸಬೇಕು ಎಂದು ರಘುಪತಿ ಭಟ್ ಆಗ್ರಹಿಸಿದರು.
ರೋಟರಿ ಮಾಜಿ ಗವರ್ನರ್ ಜ್ಞಾನವಸಂತ ಶೆಟ್ಟಿ ಪ್ರಸ್ತಾವನೆಗೈದರು. ವಾರಂಬಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ ಅಭಿನಂದನ ಭಾಷಣ ಮಾಡಿದರು. ಇದಕ್ಕೂ ಮೊದಲು ಸಚಿವ ಪ್ರಮೋದ್ ಮಧ್ವರಾಜ್, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಶುಭಹಾರೈಸಿದ್ದರು.
ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಬಾರಕೂರು ಸತೀಶ್ ಪೂಜಾರಿ, ಪದಾಧಿಕಾರಿಗಳು, ಸಮಿ
ತಿಗೆ ನಿರಂತರ ಬೆಂಬಲ ನೀಡಿದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು.
ಎಸ್.ಎಂ.ಎಸ್. ಚರ್ಚ್‌ನ ರೆ| ಫಾ| ಲಾರೆನ್ಸ್ ಡಿ’ಸೋಜಾ, ಎಪಿಎಂಸಿ ಅಧ್ಯಕ್ಷ ನಿರಂಜನ್ ಹೆಗ್ಡೆ ಅಲ್ತಾರು, ತಾ.ಪಂ. ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಸವಿತಾ ಸಮಾಜ ಜಿಲ್ಲಾಧ್ಯಕ್ಷ ಅರುಣ್ ಭಂಡಾರಿ ಪರ್ಕಳ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಆನಂದ ಮಟಪಾಡಿ, ಆರೂರು ಗ್ರಾ.ಪಂ. ಅಧ್ಯಕ್ಷ ರಾಜೀವ ಕುಲಾಲ್, ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಎಚ್. ಪ್ರಕಾಶ್ ಶೆಟ್ಟಿ, ಮಾಜಿ ಅಧ್ಯಕ್ಷ ಗೌತಮ್ ಹೆಗ್ಡೆ, ಪಾಂಡೇಶ್ವರ ಪಂಚಾಯತ್ ಅಧ್ಯಕ್ಷ ಗೋವಿಂದ ಪೂಜಾರಿ ಉಪಸ್ಥಿತರಿದ್ದರು.
ಸಮಿತಿ ಪ್ರ. ಕಾರ್ಯದರ್ಶಿ ಸಂತೋಷ್ ಪೂಜಾರಿ ಹಂದಾಡಿ ಸ್ವಾಗತಿಸಿ, ಉಪಾ ಧ್ಯಕ್ಷ ಉದಯ ಕುಮಾರ್ ಬ್ರಹ್ಮಾವರ ಸಮ್ಮಾನಿತರ ಹೆಸರು ವಾಚಿಸಿದರು. ಬಾರಕೂರು ಸುಧಾಕರ ರಾವ್ ಕಾರ್ಯ ಕ್ರಮ ನಿರೂಪಿಸಿ, ಸದಾಶಿವ ಶೆಟ್ಟಿ ಹೇರೂರು ವಂದಿಸಿದರು.