Advertisement

ಸೋಂಕಿತರ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ

01:03 PM Sep 29, 2020 | Suhan S |

ಮಂಡ್ಯ: ಜೂಮ್‌ ವಿಡಿಯೋ ಮೂಲಕ ಸೋಂಕಿತರ ಆರೋಗ್ಯ ಹಾಗೂ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ವಿಚಾರಿಸಿದರು. ನ

Advertisement

ಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜೂಮ್‌ ವಿಡಿಯೋ ಮೂಲಕ ಜಿಲ್ಲೆಯ ಮಳವಳ್ಳಿ, ಕೆ.ಆರ್‌. ಪೇಟೆ, ಶ್ರೀರಂಗ ಪಟ್ಟಣ, ಮದ್ದೂರು, ನಾಗಮಂಗಲ ಮತ್ತು ಪಾಂಡವಪುರ ತಾಲೂಕಿನ ಆರೋಗ್ಯ ಅಧಿಕಾರಿಗಳಿಗೆ ಅಲ್ಲಿನ ಕೋವಿಡ್‌ ಕೇಂದ್ರಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಕೋವಿಡ್‌ ವ್ಯಕ್ತಿಗಳನ್ನು ನೇರವಾಗಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿಸಿದ ಜಿಲ್ಲಾಧಿಕಾರಿ, ನಿಮಗೆಊಟಮತ್ತು ಇತರೆ ಯಾವುದಾದರೂ ಸಮಸ್ಯೆಗಳಿದ್ದರೆ ಹೇಳಿ ಎಂದರು.

ಒಬ್ಬ ಸೋಂಕಿತ ವ್ಯಕ್ತಿ ಇಲ್ಲಿ ಸೋಂಕಿತ ರೋಗಿಗಳಿಗೆ ಎಲ್ಲ ಮೂಲ ಸೌಕರ್ಯ, ಊಟ, ಬಿಸಿ ನೀರು, ಮೊಟ್ಟೆ, ಬಾಳೆಹಣ್ಣು, ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಉತ್ತಮವಾಗಿದ್ದು, ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡೀಸಿ ಡಾ.ವೆಂಕಟೇಶ್‌, ಏನಾದರೂ ಸಮಸ್ಯೆಗಳು ಎದುರಾದರೆ ನಮಗೆ ತಿಳಿಸಿ ಎಂದರು.

………………………………………………………………………………………………………………………………………………………………..

ಕಲ್ಲು ಗಣಿಗಾರಿಕೆ: ಎರಡು ಕಂಪ್ರಸರ್‌ ಟ್ರ್ಯಾಕ್ಟರ್‌ ವಶ:

Advertisement

ಮಂಡ್ಯ: ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಿ, ಎರಡು ಕಂಪ್ರಸರ್‌ ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡಿರುವಘಟನೆಕೆ.ಆರ್‌. ಸಾಗರ ಸಮೀಪದ ಕಾವೇರಿಪುರ ಗ್ರಾಮದ ಬಳಿ ನಡೆದಿದೆ.

ಗ್ರಾಮದ ಸರ್ಕಾರಿ ಕ್ವಾರೆಯಲ್ಲಿ ಅಕ್ರಮವಾಗಿ ಟ್ರ್ಯಾಕ್ಟರ್‌ ಕಂಪ್ರಸರ್‌ ಗಳಿಂದ ಕುಳಿ ತೆಗೆದು ಕಲ್ಲುಗಳನ್ನು ಹೊಡೆದು ಅಕ್ರಮವಾಗಿ ಸಾಗಿಸಲು ಮುಂದಾಗಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಕೆ.ಆರ್‌.ಸಾಗರ ಪೊಲೀಸ್‌ ಠಾಣೆಯ ಪಿಎಸ್‌ಐ ನವೀನ್‌ಗೌಡ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ.

ಇಬ್ಬರು ಚಾಲಕರು ಪರಾರಿ: ದಾಳಿಯ ಸಂದರ್ಭದಲ್ಲಿ ಪೊಲೀಸರನ್ನು ಕಂಡ ಕಂಪ್ರಸರ್‌ ಟ್ರ್ಯಾಕ್ಟರ್‌ಗಳ ಇಬ್ಬರು ಚಾಲಕರು ಪರಾರಿಯಾಗಿದ್ದಾರೆ. ಪಾರ್ಮ ಕಂಪ್ರಸರ್‌ ಟ್ರ್ಯಾಕ್ಟರ್‌ ಹಾಗೂ ನಂಬರ್‌ಇಲ್ಲದಮಹೇಂದ್ರ ಸರ್‌ಪಂಚ್‌ ಟ್ರ್ಯಾಕ್ಟರ್‌ ಕಂಪ್ರಸರ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವರದಿ ಆಧಾರದ ಮೇಲೆ ಕೆ.ಆರ್‌.ಸಾಗರ ಠಾಣೆಯಲ್ಲಿ ಪೊಲೀಸರೇ ಸೆಕ್ಷನ್‌ 379, 511 ಹಾಗೂ ಐಪಿಸಿ 4(1), 21(1) ಎಂಎಂಆರ್‌ಡಿ ಪ್ರಕರಣ ದಾಖಲಿಸಿ ಕೊಂಡು ತನಿಖೆಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next