Advertisement

ಔಷಧಿ ಸಸಿ ನೆಡಲು ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

07:27 PM Jul 07, 2021 | Team Udayavani |

ಬೀದರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಗುಣಮಟ್ಟ ಖಾತ್ರಿ ಸಮಿತಿಯ ತ್ತೈಮಾಸಿಕ ಸಭೆ ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಾಯಕಲ್ಪ, ಎನ್‌ ಕ್ಯೂಎಎಸ್‌ ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ತೋಟಗಾರಿಕೆ ಇಲಾಖೆಗೆ ಅನುಕೂಲವಾಗುವ ಹಾಗೂ ನೀರಿನ ವ್ಯವಸ್ಥೆ ಇರುವ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ವನಸ್ಪತಿ ಉದ್ಯಾನದ ಸಲುವಾಗಿ ಬೇಕಾಗಿರುವ ಔಷಧೀಯ ಸಸಿಗಳನ್ನು ನೆಡಲು ಕ್ರಮ ವಹಿಸಬೇಕು ಎಂದು ತೋಟಗಾರಿಕಾ ಉಪ ನಿರ್ದೇಶಕರಿಗೆ ಸೂಚಿಸಿದರು.

ಹಳೆಯ ಕಟ್ಟಡ ಹೊಂದಿದ ಆಸ್ಪತ್ರೆಗಳಿದ್ದಲ್ಲಿ ಅವುಗಳ ಪಟ್ಟಿ ಮಾಡಿ ಲೋಕೋಪಯೋಗಿ ಅಭಿಯಂತರರಿಗೆ ಸಲ್ಲಿಸಬೇಕು. ಈ ಬಗ್ಗೆ ಆಯಾ ತಹಶೀಲ್ದಾರರೊಂದಿಗೆ ಚರ್ಚಿಸಿ ಮುಂದಿನ ಕ್ರಮ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಆರೋಗ್ಯ ಸಂಸ್ಥೆಗಳ ಜಾಗದಲ್ಲಿ ಖಾಸಗಿ ಕಟ್ಟಡಗಳು ಅಥವಾ ರಸ್ತೆ ನಿರ್ಮಾಣ ಇನ್ನಾವುದೇ ರೀತಿಯ ಅತಿಕ್ರಮಣ ಆಗಿದ್ದ ವಿವರವಾದ ವರದಿಯನ್ನು ಸಂಸ್ಥೆವಾರು ಸಲ್ಲಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ನೀರುಪಯುಕ್ತ ವಸ್ತುಗಳನ್ನು ಒಂದು ತಿಂಗಳಲ್ಲಿ ಎಲ್ಲ ಆರೋಗ್ಯ ಸಂಸ್ಥೆಗಳಿಂದ ಟೆಂಡರ್‌ ಮೂಲಕ ವಿಲೇವಾರಿ ಮಾಡಿಸಲು ತಿಳಿಸಿದರು.

ತುರ್ತಾಗಿ ಪರಿಹಾರ ಧನ ನೀಡಿ:
ಕುಟುಂಬ ಕಲ್ಯಾಣ ಸಂತಾನಹರಣ ಶಸ್ತ್ರ ಚಿಕಿತ್ಸೆ ವಿಫಲವಾದ ಪ್ರಕರಣಗಳಿಗೆ ತುರ್ತಾಗಿ ಪರಿಹಾರ ಧನವನ್ನು ಆದ್ಯತೆ ಮೆರೆಗೆ ನೀಡಲು ಕ್ರಮ ವಹಿಸಬೇಕು ಎಂದು ಡಿಸಿ ಈ ವೇಳೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆ ಸುತ್ತಲಿನ ಪ್ರದೇಶವನ್ನು
ಪಂಚಾಯತ್‌ನಿಂದ ಕಾಲಕಾಲಕ್ಕೆ ಶುಚಿಗೊಳಿಸಲು ಎಲ್ಲ ಗ್ರಾ.ಪಂಗಳಿಗೆ ನಿರ್ದೇಶನ ನೀಡಿ ತಿಳಿಸಲು ಜಿ.ಪಂ ಸಿಇಒಗೆ ವಿನಂತಿಸುವುದಾಗಿ ಡಿಎಚ್‌ಒ ಡಾ| ವಿ.ಜಿ. ರೆಡ್ಡಿ ತಿಳಿಸಿದರು.

Advertisement

ಬೀದರ್‌ ಮೊದಲನೇ ಸ್ಥಾನ: ಕಾಯಕಲ್ಪ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ಚರ್ಚಿಸಲಾಯಿತು. ಅಂತರ ಮತ್ತು ಛಾಯಾ ಗುರಿ ಸಾಧನೆಯಲ್ಲಿ ರಾಜ್ಯದಲ್ಲಿ ಬೀದರ್‌ ಜಿಲ್ಲೆಯು ಮೊದಲನೇ ಸ್ಥಾನದಲ್ಲಿದೆ. ಕಾಯಕಲ್ಪ ಕಾರ್ಯಕ್ರಮದ ಕಳೆದ ವರ್ಷದ ಸಾಧನೆಗಳ ಬಗ್ಗೆ ಹಾಗೂ ಸದರಿ ವರ್ಷದ ಗುರಿಗಳ ಬಗ್ಗೆ ವೈದ್ಯಾಧಿಕಾರಿ ಡಾ| ಶಿವಶಂಕರ ಸಭೆಗೆ ವಿವರಿಸಿದರು.

ಆಸ್ಪತ್ರೆಗಳಿಗೆ ಅನುಮತಿ: ಟ್ಯೂಬೆಕ್ಟಮಿ ಎಂಪಾನಲಮೆಂಟ್‌ಗಾಗಿ ಮನವಿ ಸಲ್ಲಿಸಿದ್ದ ಐದು ಖಾಸಗಿ ಆಸ್ಪತ್ರೆಗಳಿಗೆ ಸಭೆಯಲ್ಲಿ ಅನುಮತಿ ನೀಡಲಾಯಿತು. ಸಿ.ಎ.ಸಿ ಸುರಕ್ಷಿತ ಗರ್ಭಪಾತಗಳನ್ನು ಮಾಡಲು ಮನವಿ ಸಲ್ಲಿಸಿದ ವೈದ್ಯರಿಗೆ ಕೂಡ ಇದೆ ವೇಳೆ
ಅನುಮತಿ ನೀಡಲಾಯಿತು. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ವೈದ್ಯಾಧಿಕಾರಿ ಡಾ| ಮಹೇಶ ಬಿರಾದಾರ ಹಾಗೂ ಇನ್ನೀತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next