Advertisement
ಕ್ವಾರಂಟೈನ್ ತಪ್ಪಿಸಿಕೊಳ್ಳಲಾರರೇ?ಕೊರೊನಾ ಮಹಾಮಾರಿಯಿಂದಾಗಿ ಲಾಕ್‌ಡೌನ್ ಆರಂಭವಾದಾಗಿನಿಂದ ಪೊಲೀಸ್ ಬಲವನ್ನು ಹೆಜಮಾಡಿ ಯಂತಹ ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಜಿಲ್ಲೆ, ಅಂತರ್ ಜಿಲ್ಲಾ, ರಾಜ್ಯಗಳ ವಾಹನ ತಪಾಸಣೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಆದರೂ ಇದೀಗ ಹಗಲು ವೇಳೆಯಲ್ಲಿ ಪೊಲೀಸರು ಇಲ್ಲದಿರುವುದನ್ನು ಅರಿತು ಬೇರೆ ರಾಜ್ಯಗಳ ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದಲ್ಲಿ ಕ್ವಾರಂಟೈನ್ ತಪ್ಪಿಸಿ ನೇರ ಮನೆಗೇ ತೆರಳುವ ಅಪಾಯವೂ ಇದೆ ಎಂಬುದು ಸಾರ್ವಜನಿಕ ಅಭಿಪ್ರಾ ಯವಾಗಿದೆ. ಆದರೆ ಪೊಲೀಸ್ ಮೂಲಗಳು ಇದನ್ನು ಅಲ್ಲಗೆಳೆದಿದ್ದು ಕೇರಳದಿಂದ ಬರುವ ಮಂದಿಯನ್ನು ತಲ ಪಾಡಿಯಲೆತ್ತು ವೈಮಾನಿಕ ಮಾರ್ಗವಾಗಿ ಬರುವ ಮಂದಿಯನ್ನು ಅಲ್ಲಲ್ಲೇ ತಪಾಸಣೆ ನಡೆಸಿ ಆಯಾಯ ತಾ| ಕೇಂದ್ರಗಳಿಗೆ ಕ್ವಾರಂಟೈನ್‌ಗಾಗಿ ರವಾನಿಸಲಾಗುವುದು. ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರೂ ನಿಗಾ ವಹಿಸಲಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣಾ ಸಿಬಂದಿಯ ಗಂಟಲ ದ್ರವ ಪರೀಕ್ಷೆಯ ವರದಿ ಈಗಾಗಲೇ ಬಂದಿದೆ. ಪಡುಬಿದ್ರಿ ಪೊಲೀಸ್ ಠಾಣೆ ಸೇಫ್ ಆಗಿದೆ. ಎಲ್ಲರ ವರದಿಯೂ ನೆಗೆಟಿವ್ ಬಂದಿರು ವುದಾಗಿ ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ ತಿಳಿಸಿದ್ದಾರೆ. ಪಡುಬಿದ್ರಿಯ ಹೊಟೇಲೊಂದರಲ್ಲಿ ಕ್ವಾರಂಟೈನ್‌ನಲ್ಲಿರುವ 18 ಮಂದಿಯ ಗಂಟಲ ದ್ರವ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ. ಬಂದ ಬಳಿಕ ನೆಗೆಟಿವ್ ಆದಲ್ಲಿ ಅವರನ್ನೂ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಪಡುಬಿದ್ರಿ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಬಿ.ಬಿ. ರಾವ್ ಹೇಳಿದ್ದಾರೆ. ಅಂತಾರಾಜ್ಯ ಪ್ರಯಾಣಿಕರ ತಪಾಸಣೆ ಗಾಗಿ ಹೆಜಮಾಡಿ ಚೆಕ್‌ಪೋಸ್ಟ್ ಹಗಲಲ್ಲೂ ಕಾರ್ಯನಿರ್ವಹಿಸುತ್ತದೆ ಎಂಬುದಾಗಿ ಉಡುಪಿ ಜಿಲ್ಲಾ ಪೊಲೀಸ್ ಸೂಚನೆ ತಿಳಿಸಿದೆ. ಚೆಕ್ ಪೋಸ್ಟ್ ಗಳನ್ನು ತೆಗೆಯಲಾಗಿಲ್ಲ. ಅಂತಾರಾಜ್ಯ ಮಂದಿಯ ಜಿಲ್ಲಾ ಒಳ ಪ್ರವೇಶದ ವೇಳೆ ತಪಾಸಣೆ ನಡೆಸಿ ಕ್ವಾರೆಂಟೈನ್‌ಗೆ ಒಳಪಡಿಸಲು ಶಿರೂರು, ಹೆಜಮಾಡಿ, ಸೋಮೇಶ್ವರ, ಹೊಸಂಗಡಿಗಳಲ್ಲಿ ಹಗಲು ವೇಳೆಗಳಲ್ಲೂ ಚೆಕ್‌ಪೋಸ್ಟ್ ನಿಗಾವಣೆ ಕಾರ್ಯ ಮುಂದುವರಿಯಲಿದೆ.
Related Articles
ಕೊಲ್ಲೂರು: ಎರಡು ತಿಂಗಳುಗಳಿಂದ ಇಲ್ಲಿನ ಗಡಿ ಪ್ರದೇಶವಾದ ದಳಿ ಎಂಬಲ್ಲಿ ಒದಗಿಸಲಾಗಿದ್ದ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮೇ 26 ರಿಂದ ಸಡಿಲಗೊಳಿಸಲಾಗಿದೆ.ಬಹುತೇಕ ವೈದ್ಯಾ ಧಿಕಾರಿಗಳು, ದಾದಿಯರು ಹಾಗೂ ವಿಶೇಷ ಪೊಲೀಸ್ ತಂಡದೊಡನೆ ಕಂದಾಯ ಇಲಾಖೆ ಅ ಧಿಕಾರಿಗಳ ನೇತೃತ್ವದಲ್ಲಿ ಶಿವಮೊಗ್ಗ ಹಾಗೂ ಇನ್ನಿತರ ಜಿಲ್ಲೆಗಳಿಂದ ಯಾರೊಬ್ಬರು ಗಡಿ ದಾಟದಂತೆ ವಿಶೇಷ ವ್ಯವಸ್ಥೆ ಏರ್ಪಡಿಸಿ ಪ್ರತಿ ವಾಹನ ತಪಾಸಣೆ ನಡೆಯುತ್ತಿತ್ತು. ಬುಧವಾರದಿಂದ ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದ ವಾಹನ ತಪಾಸಣೆ ರದ್ದುಗೊಳಿಸಲಾಗಿದ್ದು, ರಾತ್ರಿ ವೇಳೆಯಲ್ಲಿ ಮಾತ್ರ ತಪಾಸಣೆ ಮುಂದುವರಿಯಲಿದೆ. ಈ ರೀತಿಯ ಬದಲಾವಣೆಯು ಒಂದಿಷ್ಟು ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ.
Advertisement