Advertisement
ನಗರಸಭೆ ವ್ಯಾಪ್ತಿಯ 35 ವಾರ್ಡ್ ಗಳಿಗೆ ಕುಡಿಯುವ ನೀರು ಪೂರೈಕೆಯ ಏಕೈಕ ಮೂಲವಾಗಿರುವ ಬಜೆ ಅಣೆಕಟ್ಟು ಒಳಹರಿವು ನಿಂತು ಒಂದು ತಿಂಗಳು ಕಳೆದಿದೆ. ಸದ್ಯಕ್ಕೆ 5.61 ಮೀಟರ್ ನೀರು ಡ್ಯಾಂನಲ್ಲಿ ನಿಲ್ಲಿಸಲಾಗಿದೆ. ನಿತ್ಯ 2 ಸೆಂ. ಮೀಟರ್ ನೀರು ಬಳಕೆಯಾಗುತ್ತದೆ. 2019 ಮಾ.4ರಂದು 4.91 ಮೀ. ನೀರು ಸಂಗ್ರಹವಾಗಿತ್ತು. ಒಟ್ಟು ಪರಿಸ್ಥಿತಿ ಯನ್ನು ಅವಲೋಕಿಸಿದರೆ ಈ ಬಾರಿ ನಗರಕ್ಕೆ ಸುಗಮ ಕುಡಿಯುವ ನೀರು ಪೂರೈಕೆಯ ಆಶಾವಾದ ಮೂಡಿದೆ.ಬಜೆಯಲ್ಲಿ ನೀರು ಪ್ರಮಾಣ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಒತ್ತಡ ಕಡಿಮೆಯಾಗಿದ್ದು, ಇದರಿಂದ ಎತ್ತರ ಪ್ರದೇಶಗಳಿಗೆ ನೀರು ಸರಬರಾಜು ಆಗುತ್ತಿಲ್ಲ.
ಪ್ರಸ್ತುತ ಬಜೆಗೆ ಶಿರೂರು ಡ್ಯಾಂನಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ಮಾ.2 ರಂದು ಶಿರೂರು ಡ್ಯಾಂ ಒಂದು ಬಾಗಿಲಿನಿಂದ ನೀರು ಹರಿ ಬಿಡ ಲಾಗುತ್ತಿದೆ. ಇದರಿಂದ ಬಜೆ ಅಣೆಕಟ್ಟಿನಲ್ಲಿಯೂ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಕಳೆದ ಬಾರಿ ಮಾರ್ಚ್ ನಲ್ಲಿ ಶಿರೂರು ಡ್ಯಾಂ ನಲ್ಲಿ ನೀರು ಸಂಪೂರ್ಣವಾಗಿ ಬರಿದಾಗಿತ್ತು.
Related Articles
ಕಳೆದ ಬೇಸಗೆಯಲ್ಲಿ ಕುಡಿಯುವ ನೀರು ಪೂರೈಸುವಲ್ಲಿ ವಿಫಲಗೊಂಡ ನಗರಸಭೆ, ಈ ಬಾರಿ ಮುಂಜಾಗೃತ ಕ್ರಮವಾಗಿ ಬಜೆ ಹೂಳು ತೆಗೆಸುವಲ್ಲಿ ಸಫಲವಾಗಿದೆ. ಬಜೆ ಡ್ಯಾಂ ತಳಮಟ್ಟದ ಹೂಳು ತೆಗೆದಿರುವುದರಿಂದ ಡ್ಯಾಂ ತಳಭಾಗದಲ್ಲಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಿದೆ ಎನ್ನುವುದು ನಗರಸಭೆ ಅಧಿಕಾರಿಗಳ ಅಭಿಪ್ರಾಯ. ಈ ಬಾರಿ ನೀರಿನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಡ್ಯಾಂ ಬಾಗಿಲುಗಳನ್ನು ದುರಸ್ತಿಗೊಳಿಸಿ ಭದ್ರಗೊಳಿಸಿದೆ.
Advertisement
18 ದಶಲಕ್ಷ ಲೀ. ನೀರು ಸಾಕುನಗರದಲ್ಲಿ ಸುಮಾರು 10,500 ಮನೆಗಳು, ಮಣಿಪಾಲ ಕೈಗಾರಿಕಾ ವಲಯದಲ್ಲಿ 70ರಿಂದ 80 ಕೈಗಾರಿಕಾ ಘಟಕ, 570 ಫ್ಲ್ಯಾಟ್‌ಗಳಿವೆ. ಸುಮಾರು 1,000 ವಾಣಿಜ್ಯ ಸಂಸ್ಥಾಪನೆಗಳು ಇವೆ. ಸುಮಾರು 600 ಹೊಟೇಲ್, 40 ಲಾಡ್ಜ್ಗಳಿವೆ. ಸರಕಾರದ ಪ್ರಕಾರ ಪ್ರತಿ ಪ್ರಜೆಗೆ ದಿನಕ್ಕೆ 135 ಲೀ. ನೀರು ಒದಗಿಸಬೇಕು. ನಗರದ ಜನಸಂಖ್ಯೆ 1.6 ಲಕ್ಷ. ಅದರ ಪ್ರಕಾರ ಪ್ರತಿನಿತ್ಯ ನಗರಕ್ಕೆ ಸುಮಾರು 18 ದಶಲಕ್ಷ ಲೀ. ನೀರು ಸಾಕಾಗುತ್ತದೆ. ಆದರೆ ಪ್ರತಿದಿನ 24 ದಶಲಕ್ಷ ಲೀ. ನೀರು ಪೂರೈಸಲಾಗುತ್ತದೆ. ಪ್ರತಿ ತಿಂಗಳು 1 ಲ.ಲೀ.
ಬೇಸಗೆ ಕಾಲದಲ್ಲಿ ಇಡೀ ನಗರದ ಜನರು ನೀರಿಗಾಗಿ ತತ್ತರಿಸಿ ಹೋಗುತ್ತಾರೆ. ಕಳೆದ ಬಾರಿ ಮಣಿಪಾಲದಲ್ಲಿ ಶೇ.68ರ ಪೈಕಿ ಪ್ರತಿಯೊಬ್ಬರೂ ಪ್ರತಿ ತಿಂಗಳು 1 ಲ.ಲೀ. ನೀರು ಬಳಕೆ ಮಾಡುತ್ತಿದ್ದಾರೆ. ಮೂರ್‍ನಾಲ್ಕು ಜನರು ವಾಸಿಸುವ ಮನೆಗಳಲ್ಲಿ ಭಾರೀ ನೀರು ಬಳಕೆ ಮಾಡಲಾಗುತ್ತಿದೆ. ಬಿಲ್ಲು ಕಟ್ಟುತ್ತೇವೆಂಬ ನೆಪವೊಡ್ಡಿ ಬೇಕಾಬಿಟ್ಟಿ ನೀರು ಬಳಕೆ ಮತ್ತು ಗಿಡಗಳಿಗೆ ಹಾಕುವುದರಿಂದ ಕೊರತೆಯಾಗುತ್ತಿದೆ ಎನ್ನುವುದು ನಗರಸಭೆ ಅಧಿಕಾರಿಗಳ ಅಭಿಪ್ರಾಯ. ಸಿಬಂದಿಗಳಿಗೆ ಎಇಇ- ಸ್ಪೆಶಲ್ ಕ್ಲಾಸ್
ಬಜೆ ಡ್ಯಾಂನಲ್ಲಿ ಮೂರು ಮೂರು ಶಿಫ್ rನಲ್ಲಿ 14 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಇಬ್ಬರು ವಾಚ್‌ಮ್ಯಾನ್ ಬಾಕಿ 12 ಮಂದಿ ಒಂದು ಶಿಫ್ಟ್ಗೆ 4 ಜನರಂತೆ 3 ಶಿಫ್ಟ್ನಲ್ಲಿ ಕೆಲಸ ಮಾಡುತ್ತಾರೆ. ಈ ಸಿಬಂದಿಗಳು ಕೆಲಸಕ್ಕೆ ಬಾರದೆ ಇರುವುದರಿಂದ ಡ್ಯಾಂನಲ್ಲಿ ಉಂಟಾಗುವ ಸಮಸ್ಯೆ ಅಧಿಕಾರಗಳ ಗಮನಕ್ಕೆ ಬಾರದೆ ತಿಂಗಳುಗಟ್ಟಲೆ ನೀರು ಸೋರಿಕೆಯಾಗುತ್ತಿತ್ತು. ಬಯೋಮೆಟ್ರಿಕ್, ಸಿಸಿ ಕೆಮರಾ ಅಳವಡಿಸಿದರೂ ವಿವಿಧ ನೆಪವೊಡ್ಡಿ ಹಿಂದೆ ಕಳುಹಿಸಿದ್ದಾರೆ. ಇದೀಗ ಪ್ರತಿ ಶಿಫ್ಟ್ ಸಿಬಂದಿಗಳು ಕೆಲಸಕ್ಕೆ ಬರುವ ಸಮಯ ಹಾಗೂ ಹೋಗುವ ಸಮಯ ಗಡಿಯಾರದ ಮುಂಭಾಗದಲ್ಲಿ ನಿಂತು ಸೆಲ್ಫಿ ತೆಗೆದು ಕಳುಹಿಸುವಂತೆ ಆದೇಶ ಮಾಡಿದ್ದೇನೆ. ಇದೀಗ ಡ್ಯಾಂನಲ್ಲಿ ಏನೇ ಸಮಸ್ಯೆ ಬಂದರೂ ಸಿಬಂದಿಗಳು ತತ್‌ಕ್ಷಣ ಮಾಹಿತಿ ನೀಡುತ್ತಾರೆ. ಇದರಿಂದಾಗಿ ನೀರಿನ ಸೋರಿಕೆ ಕಡಿಮೆಯಾಗಿದೆ ಎಂದು ನಗರಸಭೆ ಎಇಇ ಮೋಹನ್ ರಾಜ್ ತಿಳಿಸಿದ್ದಾರೆ. ನೀರಿನ ಕಡಿತವಿಲ್ಲ !
ಕಳೆದ 2017 ಮತ್ತು 2019 ವರ್ಷವೂ ನಗರಕ್ಕೆ ನೀರಿನ ಸಮಸ್ಯೆ ತಲೆದೋರಿದ್ದು, ಮಾರ್ಚ್ ಮೊದಲ ವಾರದಿಂದಲೇ ಕೆಲವು ಕಡೆಗಳಿಗೆ 2 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿತ್ತು. ಪ್ರಸ್ತುತ ಬಜೆಯಲ್ಲಿ 5.61 ಮೀಟರ್ ನೀರಿದ್ದು, ಶಿರೂರು ಡ್ಯಾಂನಲ್ಲಿ ನೀರು ಸಂಗ್ರಹವಿರುವ ಕಾರಣದಿಂದ ನಗರಸಭೆ ನೀರಿನ ಕಡಿತ ಪ್ರಕ್ರಿಯೆ ಆರಂಭಗೊಂಡಿಲ್ಲ.