Advertisement

ಬಡವರಿಗೆ ತರಕಾರಿ, ಹಣ್ಣು ವಿತರಣೆ

05:53 PM Apr 15, 2020 | Suhan S |

ಮಾಗಡಿ: ತಿಪ್ಪಸಂದ್ರ ಜಿಪಂ ವ್ಯಾಪ್ತಿಯಲ್ಲಿ ಜಿಪಂ ಸದಸ್ಯೆ ದಿವ್ಯಾ ಕೋವಿಡ್ 19 ಸೋಂಕು ತಡೆಗೆ ಜನಜಾಗೃತಿ ಮೂಡಿಸಿದರು. ಅಲ್ಲದೇ,ಕಲ್ಲಂಗಡಿ ಹಣ್ಣು, ಟೊಮೆಟೋ ಮತ್ತು ನಿತ್ಯ ಕೈತೊಳೆಯಲು ಸೋಪು,ಮಾಸ್ಕ್ ವಿತರಿಸಿದರು.ಈ ವೇಳೆ ಮಾತನಾಡಿ, ಬಡವರ ಬದುಕು ಮೂರಾ ಬಟ್ಟೆಯಾಗಿದ್ದು, ಊಟಕ್ಕೂ ಪರದಾಡುವಂತಾಗಿದೆ. ಅವರ ನೆರವಿಗೆ ನಾವಿದ್ದೇವೆ ಎಂದು ಹೇಳಿದರು.

Advertisement

ಪಂಚಾಯಿತಿಯಿಂದಲೂ ಸಮರ್ಪಕ ನೀರು ಪೂರೈಕೆಗೆ 12 ಕೊಳವೆ ಬಾವಿ ಕೊರೆಸಿದ್ದು ನೀರಿನ ಸಮಸ್ಯೆ ನಿವಾರಣೆಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ್‌ ಮಾತನಾ ಡಿದರು. ರಮೇಶ್‌, ಜಯರಾಮ್‌, ಮಹೇಶ್‌ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next