Advertisement

“ಪ್ರಕೃತಿಯನ್ನು ಗೌರವಿಸಿ ಉಳಿಸಿ ಬೆಳೆಸೋಣ’

11:30 PM May 30, 2020 | Sriram |

ಪುತ್ತೂರು: ಪ್ರಕೃತಿಯನ್ನು ಗೌರವಿಸುವ ಜತೆಗೆ ಮುಂದಿನ ಪೀಳಿಗೆಗೆ ಬೆಳೆಸಿ ಕೊಡಲು ಅರಣ್ಯ ಇಲಾಖೆ ಪ್ರೋತ್ಸಾಹ ನೀಡುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಮತ್ತು ಅರಣ್ಯ ಪ್ರದೇಶ ವಿಸ್ತರಣೆಯಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ಪುತ್ತೂರು ವಲಯ ಅರಣ್ಯ ಇಲಾಖೆಯಲ್ಲಿ ಶನಿವಾರ ಸಾರ್ವಜನಿಕ ಸಸಿ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಾಣಿಜ್ಯ ಬೆಳೆಗಳಿಗೆ ಆದ್ಯತೆ ಕೊಟ್ಟಿದ್ದರಿಂದ ಕಾಡನ್ನು ಕಡಿದು ರಬ್ಬರ್‌, ಅಡಿಕೆ, ಗೇರು ತೋಟ ಮಾಡಲಾಗಿದೆ. ನೈಸರ್ಗಿಕವಾಗಿ ಬೆಳೆಯುವ ಮರಗಳನ್ನು ಕಡಿದು ಕಾಡನ್ನು ನಾಶ ಮಾಡಿದಲ್ಲಿ ಪರಿಸರದ ಸಮತೋಲನ ತಪ್ಪುತ್ತದೆ. ಆದ್ದರಿಂದ ಗಿಡಗಳನ್ನು ನೆಟ್ಟು ಪರಿಸರವನ್ನು ರಕ್ಷಿಸಲು ನಾವೆಲ್ಲರೂ ಮುಂದಾಗ ಬೇಕು ಎಂದು ಶಾಸಕರು ಹೇಳಿದರು.

45 ಸಾವಿರ ಗಿಡಗಳು
ವಲಯ ಅರಣ್ಯಾಧಿಕಾರಿ ಬಿ.ಜಿ. ಮೋಹನ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರು ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ 45 ಸಾವಿರ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಪುತ್ತೂರು ಅರಣ್ಯ ಇಲಾಖೆ ವ್ಯಾಪ್ತಿಯ ಜಾಲೂÕರು ಪಂಜಿಕಲ್ಲು ಮತ್ತು ಕನಕಮಜಲು ಸಸ್ಯ ಕ್ಷೇತ್ರದಲ್ಲಿ ಸಸಿಗಳು ಸಿದ್ಧಗೊಂಡಿವೆ. ಸಾಗುವಾನಿ, ನೆಲ್ಲಿ, ಬಿಲ್ವಪತ್ರೆ, ಮಹಾಗನಿ, ಜಂಬು ನೇರಳೆ, ರಂಬುಟಾನ್‌, ಕಹಿಬೇವು, ಬಾಗೆ, ಬಾದಾಮಿ, ಬೇಂಗ, ಸಂಪಿಗೆ, ನೊರೆಕಾಯಿ, ನೇರಳೆ, ಪುನರ್ಪುಳಿ, ಬಸವನ ಪಾದ, ಶಿವಾನಿ, ಶ್ರೀಗಂಧ, ರಕ್ತಚಂದನ, ಹಲಸು ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಹೇಳಿದರು.

ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರೀಶ್‌, ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು, ನಿರ್ದೇಶಕ ತೀರ್ಥರಾಮ ದುಗ್ಗಳ, ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಜಗದೀಶ್‌ ಪುಣಚ, ಮೂಡಂಬೈಲು ಜಯರಾಮ ರೈ, ಗುರುವಪ್ಪ ಪೂಜಾರಿ ಮತ್ತು ಟಿಂಬರ್‌ ಮರ್ಚಂಟ್‌ಗಳಾದ ಇಬ್ರಾಹಿಂ, ಗೋಪಾಲ್‌, ಸಂಶುದ್ದೀನ್‌ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Advertisement

ಉಪವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಆಚಾರ್ಯ, ಲೋಕೇಶ್‌, ಅರಣ್ಯ ರಕ್ಷಕ ರಾಜು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next