Advertisement

15 ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ

01:16 PM Aug 09, 2019 | Suhan S |

ಹಳಿಯಾಳ: ನಿಸರ್ಗದೊಂದಿಗೆ ಸ್ನೇಹ ಮಾಡಬೇಕು ಹೊರತು ದ್ವೇಷ ಮಾಡಬಾರದು. ಅರಣ್ಯ ಹೆಚ್ಚಾಗಬೇಕು. ನಿಸರ್ಗದ ಜೊತೆಗೆ ಪರಿಸರ ಕಾಯ್ದುಕೊಳ್ಳಬೇಕು ಇಲ್ಲದಿದ್ದರೆ ಇಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ನೆರೆ ಹಾನಿ ನಿಧಿಯಡಿ ಸುಮಾರು 15 ಜನರಿಗೆ ಪರಿಹಾರದ ಚೆಕ್‌ಗಳನ್ನು ವಿತರಿಸಿ ಬಳಿಕ ಪ್ರಕೃತಿ ವಿಕೋಪದ ಕುರಿತು ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು.

ಹಳಿಯಾಳ- ದಾಂಡೇಲಿಯನ್ನೊಳ ಗೊಂಡು ಒಟ್ಟೂ 6 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದ ಅವರು, ಅಧಿಕಾರಿಗಳು, ಇನ್ನಿತರ ಸಿಬ್ಬಂದಿಗಳ ತಂಡ ತಯಾರಿಸಿ ಭಾಗಶಃ ಹಾಗೂ ಸಂಪೂರ್ಣ ಮನೆ ಕಳೆದುಕೊಂಡವರ ಬಳಿ ಸಂಪೂರ್ಣ ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಿ.

ಇನ್ನೂ ದಾಖಲೆ ಕಳೆದುಕೊಂಡವರಿಗೆ ಅಗತ್ಯ ದಾಖಲೆ ನೀಡಲು ತಾಲೂಕಾಡಳಿತ ಸಹಕರಿಸಬೇಕು. ನೆರೆ ಕಡಿಮೆಯಾದ ಬಳಿಕ ಇದು ತುರ್ತು ಪರಿಸ್ಥಿತಿ ಇರುವುದರಿಂದ ಯಾರಿಗೂ ತೊಂದರೆ ನೀಡದೆ ಕೂಡಲೇ ದಾಖಲೆಗಳನ್ನು ಅವರಿಗೆ ಒದಗಿಸಲು ಮುಂದಾಗಬೇಕು ಎಂದ ದೇಶಪಾಂಡೆ ಅತಿಕ್ರಮಣ ಮಾಡಿ ಮನೆ ಕಟ್ಟಿದವರು ಇಂದು ಮನೆ ಕಳೆದುಕೊಂಡಿದ್ದು ಮಾನವೀಯ ನೆಲೆಯ ಮೇಲೆ ಅವರಿಗೂ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು. ಈ ಬಗ್ಗೆ ತಾವು ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಸಂಪೂರ್ಣ ಮನೆ ಕಳೆದುಕೊಂಡವರಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕು. ಕೆಪಿಸಿ ವಸತಿ ನಿವೇಶನಗಳು ಖಾಲಿ ಇದ್ದು ಅಲ್ಲಿ ನಿರಾಶ್ರಿತರಿಗೆ ವಸತಿಗೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದ ಅವರು ಸ್ಥಳದಲ್ಲೇ ಕೆಪಿಸಿಯ ಎಂಡಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಾತ್ಕಾಲಿಕ ವಸತಿಗೆ ಅವಕಾಶಕ್ಕೆ ಮನವಿ ಮಾಡಿದರು.

Advertisement

ನೆರೆ ಇಳಿದ ಬಳಿಕ ಮುಂದೆ ಆರೋಗ್ಯ, ಪಶು ಸಂಗೋಪನಾ ಹಾಗೂ ಪಶು ವೈದ್ಯ ಇಲಾಖೆ, ಪುರಸಭೆಯವರು ಜಾಗೃತರಾಗಬೇಕು ಎಲ್ಲೆಡೆ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಯಡೋಗಾ ಸೇತುವೆಯಲ್ಲಿ ನೀರಿನ ಪ್ರವಾಹಕ್ಕೆ ಕೊಚ್ಚಿಹೋದ ಕಾರಣ ಕಳೆದ 3 ದಿನಗಳಿಂದ ಪಟ್ಟಣಕ್ಕೆ ನೀರಿನ ಸರಬರಾಜು ಸ್ಥಗಿತವಾಗಿದೆ. ಹೊಸ ಪೈಪ್‌ಲೈನ್‌ ಜೊಡಿಸಲು ಕೂಡಲೇ ಪುರಸಭೆಯವರು ಕಾರ್ಯನಿರ್ವಹಿಸುವಂತೆ ಹಾಗೂ ಅದಕ್ಕಾಗಿ ಅನುದಾನ ಕೊರತೆಯಾಗದಂತೆ ತಾವು ಗಮನ ಹರಿಸುವುದಾಗಿ ಹೇಳಿದರು.

ನಿರಂತರ ಮಳೆಗೆ ರಸ್ತೆಗಳಿಗೆ ಹಾನಿಯಾಗಿದ್ದು ಕೂಡಲೇ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಪಿಡಬ್ಲೂಡಿ ಅಧಿಕಾರಿಗೆ ದೇಶಪಾಂಡೆ ಸೂಚಿಸಿದರು.

ವಿಪ ಸದಸ್ಯ ಎಸ್‌.ಎಲ್. ಘೊಕ್ಲೃಕರ, ಜಿಪಂ ಸದಸ್ಯ ಕೃಷ್ಣಾ ಪಾಟೀಲ್, ಪುರಸಭೆ ಸದಸ್ಯ ಶಂಕರ ಬೆಳಗಾಂವಕರ, ತಹಶೀಲ್ದಾರ್‌ ವಿದ್ಯಾಧರ ಗುಳಗುಳಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next