Advertisement

ಪ್ರತಿದಿನ 100 ಕಾರ್ಡ್‌ಗೆ ಪಡಿತರ ವಿತರಣೆ

01:07 PM Apr 04, 2020 | Suhan S |

ಮಂಡ್ಯ: ಕೋವಿಡ್ 19 ಸೋಂಕಿನ ಹಿನ್ನಲೆಯಲ್ಲಿ ದೇಶ ಲಾಕ್‌ಡೌನ್‌ ಆಗಿರುವ ಕಾರಣ ಬಡವರು ಹಸಿವಿನಿಂದ ಪರದಾಡಬಾರದೆಂದು ಸರ್ಕಾರ ಪಡಿತರ ವಿತರಣೆಗೆ ಅವಕಾಶ ಕಲ್ಪಿಸಿ, ಪ್ರತಿನಿತ್ಯ 100 ಟೋಕನ್‌ ವಿತರಿಸಲಾಗುತ್ತಿದೆ ಎಂದು ನ್ಯಾಯಬೆಲೆ ಮಾಲೀಕರ ಸಂಘದ ಅಧ್ಯಕ್ಷ ಎಚ್‌. ಪಿ. ಸಚ್ಚಿದಾನಂದ ತಿಳಿಸಿದರು.

Advertisement

ತಾಲೂಕಿನ ಹೊಳಲು ಸಹಕಾರ ಸಂಘದಲ್ಲಿ ಉಚಿತ ಪಡಿತರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಹಾಲಿ ಸಹಕಾರ ಸಂಘದಲ್ಲಿ 1582 ಪಡಿತರ ಚೀಟಿಗಳಿದ್ದು, ಇದರಲ್ಲಿ ಪ್ರತಿನಿತ್ಯ 100 ಟೋಕನ್‌ ನೀಡಲಾಗುತ್ತಿದೆ. ಟೋಕನ್‌ ಪಡೆದವರು ಅನ್ನಭಾಗ್ಯದ ಉಚಿತ ಅಕ್ಕಿ ಮತ್ತು ಗೋಧಿ ಪಡೆಯಬಹುದು ಎಂದು ತಿಳಿಸಿದರು.

ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶಾಮಿಯಾನ ಹಾಕಿಸಿದ್ದೇವೆ. ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಟೋಕನ್‌ ಮುಗಿಯುವವರೆಗೂ ಪಡಿತರ ವಿತರಿಸುತ್ತೇವೆ. ಪ್ರತಿಯೊಬ್ಬರೂ ಅಂತರ ಕಾಯ್ದು ಕೊಂಡು ಪಡಿತರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ವೇಳೆ ಸಂಘದ ನಿರ್ದೇಶಕ ನಂದೀಶ್‌, ಶಿವಕುಮಾರ್‌, ಜೋಗಯ್ಯ, ಸುರೇಶ್‌ ಸಿಬ್ಬಂದಿ ವರ್ಗದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next