Advertisement

ನರೇಗಾ ಉದ್ಯೋಗ ಚೀಟಿ ವಿತರಣೆ

07:18 AM May 30, 2020 | Suhan S |

ಹುಣಸಗಿ: ತಾಲೂಕಿನ ಕಾಮನಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಶಾಸಕ ನರಸಿಂಹ ನಾಯಕ(ರಾಜುಗೌಡ)ಅವರು ಭೇಟಿ ನೀಡಿ ವಲಸೆ ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಿಸಿದರು.

Advertisement

ಗ್ರಾ.ಪಂ ವ್ಯಾಪ್ತಿಯಲಿನ ಸರ್ವೇ ನಂ.45, 85, 29, 85/ಬಿ ವಿವಿಧ ಜಮೀನುಗಳಲ್ಲಿ ನಡೆದ ಕ್ಷೇತ್ರ ಬದು ನಿರ್ಮಾಣ ಕಾಮಗಾರಿ ವೀಕ್ಷಿಸಿದ ಅವರು ನಂತರ ಮಾತನಾಡಿದ ಅವರು, ತಾಲೂಕಿನಲ್ಲಿಯೇ ಅತೀ ಹೆಚ್ಚು ಮಾನವ ದಿನಗಳ ಸೃಜಿಸಿ ಉದ್ಯೋಗ ಖಾತ್ರಿ ಕಾಮಗಾರಿ ಉತ್ತಮವಾಗಿ ನಡೆಸುತ್ತಿದ್ದ ಇಲ್ಲಿನ ಗ್ರಾ.ಪಂ ಕಾರ್ಯ ಶ್ಲಾಘನೀಯವಾದದ್ದು, ಪಿಡಿಒ ಸಿದ್ರಾಮಪ್ಪ ಪಾಟೀಲ ಅವರ ಪ್ರಾಮಾಣಿಕ ಕೆಲಸದಿಂದಾಗಿ ಯೋಜನೆ ಸದ್ಬಳಕೆ ಆಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷ ಸಿದ್ದಣ್ಣ ಮಾಳಿ ಅವರಿಗೆ ಶಾಸಕ ರಾಜುಗೌಡ ಶಾಲು ಹೊದಿಸಿ ಸನ್ಮಾನಿಸಿದರು. ತಾ.ಪಂ ಆಡಳಿತ ಅಧಿಕಾರಿ ಮುಕ್ಕಣ್ಣ ಕರಿಗಾರ, ತಾ.ಪಂ ಇಒ ಅಮರೇಶ, ಶರಣಗೌಡ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next