Advertisement

ಅಕ್ರಮವಾಗಿ ರಾತ್ರಿ ವೇಳೆ ವಲಸಿಗರ ಆಗಮನ: ಬಾಂಗ್ಲಾದಿಂದ ಬಂದವರೆಂಬ ಆರೋಪ

06:05 PM Sep 30, 2021 | Team Udayavani |

 ಅರಕಲಗೂಡು: ಹಾಸನ ಜಿಲ್ಲೆಗೆ ಹೊರರಾಜ್ಯ ಮತ್ತು ಬಾಂಗ್ಲಾ ವಲಸಿಗರು ಎಗ್ಗಿಲ್ಲದೇ ಬರುತ್ತಿದ್ದು ಸ್ಥಳೀಯ ಕೂಲಿ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ. ಹಲ ವಾರು ವರ್ಷಗಳಿಂದ 100-200 ಸಂಖ್ಯೆಯಲ್ಲಿ ಕೂಲಿ ಗಾಗಿ ಬರುತ್ತಿದ್ದ ಅಸ್ಸಾಂ, ಒಡಿಶಾ ಕೂಲಿಯಾಳು ಗಳು ಇತ್ತೀಚಿನ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ತಾಲೂಕು ಒಂದರಲ್ಲೇ ಸಿಗುವಷ್ಟರ ಮಟ್ಟಿಗೆ ಜಮಾಯಿಸಿ ದ್ದಾರೆ. ಇನ್ನು ಗುತ್ತಿಗೆದಾರರೂ ಸ್ಥಳೀ ಯರನ್ನು ದೂರ ವಿಟ್ಟು ವಲಸಿಗರಿಗೆ ಆಶ್ರಯ ನೀಡುತ್ತಿದ್ದಾರೆ. ಹೀಗಾಗಿ ಸ್ಥಳೀಯರಿಗೆ ಕೂಲಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಅಡಕೆ ತುಡಿಕೆಗಳು, ಗಾರೆ ಕೆಲಸ, ತೋಟದ ಕೆಲಸ, ಶುಂಠಿ ಹಾಗೂ ತಂಬಾಕು ಬೆಳೆಗಳ ಕೆಲಸಕ್ಕೂ ಮಾಲಿಕರು, ಗುತ್ತಿಗೆದಾರರು ವಲಸಿಗರನ್ನೇ ಬಳಸಿಕೊಳ್ಳುತ್ತಿದ್ದಾರೆ.

Advertisement

ಮಧ್ಯವರ್ತಿಗಳಿಂದ ವಲಸಿಗರ ವಿತರಣೆ

ವಲಸಿಗರನ್ನು ಕರೆತರುತ್ತಿರುವ ಮಧ್ಯವರ್ತಿಗಳು ಕೂಲಿಗೆ ಬೇಡಿಕೆ ಇಟ್ಟಿರುವ ಸ್ಥಳಗಳಿಗೆ ಕರೆದೊಯ್ದು, ಆ ವ್ಯಕ್ತಿಗಳಿಂದ ಇಂತಿಷ್ಟು ಹಣ ಪಡೆದು ಜನರನ್ನು ಬಿಟ್ಟು ಹೋಗುತ್ತಿದ್ದಾರೆ. ಕೂಲಿಗೆಂದು ಬಳಸಿಕೊಳ್ಳು ತ್ತಿರುವ ಮಾಲಿಕರೂ ಇವರ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು, ಇವರನ್ನು ಅಧಿಕಾರಿಗಳೂ ಪ್ರಶ್ನಿಸದೆ ಮೌನವಹಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಒಟ್ಟಾರೆ ಅನ್ಯ ರಾಜ್ಯಗಳ ಹೆಸರೇಳಿ ಸಾವಿರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ತಾಲೂಕಿಗೆ ಪ್ರವೇಶಿ ಸುತ್ತಿರುವುದು ಸ್ಥಳೀಯರಿಗೆ ಕೂಲಿ ಸಿಗದ ಪರಿಸ್ಥಿತಿ ಒಂದೆಡೆಯಾದರೆ, ಮುಂದಿನ ದಿನಗಳಲ್ಲಿ ಎಲ್ಲಿ ಅಶಾಂತಿಗೆ ಕಾರಣವಾಗುತ್ತದೆಯೋ ಎಂಬ ಆತಂಕವೂ ಮನೆ ಮಾಡುತ್ತಿದೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಪರಿಶೀಲಿಸದಿದ್ದರೆ, ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೇ ಕಾರಣರಾಗುತ್ತಾರೆಂದು ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ತಾಲೂಕಿಗೆ ಹೊರ ರಾಜ್ಯಗಳಿಂದ ಕೂಲಿಗಾಗಿ ತಂಡೋಪತಂಡವಾಗಿ ಜನ ಬರುತ್ತಿದ್ದಾರೆ ಎಂಬ ಮಾಹಿತಿ ಸಾರ್ವಜನಿಕರಿಂದ ತಿಳಿದು ಬಂದಿದೆ. ಈ ಕೂಲಿ ಕಾರ್ಮಿಕರು ಹೊರ ರಾಜ್ಯದವರೋ ಅಥವಾ ಹೊರ ದೇಶದವರೋ ಎಂಬ ಅನುಮಾನ ಜನತೆಯಲ್ಲಿ ಮೂಡಿದೆ. ಈ ಬಗ್ಗೆ ಕೂಡಲೇ ಪೊಲೀಸ್‌, ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.
● ರೇಣುಕುಮಾರ, ತಹಶೀಲ್ದಾರ್‌

ವಾಸ ಸ್ಥಳಕ್ಕೆ ತೆರಳಿ ಪರಿಶೀಲನೆ
ಯಾವುದೇ ರಾಜ್ಯದಿಂದ ಕೂಲಿ ಕಾರ್ಮಿಕರು ಆಗಮಿಸಿದರೂ, ಚಿಕ್ಕಮಗಳೂರಿನಲ್ಲಿರುವ ನಮ್ಮ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳ ಬೇಕು. ಆದರೆ, ನಮಗೆ ಬಂದಿರುವ ಮಾಹಿತಿ ಪ್ರಕಾರ ಇಲ್ಲಿವರೆಗೂ ಯಾವುದೇ ನೋಂದಣಿ ಯಾಗಿಲ್ಲ. ಸಾರ್ವಜನಿಕವಾಗಿ ಬಂದಿರುವ ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿ ಇವರು ವಾಸಿಸುತ್ತಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ಪಡೆಯುವುದಾಗಿ ತಾಲೂಕು ಕಾರ್ಮಿಕ ಇಲಾಖಾ ಅಧಿಕಾರಿ ವಿಜಯಕುಮಾರ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next