Advertisement

ನೆರೆ ನಿರಾಶ್ರಿತರಿಗೆ ಕಿಟ್‌ ವಿತರಣೆ

12:28 PM Oct 12, 2019 | Suhan S |

ಜಮಖಂಡಿ: ಭೀಕರ ಪ್ರವಾಹದಿಂದ ತತ್ತರಿಸಿದ ಜನತೆಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯ. ಡಾ| ಬಸವಲಿಂಗ ಪಟ್ಟದೇವರ ಮಾರ್ಗದರ್ಶನದಲ್ಲಿ ನಿಮ್ಮ ಸುಖ-ದುಃಖದಲ್ಲಿ ನಾವುಗಳು ಇರುತ್ತೇವೆ. ನಿರಾಶ್ರಿತರು ಭಯ ಪಡುವ ಅವಶ್ಯಕತೆ ಇಲ್ಲವೆಂದು ಬಸವಕಲ್ಯಾಣದ ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮಿಗಳು ಹೇಳಿದರು.

Advertisement

ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ನಿರಾಶ್ರಿತರಿಗೆ ಕಿಟ್‌ ಮತ್ತು ವಿದ್ಯಾರ್ಥಿಗಳಿಗೆ ಶಾಲಾ ಉಪಕರಣಗಳನ್ನು ವಿತರಿಸಿ ಶ್ರೀಗಳು ಮಾತನಾಡಿದರು. ಉತ್ತರ ಕರ್ನಾಟಕದ ಈ ಭಾಗದ ಭೀಕರ ಅತಿವೃಷ್ಟಿ-ಅನಾವೃಷ್ಟಿ ಸಂಭವಿಸಿದೆ. ಪ್ರವಾಹದ ನಂತರ ರೈತ ಹೊಸ ದೃಷ್ಟಿಕೋನದಿಂದ ವ್ಯವಸಾಯ ಸಾಗುವಳಿ ಮಾಡಬೇಕು. ವಿವಿಧ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ನೆರೆಯನ್ನು ಸವಾಲಾಗಿ ಸ್ವೀಕರಿಸಬೇಕು. ಇದು ಪಾಪವಲ್ಲ. ಇದೊಂದು ಪುಣ್ಯವೆಂದು ಭಾವಿಸಬೇಕು. ನಮಗೆ ಹೊಸಜೀವನ ಕಟ್ಟಿಕೊಳ್ಳಲು ಪಾಠ ಕಲಿಸಿದಂತಾಗಿದೆ. ಜೀವನದಲ್ಲಿ ಬಂದದ್ದನ್ನು ಅನುಭವಿಸಲೇಬೇಕು. ಭೀಕರ ಪ್ರವಾಹದಿಂದ ಜೀವನದಲ್ಲಿ ಹೊಸ ಚಿಂತನೆ-ಯೋಜನೆಗಳನ್ನು ರೂಪಿಸಿಕೊಂಡು ಜೀವನ ರೂಪಿಸುವ ಕಾರ್ಯದಲ್ಲಿ ತೊಡಗಬೇಕು ಎಂದರು.

ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಮಾತನಾಡಿ, ಜೀವನದಲ್ಲಿ ಕಷ್ಟ-ಸುಖಗಳನ್ನು ಸರಿಸಮಾನ ಹಂಚಿಕೊಂಡು ಸಂಸಾರ ಸಾಗಿಸಬೇಕಾಗಿದೆ. ನಿಸರ್ಗ ವಿಕೋಪದಲ್ಲಿ ಸಿಕ್ಕಿರುವ ನಾವುಗಳು ಮೈಗೂಡಿಸಿಕೊಂಡು ಜೀವನ ನಡೆಸಬೇಕಾಗಿದೆ. ವರ್ಷವಿಡೀ ರೈತ ತನ್ನ ಹೊಲದಲ್ಲಿ ಶ್ರಮಪಟ್ಟು ದುಡಿಯಲು ಭಗವಂತ ಹೀಗೆ ಮಾಡಿರಬಹುದು. ಪ್ರವಾಹಕ್ಕೀಡಾದವರ ಸೇವೆ ಮಾಡುವದು ಪುಣ್ಯದ ಕೆಲಸ. ಅದನ್ನು ಪ್ರತಿಯೊಬ್ಬರು ನಿರ್ವಹಿಸಬೇಕು ಎಂದರು.

ಗುರುಬಸವ ಪಟ್ಟದೇವರು, ಗ್ರಾಪಂ ಸದಸ್ಯ ನರಸಿಂಹ ಪಾಟೀಲ, ಅಣ್ಣಪ್ಪ ಅಂಬಲಿ, ರುದ್ರಗೌಡ ಪಾಟೀಲ, ಆರ್‌.ಎಸ್‌. ಹೊನಗೌಡ ಸಹಿತ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next