Advertisement

ಕಾರ್ಮಿಕರಿಗೆ ದಿನಸಿ ವಿತರಣೆ

11:36 AM Apr 26, 2020 | Suhan S |

ಆನೇಕಲ್‌: ಚೀನಾದವರು ಕುತಂತ್ರ ದಿಂದ  ಕೋವಿಡ್ 19 ಮಾರಕ ಕಾಯಿಲೆ ಪ್ರಪಂಚದ ವ್ಯಾಪ್ತಿ ಹಬ್ಬಿದೆ ಎಂದು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ದಿನ್ನೂರು ರಾಜು ತಿಳಿಸಿದರು.

Advertisement

ಪಟ್ಟಣದ ಸುಧಾಮ ನಗರ ವ್ಯಾಪ್ತಿಯ ನಿರಾಶ್ರಿತರಿಗೆ ಫೆಡರೇಷನ್‌ ಆಫ್ ಚಂದಾಪುರ ಅಸೋಸಿಯೇಷನ್ಸ್‌ ವತಿಯಿಂದ ಆಯೋಜಿಸಿದ್ದ ದಿನಸಿ ಪದಾರ್ಥ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಪ್ರಧಾನಿ 1 ತಿಂಗಳ ಲಾಕ್‌ ಡೌನ್‌ ಮಾಡಿದ್ದು ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಹಸಿವಿನಿಂದ ಬಳಲಬಾರದು ಎಂಬ ನಿಟ್ಟಿನಲ್ಲಿ ಸುಧಾಮ ನಗರ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಬಾರಿ ಬಡವರಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗಿದ್ದು ಸಂಘ ಸಂಸ್ಥೆಗಳಿಂದಲೂ ಇದೇ ರೀತಿ ಮುಂದಿನ ದಿನಗಳಲ್ಲಿ ಸಹಾಯ ನೀಡಿದರೆ ಇನ್ನಷ್ಟು ಜನರಿಗೆ ಉಪಕಾರ ಆಗುತ್ತದೆ ಎಂದರು.

ಪೆಡರೇಷನ್‌ ಆಫ್ ಚಂದಾಪುರ ಅಸೋಸಿಯೇಷನ್ಸ್‌ ಅಧ್ಯಕ್ಷ ಜೋಸೆಫ್, ಕೋವಿಡ್ 19  ಸಂಕಷ್ಟದಿಂದ ತೊಂದರೆಗೊಳಗಾದ ಆಸಕ್ತರಿಗೆ ಚಂದಾಪುರ ಭಾಗದಲ್ಲಿರುವ ಅಪಾರ್ಟ್‌ ಮೆಂಟ್‌ ಗಳು ಬಡಾವಣೆಗಳ ಸಂಘಗಳಿಂದ ಪದಾರ್ಥ ಶೇಖರಣೆ ಮಾಡಿ ನೀಡುವ ಕೆಲಸಮಾಡಲಾಗುತ್ತಿದೆ ಎಂದರು.

ಬಿಜೆಪಿ ಮುಖಂಡ ಜನಾರ್ಧನ್‌, ಕರ್ಪೂರ ಗ್ರಾಪಂ ಸದಸ್ಯ ಗೋವಿಂದ ರಾಜು, ಆನೇಕಲ್‌ ಅಣ್ಣಯ್ಯಪ್ಪ, ಆನೇ ಕಲ್‌ ಪುಟ್ಟರಾಜು, ಬಿ. ಶ್ರೀನಿವಾಸ್‌, ಕೆ.ಮಂಜುನಾಥ್‌, ಅಶ್ವತ್ಥ, ಲಿಂಗರಾಜು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next