Advertisement

ಮಹಾರಾಷ್ಟ್ರದ ಕಾರ್ಮಿಕರಿಗೆ ಆಹಾರ ಪದಾರ್ಥ ವಿತರಣೆ

02:05 PM Apr 08, 2020 | Suhan S |

ಕೊಳ್ಳೇಗಾಲ: ತಾಲೂಕಿನ ತೇರಂಬಳ್ಳಿ ಕೆರೆಯಲ್ಲಿ ಇದ್ದಿಲು ತಯಾರಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಾರಾಷ್ಟ್ರದ ರಾಯಘಡದ 26 ಕೂಲಿ ಕಾರ್ಮಿಕರ ಸ್ಥಳಕ್ಕೆ ಜಿಪಂ ಸಿಇಒ ನಾರಾಯಣರಾವ್‌ ಮಂಗಳವಾರ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಭಾರತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ತಲಾ 5 ಕೆ.ಜಿ. ಅಕ್ಕಿ, ಗೋಧಿ ಹಿಟ್ಟು 1 ಕೆ.ಜಿ, 1 ಕೆ.ಜಿ. ಸಕ್ಕರೆ, 1 ಲೀಟರ್‌ ಎಣ್ಣೆ, ಅರ್ಧ ಕೆ.ಜಿ. ಉಪ್ಪು, ಅರ್ಧ ಕೆ.ಜಿ. ಕಾರದಪುಡಿ, ಒಂದು ಲೀಟರ್‌ ಹಾಲು ವಿತರಣೆ ಮಾಡಲಾಗಿದೆ. 14ರ ಲಾಕ್‌ ಡೌನ್‌ ಬಳಿಕ ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೂಲಿಯನ್ನೇ ಆಶ್ರಯಿಸಿ ಜಿಲ್ಲೆಗೆ ಸುಮಾರು 100 ಕಾರ್ಮಿಕರು ವಲಸೆ ಬಂದಿದ್ದು, ಅವರ ಆರೋಗ್ಯ ತಪಾಸಣೆಮಾಡಲಾಗಿದೆ. ರಾತ್ರಿ ತಂಗಲು ಸಮುದಾಯ ಭವನ, ಶಾಲಾ ಕಟ್ಟಡಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಕೆರೆಗಳನ್ನು ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ನಗರದಿಂದ ಬಂದಿರುವವರಿಗೂ ಉದ್ಯೋಗ ನೀಡುವಂತೆ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಈ ವೇಳೆ ತಾಪಂ ಇಒ ಪ್ರಕಾಶ್‌, ಕುಂತೂರು ಗ್ರಾಪಂ ಪಿಡಿಒ ಶೋಭರಾಣಿ, ವೈದ್ಯರು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next