Advertisement

ಕೋವಿಡ್ ಸಂಕಷ್ಟಕ್ಕೆ ಮಿಡಿದ ಇಂಗ್ಲೆಂಡ್ ಸಹೋದರರು:ಹನುಮನಹಳ್ಳಿಯ 100 ಕುಟುಂಬಕ್ಕೆ ಆಹಾರದ ಕಿಟ್

12:59 PM May 09, 2021 | Team Udayavani |

ಗಂಗಾವತಿ: ಕೋವಿಡ್ ರೋಗ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ರಾಜ್ಯದಲ್ಲಿ ಕರ್ಪ್ಯೂ ವಿಧಿಸಿರುವುದರಿಂದ ಜನರ ಜೀವನ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ದೂರದ ಇಂಗ್ಲೆಂಡ್ ದೇಶದ ಸಹೋದರರಿಬ್ಬರು ತಾಲೂಕಿನ ಹನುಮನಹಳ್ಳಿ ಹಾಗೂ ಮಹೆಬೂಬನಗರದ ಜನತೆಗೆ ಸಹಾಯದ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

Advertisement

ಪ್ರತಿ ವರ್ಷ ಹಂಪಿ, ಕಿಷ್ಕಿಂದಾ, ಆನೆಗೊಂದಿ ಪ್ರವಾಸಕ್ಕೆ ಆಗಮಿಸುತ್ತಿದ್ದ ಇಂಗ್ಲೆಂಡಿನ ರೋಸ್ ಮತ್ತು ಲೀಯಂ ಹಾಗೂ ಗೆಳೆಯರು ಸೇರಿ ಹನುಮನಹಳ್ಳಿಯಲ್ಲಿರುವ ಹಂಪಿ-ಆನೆಗೊಂದಿಯ ಪ್ರವಾಸಿ ಗೈಡ್  ವಿರೂಪಾಕ್ಷ ನಾಯಕ ಇವರ ಮೂಲಕ ಸಂಕಷ್ಟದಲ್ಲಿರುವ 100 ಕುಟುಂಬಗಳಿಗೆ ಅಕ್ಕಿ, ಬೇಳೆ, ಮಾಸ್ಕ್, ಸ್ಯಾನಿಟೈಜರ್ ಸೇರಿ ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ ವಿತರಿಸಿದ್ದಾರೆ.

ಪ್ರತಿ ವರ್ಷ ಹಂಪಿ ಆನೆಗೊಂದಿ ಪ್ರದೇಶಕ್ಕೆ ಪ್ರವಾಸಕ್ಕೆ ಬರುತ್ತಿದ್ದ ಇಂಗ್ಲೆಂಡಿನ ರೋಸ್ ಹಾಗೂ ಲೀಯಂ ಗೆಳೆಯರು ವಿರೂಪಾಪೂರಗಡ್ಡಿ ರೆಸಾರ್ಟ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ಇತ್ತೀಚಿಗೆ ಮೊಬೈಲ್ ನಲ್ಲಿ ಕರೆ ಮಾಡಿ ಕ್ಷೇಮ ವಿಚಾರಿಸುವ ಸಂದರ್ಭದಲ್ಲಿ ಕೋವಿಡ್ ಕರ್ಪ್ಯೂ ಬಗ್ಗೆ ತಿಳಿಸಿದಾಗ ಕೂಡಲೇ ಸ್ಪಂದಿಸಿ ಹನುಮನಹಳ್ಳಿ ಹಾಗೂ ಮಹೆಬೂಬನಗರದ 100 ಕುಟುಂಬಗಳಿಗೆ ಆಹಾರದ ಕಿಟ್ ಕೊಡುವಂತೆ ಸೂಚನೆ‌ ನೀಡಿದ್ದು, ಈಗಾಗಲೇ ಅರ್ಧ ಕುಟುಂಬಗಳಿಗೆ ಆಹಾರದ ಕಿಟ್ ತಲುಪಿಸಲಾಗಿದೆ. ಶೀಘ್ರವೆ ಉಳಿದ ಕುಟುಂಬಗಳಿಗೆ ವಿತರಿಸಲಾಗುತ್ತದೆ ಎಂದು ಪ್ರವಾಸಿ ಮಾರ್ಗದರ್ಶಿ ವಿರೂಪಾಕ್ಷ ನಾಯಕ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next