Advertisement

ಲಾಕ್ ಡೌನ್ ಕರ್ಪ್ಯೂ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಆಹಾರ ಕಿಟ್ ವಿತರಣೆ

05:57 PM May 02, 2020 | keerthan |

ಗಂಗಾವತಿ: ಕೋವಿಡ್-19 ಹರಡದಂತೆ ಲಾಕ್ ಡೌನ್ ಮಾಡಿರುವ ಕಾರಣ ಆಟೋಚಾಲಕರ ಬದುಕು ಸಂಕಷ್ಟದಲ್ಲಿದ್ದು ಕುಟುಂಬ ನಿರ್ವಾಹಣೆ ಕಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಹೇಳಿದರು.

Advertisement

ಶನಿವಾರದಂದು ಕಿನ್ನಾಳ ಡಾ.ಬಿ.ಆರ್.ಅಂಬೇಡ್ಕರ್ ಆಟೋ ಚಾಲಕರ ಸಂಘಕ್ಕೆ ಸುಮಾರು 150ಕ್ಕೂ ಹೆಚ್ಚು ಜನರಿಗೆ ಆಹಾರ ಕೀಟಗಳನ್ನು  ಹಗೂ ಮಾಸ್ಕಗಳನ್ನು ಆಹಾರ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.

ಕೋವಿಡ್-19 ನಿರ್ಮೂಲನೆಗಾಗಿ ಆರೋಗ್ಯ, ಪೊಲೀಸ್, ಪೌರ ಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯಕರ್ತರು, ಮಾಧ್ಯಮದವರು ಸೇರಿದಂತೆ ಇತರರು ತಮ್ಮ ಪ್ರಾಣ ಪಣಕ್ಕಿಟ್ಟು ಜನರನ್ನು ರಕ್ಷಿಸುತ್ತಿದ್ದಾರೆ, ಅವರ ಸೇವೆ ಅವಿಸ್ಮರಣೀಯವಾಗಿದೆ. ಕೋವಿಡ್-19 ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪೇರುದ್ರ ಸ್ವಾಮಿ, ನಗರಸಭೆ ಸದಸ್ಯ ಉಮೇಶ ಸಿಂಗನಾಳ, ಬಿಜೆಪಿ ಯುವ ಮುಖಂಡ ನವೀನ, ಆಟೋ ಚಾಲಕರ ಸಂಘದ ಅಧ್ಯಕ್ಷ ವಿರೇಶ ಜೋಗಿ, ಮೌನೇಶ ಕಿನ್ನಾಳ, ರವಿಕುಮಾರ ಯರೇಸ್ವಾಮಿ ಬಸವರಾಜ ರಾಘವೇಂದ್ರ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next