Advertisement

ಆಹಾರ ಸಾಮಗ್ರಿ ಕಿಟ್‌ ವಿತರಣೆ

11:12 AM May 12, 2020 | Suhan S |

ಬನಹಟ್ಟಿ: ಕೋವಿಡ್‌-19 ನಂತಹ ಸಂದರ್ಭದಲ್ಲಿ ಆಯಾ ಸಮಾಜಗಳು ತಮ್ಮ ಸಮಾಜದ ಕಡುಬಡವರನ್ನು ಗುರುತಿಸಿ ಅವರಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ಸ್ಥಳೀಯ ಮಂಗಳವಾರ ಪೇಟೆ ಹಟಗಾರ ದೈವ ಮಂಡಳ ಬನಹಟ್ಟಿ ವತಿಯಿಂದ ಲಾಕ್‌ಡೌನ್‌ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಹಟಗಾರ ಸಮಾಜ ಬಾಂಧವರು ಹಾಗೂ ಇತರ ಹಿಂದುಳಿದ ವರ್ಗದ ಜನರಿಗೆ ಉಚಿತವಾಗಿ 400 ಆಹಾರ ಸಾಮಗ್ರಿಗಳ ಕಿಟ್‌ ವಿತರಿಸಿ ಅವರು ಮಾತನಾಡಿದರು.

ಈ ವೇಳೆ ದೈವ ಮಂಡಳ ಅಧ್ಯಕ್ಷ ರಾಜಶೇಖರ ಮಾಲಾಪುರ, ಚೇರ್‌ಮನ್‌ ಶ್ರೀಶೈಲಪ್ಪ ದಭಾಡಿ, ಉಪಾಧ್ಯಕ್ಷ ದಾನಪ್ಪ ಹುಲಜತ್ತಿ, ಸದಸ್ಯರಾದ ಕಾಡು ಮಹಾಜನ, ಬಸವರಾಜ ಜಾಡಗೌಡ, ಸುಭಾಷ ಜಾಡಗೌಡ, ಪಂಡಿತ ಹಣಗಂಡಿ, ಪುಟ್ಟು ಹಳಾಳ, ಈರಪ್ಪ ಕೊಣ್ಣೂರ, ಶಿವಾನಂದ ಕುಳ್ಳಿ, ಡಾ| ಪಂಡಿತ ಪಟ್ಟಣ, ಶ್ರೀಪಾದ ಬಾಣಕಾರ, ಶಂಕರ ಬಾಡಗಿ, ಪಂಡಿತ ಪಟ್ಟಣ, ಶಿವರುದ್ರ ಮಾಲಾಪುರ, ಎಂ.ಜಿ. ಕೆರೂರ, ಸುರೇಶ ಕೋಲಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next