Advertisement

ಆಸ್ಪತ್ರೆಗೆ 50ಲಕ್ಷ ಮೌಲ್ಯದ ಉಪಕರಣ ವಿತರಣೆ

10:46 AM Oct 22, 2021 | Team Udayavani |

ಜೇವರ್ಗಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅಲ್ಟ್ರಾಟೆಕ್‌ ಕಮ್ಯುನಿಟಿ ವೆಲ್‌ಫೇರ್‌ ಫೌಂಡೇಶನ್‌ ವತಿಯಿಂದ 50 ಲಕ್ಷ ರೂ. ಮೌಲ್ಯದ ಕೋವಿಡ್‌-19 ಸೋಂಕಿಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ನೀಡಿರುವುದಕ್ಕೆ ಶಾಸಕ ಡಾ| ಅಜಯಸಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಅಲ್ಟ್ರಾಟೆಕ್‌ ಕಮ್ಯುನಿಟಿ ವೆಲ್‌ಫೇರ್‌ ಫೌಂಡೇಶನ್‌ ವತಿಯಿಂದ ಆಯೋಜಿಸಲಾಗಿದ್ದ ವೈದ್ಯಕೀಯ ಉಪಕರಣಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ಅಧಿಕಾರಿಗಳು, ಆಶಾ, ಅಂಗನವಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಜೀವನವನ್ನು ಪಣಕ್ಕಿಟ್ಟು ಶ್ರಮಿಸಿದ್ದರ ಫಲವಾಗಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, 2ನೇ ಅಲೆ ಹೇಗೆ ನಿಯಂತ್ರಿಸಲಾಯಿತೋ ಅದೇ ರೀತಿ 3ನೇ ಅಲೆ ತಡೆಗಟ್ಟಲು ಶ್ರಮಿಸಬೇಕು. ಜೇವರ್ಗಿ-ಯಡ್ರಾಮಿ ಅವಳಿ ತಾಲೂಕಿನಲ್ಲಿ ಕೊರೊನಾ ವಾರಿಯರ್ಸ್‌ ಹಗಲಿರುಳು ಶ್ರಮವಹಿಸಿದರ ಪರಿಣಾಮ 2 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಲಸಿಕಾಕರಣ ಈ ಕ್ಷೇತ್ರದಲ್ಲಿ ನಡೆದಿದೆ. ಆದರೂ ಸೋಂಕಿನ ಬಗ್ಗೆ ಜನ ನಿರ್ಲಕ್ಷ್ಯತನ ತೋರಬಾರದು. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರುವುದರ ಜತೆಗೆ ನಮ್ಮ ಮನೆ ಸುತ್ತ ಸ್ವತ್ಛತೆ ಕಾಪಾಡುವುದರ ಮೂಲಕ ಕೊರೊನಾ ಸೋಂಕು ತಡೆಗಟ್ಟಬೇಕು ಎಂದರು.

ಇದನ್ನೂ ಓದಿ: ಕಟ್ಟಡ ಕುಸಿತ ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು

Advertisement

ಅಲ್ಟ್ರಾಟೆಕ್‌ ಫೌಂಡೇಶನ್‌ ವತಿಯಿಂದ ಜೇವರ್ಗಿ ಆಸ್ಪತ್ರೆಗೆ ಅಗತ್ಯವಿರುವ 2 ವೆಂಟಿಲೇಟರ್‌, 2 ಎಚ್‌ ಎಫ್‌ಎಂಸಿ, 30 ಮಂಚ, ಗಾದಿ, ಹೊದಿಕೆ, ಬೆಡ್‌ ಸೈಡ್‌ ಲಾಕರ್‌, ಐವಿ ಸ್ಟ್ಯಾಂಡ್‌, ಪಲ್ಸ್‌ ಆಕ್ಸಿಮೀಟರ್‌, 6 ಇಸಿಜಿ ಮಶೀನ್‌ ಸೇರಿದಂತೆ 50 ಲಕ್ಷ ರೂ. ಮೌಲ್ಯದ ಅಗತ್ಯ ವೈದ್ಯಕೀಯ ಉಪಕರಣಗಳು ನೀಡಿದ್ದು, ಫೌಂಡೇಶನ್‌ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಅಲ್ಟ್ರಾಟೆಕ್‌ ಕಮ್ಯುನಿಟಿ ವೆಲ್‌ಫೇರ್‌ ಫೌಂಡೇಶನ್‌ನ ಹಿರಿಯ ಕಾರ್ಯನಿರ್ವಾಹಕ ಅದ್ಯಕ್ಷ ಸೂರ್ಯ ವೆಲ್ಲಾರಿ ಮಾತನಾಡಿ, ಜೇವರ್ಗಿ ಆಸ್ಪತ್ರೆಯಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ಬಗ್ಗೆ ಆರೋಗ್ಯಾಧಿಕಾರಿ ಅವರಿಂದ ಮಾಹಿತಿ ಪಡೆದು, ನಮ್ಮ ಫೌಂಡೇಶನ್‌ ವತಿಯಿಂದ ಅಂದಾಜು 50 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣ ವಿತರಿಸಲಾಗಿದೆ. ತಾಲೂಕಿನ ಜನರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ, ಅಲ್ಟ್ರಾಟೆಕ್‌ ಕಮ್ಯುನಿಟಿ ವೆಲ್‌ಫೇರ್‌ ಫೌಂಡೇಶನ್‌ನ ನಾರಾಯಣ, ರಾಜಶ್ರೀ ಸಿಮೆಂಟ್‌ನ ಮುಖ್ಯ ಆರೋಗ್ಯ ಅಧಿಕಾರಿ ಡಾ| ಮೂಸ್‌ನಾಯ, ಅಬ್ದುಲ್‌ ನಜೀರ್‌, ಡಾ| ರಾಘವೇಂದ್ರ ಕುಲಕರ್ಣಿ, ಡಾ| ಶಿವಶಂಕರ, ಡಾ| ವಿಜಯ ಪಾಟೀಲ, ಡಾ| ಶಯನಾಜ್‌, ಡಾ| ಗೀತಾ, ಡಾ| ಅಜೀಜ್‌, ಶರಣು ಭೂಸನೂರ, ತಿಪ್ಪಣ್ಣ ಬಳಬಟ್ಟಿ, ಮಹಿಮೂದ್‌ ನೂರಿ, ಬಸಣ್ಣ ಸರ್ಕಾರ, ಉಸ್ಮಾನ್‌ಸಾಬ, ಗುಂಡು ಗುತ್ತೇದಾರ, ಮರೆಪ್ಪ ಸರಡಗಿ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next