Advertisement

ಅನಾಥಾಶ್ರಮಕ್ಕೆ ದಿನೋಪಯೋಗಿ ಪರಿಕರಗಳ ವಿತರಣೆ

06:02 PM Sep 30, 2019 | Suhan S |

ಮುಂಬಯಿ, ಸೆ. 29: ಬಂಟರ ಸಂಘ ಮುಂಬಯಿ ಇದರ ಕುರ್ಲಾ-ಭಾಂಡುಪ್‌ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಸಾಂಸ್ಕೃತಿಕ, ವೈದ್ಯಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಾ ಸಮಾಜಮುಖೀಯಾಗಿ ಗುರುತಿಸಿಕೊಂಡಿದ್ದು, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾದ ಸಿಎ ವಿಶ್ವನಾಥ ಶೆಟ್ಟಿ ಅವರ ಉಪಸ್ಥಿತಿಯೊಂದಿಗೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮ್ಯಾ ಉದಯ ಶೆಟ್ಟಿ ಇವರ ನೇತೃತ್ವದಲ್ಲಿ ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳ ಸಹಕಾರದೊಂದಿಗೆ ಸೆ. 22ರಂದು ವಿಕ್ರೋಲಿ ಪೂರ್ವದ ಠಾಗೋರ್‌ ನಗರದ ಗುಡ್‌ ಸಮರ್ಥನ್‌ ಮಿಷನ್‌ ವಿಜಯಾಶ್ರಮಯಕ್ಕೆ ಭೇಟಿ ನೀಡಿತು.

Advertisement

ಈ ಅನಾಥಶ್ರಮವು 1970ರಲ್ಲಿ ಸ್ಥಾಪನೆಯಾಗಿದ್ದು ನಿರ್ಗತಿಕ ವೃದ್ದರಿಂದ ಅನಾಥ ಮಕ್ಕಳು ಸೇರಿದಂತೆ ಸುಮಾರು 80 ಜನರಿದ್ದು ಇವರ ಸೇವೆಯನ್ನು ಆಶ್ರಮವು ಶ್ರದ್ಧೆಯಿಂದ ಮಾಡುತ್ತಿದೆ. ಬದುಕಿನಲ್ಲಿ ಸಾರ್ಥಕತೆ ಕಾಣಬೇಕಾದರೆ ಬಡವರ, ದೀನರ, ಅಶಕ್ತರ ಸೇವೆ ಮಾಡಬೇಕು, ಅವರ ಕಣ್ಣೀರೊರೆಸುವ ಕಾರ್ಯ ಮಾಡಿ ಅವರ ಮೊಗದಲ್ಲೂ ಸಂತಸ ಭರಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು ಎನ್ನುವ ಮಾತಿಗನುಗುಣವಾಗಿ ಅನಾಥಾಶ್ರಮಕ್ಕೆ ಭೇಟಿ ನೀಡಿ ಮಕ್ಕಳು ಹಾಗೂ ವೃದ್ಧರಿಗೆ ಆ ದಿನದ ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಹಿಳಾ ವಿಭಾಗದ ವತಿಯಿಂದ ಆಯೋಜಿಸಲಾಗಿತ್ತು.

ಮಾತ್ರವಲ್ಲದೆ ಅವರಿಗೆ ಅವಶ್ಯವಿರುವ ದಿನೋಪಯೋಗಿ ಆಹಾರೋಪಯೋಗಿ ಜತೆಗೆ ಬಟ್ಟೆ ಬರೆ, ಬೆಡ್‌ ಶೀಟ್‌ಗಳನ್ನು

ನೀಡಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸರೋಜಾ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಅಮೃತಾ ಶೆಟ್ಟಿ, ಕೋಶಾಧಿಕಾರಿ ಡಾ| ಪಲ್ಲವಿ ಶೆಟ್ಟಿ, ಜತೆ ಕಾರ್ಯದರ್ಶಿ ಸರೋಜಿನಿ ಶೆಟ್ಟಿ, ಜತೆ ಕೋಶಾಧಿಕಾರಿ ವೀಣಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷರಾದ ತಾರಾನಾಥ ಶೆಟ್ಟಿ, ಸೇರಿದಂತೆ, ಉದಯ ಎಲ್. ಶೆಟ್ಟಿ ಪೇಜಾವರ, ವಿನುತಾ ಶೆಟ್ಟಿ, ಶರ್ಮಿಳಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಜ್ಯೋತಿ ಶೆಟ್ಟಿ, ಶಾಂತಾ ಶೆಟ್ಟಿ, ನಿರ್ಮಲಾ ಶೆಟ್ಟಿ, ವಿಕಾಸ್‌ ರೈ, ರಿತೇಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next