Advertisement

ಸಿಎಂ ಪರಿಹಾರ ನಿಧಿಯಿಂದ ಚೆಕ್‌ ವಿತರಣೆ

04:45 PM Aug 04, 2019 | Team Udayavani |

ಬನಹಟ್ಟಿ: ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ರಬಕವಿ-ಬನಹಟ್ಟಿ ತಾಲೂಕಿನ ಬಹಳಷ್ಟು ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ನಗರದ ಶಾಸಕರ ಕಾರ್ಯಾಲಯದಲ್ಲಿ ಒಟ್ಟು 22 ಫಲಾನುಭವಿಗಳಿಗೆ 6 ಲಕ್ಷ ರೂ.ವರೆಗೆ ಪರಿಹಾರ ಚೆಕ್‌ ವಿತರಿಸಿ ಮಾತನಾಡಿದ ಅವರು, ಅನಾರೋಗ್ಯದಿಂದ ಸಾಕಷ್ಟು ಜನರು ಬಳಲುತ್ತಿದ್ದು, ಅಂಥವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣದ ಚೆಕ್‌ ಸಹಕಾರಿಯಾಗಲಿದೆ. ಈ ಹಿಂದೆ ಜನರಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮಾಹಿತಿ ಕೊರತೆಯಿತ್ತು. ರೋಗಗಳಿಂದ ಬಳಲುತ್ತಿರುವವರು ನಮ್ಮೆ ಕಚೇರಿಗೆ ಅಗತ್ಯ ದಾಖಲಾತಿಗಳನ್ನು ನೀಡಿದರೆ ಸಿಎಂ ಪರಿಹಾರ ನಿಧಿಯಿಂದ ಚೆಕ್‌ ಬರುವಂತೆ ಮಾಡಲಾಗುವುದು ಎಂದು ತಿಳಿಸಿದರು. ಪ್ರಭಾಕರ ಮೊಳೇದ, ಶಂಕರ ಹುನ್ನೂರ, ಸದಾಶಿವ ಸಂತಿ, ಪಾಂಡು ಹಿಪ್ಪರಗಿ, ಮನೋಹರ ಮುತಿ, ಶಿವು ಹುಣಶ್ಯಾಳ, ಕಾಡಪ್ಪ ಕೊಣ್ಣೂರ, ರಾಜು ಕೋಲಾರ, ಕಾಡಪ್ಪ ಬಿಳ್ಳೂರ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next