Advertisement

ಉಡುಪಿಗೆ 2 ಸಾವಿರ ಪಿಪಿಇ ಕಿಟ್‌ ವಿತರಣೆ

11:19 PM Jun 03, 2020 | Sriram |

ಉಡುಪಿ: ಉಡುಪಿ ಜಿಲ್ಲೆಗೆ 2 ಸಾವಿರ ಪಿಪಿಇ ಕಿಟ್‌ಗಳನ್ನು ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾಣ ಕೆ. ಸುಧಾಕರ್‌ ಅವರು ಭರವಸೆ ನೀಡಿದರು.

Advertisement

ಬುಧವಾರ ಅವರು ಮಣಿಪಾಲ ವಿ.ವಿ., ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್‌- 19 ಚಿಕಿತ್ಸೆಗೆ ಸಂಬಂಧಿಸಿ ಅಧಿಕಾರಿಗಳು, ಆಸ್ಪತ್ರೆಯ ವೈದ್ಯರೊಂದಿಗೆ ನಡೆಸಿದ ಪ್ರಗತಿ ಪರಿಶೀಲನ ಸಭೆಯಲ್ಲಿ ಹೇಳಿದರು. ಪಿಪಿಇ ಕಿಟ್‌ಗಳನ್ನು ನೀಡುವಂತೆ ಶಾಸಕ ಕೆ.ರಘುಪತಿ ಭಟ್‌ ಅವರು ಮಾಡಿದ ಮನವಿಗೆ ಸಚಿವರು ಸ್ಪಂದಿಸಿದರು.

ಡಾಣ ಟಿ.ಎಂ.ಎ. ಪೈ ಕೋವಿಡ್‌-19 ಆಸ್ಪತ್ರೆಗೆ ಆವಶ್ಯವಿರುವ ಎಲ್ಲ ವೈದ್ಯಕೀಯ ಸವಲತ್ತು ಒದಗಿಸಲು ಬದ್ಧ ಎಂದರು. ಮಾಹೆಯ ಸಹಕುಲಾಧಿಪತಿ ಡಾ. ಎಚ್‌.ಎಸ್‌. ಬಲ್ಲಾಳ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ವಿ.ವಿ. ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಬಾರದೆ ಮನೆಗೆ ಕಳುಹಿಸಿದ್ದೇಕೆ?
ಕ್ವಾರಂಟೈನ್‌ನಲ್ಲಿ ಇದ್ದವರನ್ನು ವರದಿ ಬಾರದೆ ಮನೆಗೆ ಕಳುಹಿಸಿರುವ ಘಟನೆಗೆ ಸಂಬಂಧಿಸಿ ಅಧಿಕಾರಿಗಳನ್ನು ಶಾಸಕ ಕೆ. ರಘುಪತಿ ಭಟ್‌ ಸಚಿವರು ನಡೆಸಿದ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಹೊರ ದೇಶ, ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್‌ಗೆ ಒಳಗಾದವರ ಗಂಟಲ ದ್ರವ ಪರೀಕ್ಷಾ ವರದಿ ಬಾರದೆ ಮನೆಗೆ ಕಳುಹಿಸಿದ್ದು ಸರಿಯಲ್ಲ. ಮನೆಗೆ ಹೋದ ಅನಂತರ ಕೆಲವರಿಗೆ ಕೋವಿಡ್‌-19 ಪಾಸಿಟಿವ್‌ ಬಂದಿರುವುದರಿಂದ ಮನೆಮಂದಿಯಲ್ಲದೆ ಸ್ಥಳೀಯರು ಕೂಡ ಆತಂಕಕ್ಕೀಡಾಗಿದ್ದಾರೆ. ಜಿಲ್ಲೆಯ ಜನರ ಕಾಳಜಿಯಿಂದ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದ್ದು, ಏಕಾಏಕಿ ಅಧಿಕಾರಿಗಳ ಈ ನಿರ್ಧಾರದಿಂದ ಜನತೆ ಹೊರಬರಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಜನತೆ ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next