Advertisement

54 ಫಲಾನುಭವಿಗಳಿಗೆ 12 ಲಕ್ಷ ಸಿಎಂ ಪರಿಹಾರ ನಿಧಿ ವಿತರಣೆ

05:13 PM Dec 15, 2019 | Suhan S |

ಕುಮಟಾ: ಅರ್ಹ 38 ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ 12 ಲಕ್ಷ ರೂ.ಗಳ ಚೆಕ್‌ ಗಳನ್ನು ಶಾಸಕ ದಿನಕರ ಶೆಟ್ಟಿ ತಹಶೀಲ್ದಾರ್‌ ಕಚೇರಿ ಆವಾರದಲ್ಲಿ ವಿತರಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿ ಯ ಚೆಕ್‌ಗಳನ್ನು ವಿತರಿಸಲಾಗಿದೆ. ಒಟ್ಟೂ 54 ಫಲಾನುಭವಿಗಳನ್ನು ಈಗ ಆಯ್ಕೆ ಮಾಡಲಾಗಿದ್ದು, ಇನ್ನೂ 30 ರಿಂದ40 ಫಲಾನುಭವಿಗಳಿಗೆ ಚೆಕ್‌ಗಳನ್ನು ವಿತರಿಸಬೇಕಾಗಿದ್ದು, 1 ವಾರದೊಳಗಡೆ ಹಸ್ತಾಂತರಿಸಲಾಗುವುದು ಎಂದರು.

Advertisement

ಪ್ರಸಕ್ತ ಸಾಲಿನಲ್ಲಿ ಭೀಕರವಾಗಿ ಸುರಿದ ಮಳೆಯಿಂದ ಮೀನುಗಾರರ ಬಲೆ, ದೋಣಿಗಳು ಸೇರಿದಂತೆ ಇನ್ನಿತರ ಪರಿಕರಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಅವುಗಳಿಗೂ ಯೋಗ್ಯ ಪರಿಹಾರ ಧನವನ್ನು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಂಜೂರಿ ಮಾಡಿದೆ. ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಮೀನುಗಾರರ ಯಾದಿ ಸಿದ್ಧಪಡಿಸಲು ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದ್ದು, ಈ ಪರಿಹಾರ ಮೊತ್ತವನ್ನೂ ಸಹ ಒಂದು ವಾರದೊಳಗೆ ವಿತರಿಸಲು ಪ್ರಯತ್ನಿಸುತ್ತೇನೆ ಎಂದರು.

ಕ್ಷೇತ್ರಾದ್ಯಂತ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಹದಗೆಟ್ಟ ರಸ್ತೆಯ ಮರು ದುರಸ್ತಿ ಕಾರ್ಯ ಪ್ರಾರಂಭವಾಗಿದ್ದು, ಆದಷ್ಟು ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು. ಉಪ ವಿಭಾಗಾಧಿಕಾರಿ ಎಂ.ಅಜಿತ್‌, ತಹಶೀಲ್ದಾರ್‌ ಮೇಘರಾಜ ನಾಯ್ಕ, ತಾ.ಪಂ ಇಒ ಸಿ.ಟಿ. ನಾಯ್ಕ, ಜಿ.ಪಂ ಸದಸ್ಯ ಗಜಾನನ ಪೈ, ತಾ.ಪಂ ಸದಸ್ಯ ಮಹೇಶ ಶೆಟ್ಟಿ, ಜಗನ್ನಾಥ ನಾಯ್ಕ, ಪುರಸಭಾ ಸದಸ್ಯರಾದ ಸಂತೋಷ ನಾಯ್ಕ, ಮೋಹಿನಿ ಗೌಡ, ಶೈಲಾ ಗೌಡ, ಸೂರ್ಯಕಾಂತ ಗೌಡ, ಮಹೇಶ ನಾಯ್ಕ, ಪಲ್ಲವಿ ಮಡಿವಾಳ, ಸಂತೇಗುಳಿ ಗ್ರಾ.ಪಂ ಸದಸ್ಯ ವಿನಾಯಕ ಭಟ್ಟ, ಬಾಡ ಗ್ರಾ.ಪಂ ಸದಸ್ಯ ಹರೀಶ ನಾಯ್ಕ, ಬಿಜೆಪಿ ಮಂಡಳಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪಕ್ಷದ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next